Headlines

‘ಭಾರತವನ್ನು ಕಳೆದುಕೊಂಡಂತೆ ಅನಿಸಿದೆ..’ ಬೇಸರದಿಂದಲೇ ಟ್ವೀಟ್‌ ಮಾಡಿದ ಡೊನಾಲ್ಡ್‌ ಟ್ರಂಪ್‌! | Donald Trump Truth Social Tweet India Russia China San

‘ಭಾರತವನ್ನು ಕಳೆದುಕೊಂಡಂತೆ ಅನಿಸಿದೆ..’ ಬೇಸರದಿಂದಲೇ ಟ್ವೀಟ್‌ ಮಾಡಿದ ಡೊನಾಲ್ಡ್‌ ಟ್ರಂಪ್‌! | Donald Trump Truth Social Tweet India Russia China San



‘ಭಾರತವನ್ನು ಕಳೆದುಕೊಂಡಂತೆ ಅನಿಸಿದೆ..’ ಬೇಸರದಿಂದಲೇ ಟ್ವೀಟ್‌ ಮಾಡಿದ ಡೊನಾಲ್ಡ್‌ ಟ್ರಂಪ್‌! | Donald Trump Truth Social Tweet India Russia China San

ಟ್ರಂಪ್‌ ಅವರ ಟ್ರುಥ್‌ ಸೋಶಿಯಲ್‌ ಪೋಸ್ಟ್‌ನಲ್ಲಿ ಭಾರತ ಮತ್ತು ರಷ್ಯಾ ಚೀನಾದತ್ತ ವಾಲುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಹೇಳಿಕೆ ಹೊರಬಿದ್ದಿದೆ. 

ನವದೆಹಲಿ (ಸೆ.5): ಭಾರತ ಹಾಗೂ ಅಮೆರಿಕ ನಡುವಿನ ಸಂಬಂದ ಹಿಂದೆಂದೂ ಕಾಣದಷ್ಟು ಕೆಳಮಟ್ಟಕ್ಕೆ ಇಳಿದಿದೆ ಎನ್ನುವುದು ಬಹುತೇಕ ನಿಶ್ಚಯವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಟ್ರುಥ್‌ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ಭಾರತ ಹಾಗೂ ರಷ್ಯಾ ದೇಶವನ್ನು ಚೀನಾಕ್ಕೆ ಕಳೆದುಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ಕೆಲವು ದಿನಗಳ ನಂತರ, ಡೊನಾಲ್ಡ್ ಟ್ರಂಪ್ ಶುಕ್ರವಾರ ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಸಂಬಂಧಗಳು ಕುಸಿದಿವೆ ಎನ್ನುವ ಅರ್ಥದ ದೊಡ್ಡ ಸುಳಿವು ನೀಡಿದ್ದಾರೆ. ಅವರು ಅಮೆರಿಕವು ಭಾರತ ಮತ್ತು ರಷ್ಯಾವನ್ನು ಕರಾಳ ಚೀನಾಕ್ಕೆ ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಚೀನಾದ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಟಿಯಾಂಜಿನ್ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಹಲವಾರು ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದ್ದಾರೆ. ಈ ಮೂವರು ನಾಯಕರ ನಡುವಿನ ಸೌಹಾರ್ದತೆಯು ಸಂದೇಶವನ್ನು ರವಾನಿಸಿತು. ಇದನ್ನು ಅನೇಕರು “ಒಂದು ಮಹತ್ವದ ತಿರುವು” ಎಂದು ಕರೆದರು ಮತ್ತು ಅಮೆರಿಕ ಅಧ್ಯಕ್ಷರು ನಡೆಸಿದ ಸುಂಕ ಯುದ್ಧದ ನಡುವ ಇದು ನ್ಯೂ ವರ್ಲ್ಡ್‌ ಆರ್ಡರ್‌ ಎಂದು ಪರಿಗಣಿಸಿದ್ದಾರೆ.

“ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕತ್ತಲೆಯಾದ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ! ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್,” ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ, ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕಳೆದ ತಿಂಗಳು ಟ್ರಂಪ್ ನವದೆಹಲಿಯ ಮೇಲೆ ವಿಧಿಸಿದ ಶೇಕಡಾ 50 ರಷ್ಟು ಸುಂಕದ ನಂತರ ಭಾರತ-ಯುಎಸ್ ದ್ವಿಪಕ್ಷೀಯ ಸಂಬಂಧಗಳು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ಕಂಡಿವೆ.

 



Source link

Leave a Reply

Your email address will not be published. Required fields are marked *