ಎಷ್ಟು ಭಾಷೆಗಳಲ್ಲಿ ರಿಲೀಸ್, ಅದೆಷ್ಟು ಕಲೆಕ್ಷನ್ ಟಾರ್ಗೆಟ್‌? 'ಕಾಂತಾರ ಪ್ರೀಕ್ವೆಲ್ ಪ್ರಮೋಶನ್ ಯಾಕಿಲ್ಲ?

ಎಷ್ಟು ಭಾಷೆಗಳಲ್ಲಿ ರಿಲೀಸ್, ಅದೆಷ್ಟು ಕಲೆಕ್ಷನ್ ಟಾರ್ಗೆಟ್‌? 'ಕಾಂತಾರ ಪ್ರೀಕ್ವೆಲ್ ಪ್ರಮೋಶನ್ ಯಾಕಿಲ್ಲ?

ಕಾಂತಾರ ಚಾಪ್ಟರ್-1 ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 2 ಕ್ಕೆ ಚಿತ್ರ ರಿಲೀಸ್ ಆಗಲಿದ್ದು, ಬೇರೆ ಬೇರೆ ಭಾಷೆಗಳಲ್ಲಿ ಚಿತ್ರದ ಬ್ಯುಸಿನೆಸ್ ಭರದಿಂದ ನಡೀತಾ ಒದೆ. ಕಾಂತಾರ ಚಾಪ್ಟರ್-1 ಮೂವಿ 7 ಭಾಷೆಗಳಲ್ಲಿ ತೆರೆಗೆ ಬರಲಿದ್ದು ಸಾವಿರ ಕೋಟಿ ಬ್ಯುಸಿನೆಸ್ ಮಾಡುವ ಟಾರ್ಗೆಟ್ ಇಟ್ಟುಕೊಂಡಿದೆ.

ಕಾಂತಾರ ಚಾಪ್ಟರ್-1 ರಿಲೀಸ್​ ಕೌಂಟ್​​ಡೌನ್ ಸ್ಟಾರ್ಟ್; 7 ಭಾಷೆಗಳಲ್ಲಿ ರಿಲೀಸ್.. ಸಾವಿರ ಕೋಟಿ ಟಾರ್ಗೆಟ್..!ಯೆಸ್ ಸಿನಿಪ್ರಿಯರು ದೊಡ್ಡ ಕುತೂಹಲದಿಂದ ಕಾಯ್ತಾ ಇರೋ ಕಾಂತಾರ ಚಾಪ್ಟರ್-1 ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ರಿಷಬ್ ಶೆಟ್ರು ಕೊನೆ ಹಂತದ ವರೆಗೂ ಸಿನಿಮಾವನ್ನ ತಿದ್ದಿ ತೀಡಿ ಅಂತಿಮ ಸ್ಪರ್ಶ ಕೊಟ್ಟಿದ್ದಾರೆ. ಹೊಂಬಾಳೆ ಫಿಲಂಸ್ ವಿಶ್ವದಾದ್ಯಂತ ಸಿನಿಮಾದ ಬಿಡುಗಡೆಗೆ ತಯಾರಿ ಮಾಡಿಕೊಳ್ತಾ ಇದೆ. ಅನೇಕ ಪ್ರೊಡಕ್ಷನ್ ಹೌಸ್​ಗಳ ಜೊತೆಗೆ ಒಪ್ಪಂದಗಳು ಆಗ್ತಾ ಇದ್ದು ಬೇರೆ ಬೇರೆ ಭಾಗಗಳ ವಿತರಕರು ಸಿನಿಮಾವನ್ನ ದಾಖಲೆಯ ಹಣ ಕೊಟ್ಟು ಖರೀಧಿ ಮಾಡ್ತಾ ಇದ್ದಾರೆ.

ದುಬೈನ ಫಾರ್​ಫಿಲ್ಸ್ಮ್  ಈ ಕಾಂತಾರ ಚಾಪ್ಟರ್-1 ನ ವಿದೇಶಗಳಲ್ಲಿ ಬಿಡುಗಡೆ ಮಾಡಲಿದೆ. ಇನ್ನೂ ನಟ ಪ್ರಥ್ವಿರಾಜ್ ಸುಕುಮಾರನ್ ಒಡೆತನದ ಪ್ರಥ್ವಿರಾಜ್ ಪ್ರೊಡಕ್ಷನ್ಸ್ ಕೇರಳದಲ್ಲಿ ಸಿನಿಮಾ ರಿಲೀಸ್ ಮಾಡಲಿದೆ. ಅನಿಲ್ ತದಾನಿ ಒಡೆತನದ ಎಎ ಫಿಲ್ಮ್ಸ್ ಉತ್ತರ ಭಾರತ ಮತ್ತು ನೇಪಾಳದಲ್ಲಿ ಚಿತ್ರವನ್ನ ರಿಲೀಸ್ ಮಾಡ್ತಾ ಇದೆ. ಒಟ್ಟು ಏಳು ಭಾಷೆಗಳಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದ್ದು ಸಾವಿರ ಕೋಟಿ ಬಾಕ್ಸಾಫೀಸ್ ಗಳಿಕೆ ಮಾಡೋ ಟಾರ್ಗೆಟ್ ಸೆಟ್ ಆಗಿದೆ.

ಅಸಲಿಗೆ ಕನ್ನಡದಲ್ಲಿ ನೂರು ಕೋಟಿ ಬ್ಯುಸಿನೆಸ್ಸೇ ಕಷ್ಟ ಅಂತಿದ್ದ ಕಾಲದಲ್ಲಿ 2022ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್-2 ವರ್ಲ್ಡ್ ವೈಡ್ 1250 ಕೋಟಿ ಗಳಿಸಿತ್ತು. ಕೆಜಿಫ್ ಚಾಪ್ಟರ್ -2 ಬೆನ್ನಲ್ಲೇ ಬಂದ ಕಾಂತಾರ 450 ಕೋಟಿ ಗಳಿಸಿತ್ತು. ಇವೆರಡನ್ನೂ ನಿರ್ಮಾಣ ಮಾಡಿದ್ದು ಹೊಂಬಾಳೆ ಫಿಲಂಸ್. ಇದೀಗ ಕಾಂತಾರ ಚಾಪ್ಟರ್-1 ಮೇಲಿರೋ ನಿರೀಕ್ಷೆ ಹೇಗಿದೆ ಅಂದ್ರೆ ಇದು ಕನ್ನಡದ ಸಾವಿರ ಗಳಿಕೆ ಮಾಡುವ ಎರಡನೇ ಚಿತ್ರವಾದ್ರೂ ಅಚ್ಚರಿಯಿಲ್ಲ.

ವಿಶೇಷ ಅಂದ್ರೆ ರಿಲೀಸ್​​ ಹಂತಕ್ಕೆ ಬಂದ್ರೂ ಇದೂವರೆಗೂ ಕಾಂತಾರ-1 ಟೀಮ್ ಪ್ರಚಾರ ಮಾಡಿಲ್ಲ. ಮುಂದಿನ 20 ದಿನಗಳಲ್ಲಿ ಒಂದಿಷ್ಟು ಇವೆಂಟ್ಸ್ ಮಾಡ್ಲಿಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಪ್ರಚಾರಕ್ಕಿಂತ ಹೆಚ್ಚಾಗಿ ವಿಚಾರ ಚೆನ್ನಾಗಿರಬೇಕು ಅನ್ನೋದು ರಿಷಬ್ ಶೆಟ್ಟರ ಪಾಲಿಸಿ. ಸೋ ಹೆಚ್ಚಿನ ಪ್ರಚಾರದ ಬದಲು ಇನ್ನೂ ಸಿನಿಮಾಗೆ ಫೈನಲ್ ಟಚ್ ಕೊಡೋದ್ರಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ.

ಅಸಲಿಗೆ ಕಾಂತಾರ ರಿಲೀಸ್ ಆದಾಗಲೂ ಹೀಗೆ ಆಗಿತ್ತು. ಹೆಚ್ಚೇನೂ ಪ್ರಚಾರವಿಲ್ಲದೇ ಬರೀ ಕನ್ನಡ ಭಾಷೆಯಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಆದ್ರೆ ಮುಂದೆ ಸಿನಿಮಾಗೆ ಬಂದ ಪ್ರತಿಕ್ರಿಯೆ ನೋಡಿ ಅನ್ಯಭಾಷೆಗಳಿಂದ ಬೇಡಿಕೆ ಬಂತು. ನೋಡ್ ನೋಡ್ತಾ ಸಿನಿಮಾ ಗ್ಲೋಬಲ್ ಸಕ್ಸಸ್ ಕಂಡ್ತು.

15 ಕೋಟಿ ಬಜೆಟ್​ನಲ್ಲಿ ಸಿದ್ದವಾದ ಸಿನಿಮಾ 450 ಕೋಟಿ ಗಳಿಕೆ ಮಾಡಿತು. ಇದರ ಪ್ರೀಕ್ವೆಲ್ ಮಾಡೋದಕ್ಕೆ ರಿಷಬ್ ಶೆಟ್ರು ಮುಂದಾದಾಗ ಸಹಜವಾಗೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ದೊಡ್ಡ ಮಟ್ಟದಲ್ಲಿ ಚಿತ್ರವನ್ನ ರೆಡಿ ಮಾಡಿದ್ದಾರೆ. ಕಾಂತಾರ-1 ಮೇಕಿಂಗ್ ನೋಡ್ತಾ ಇದ್ರೆ ಸಿನಿಮಾ ಸ್ಕೇಲ್ ಎಂಥದ್ದು ಅನ್ನೋ ಕಲ್ಪನೆ ಮೂಡುತ್ತೆ.

ಇನ್ನೂ ಕಾಂತಾರ ಚಾಪ್ಟರ್-1 ಕಲಾವಿದರ ಬಗ್ಗೆನೂ ಇದೂವರೆಗೂ ಹೆಚ್ಚು ಗುಟ್ಟು ಬಿಟ್ಟುಕೊಟ್ಟಿಲ್ಲ. ರುಕ್ಮಿಣಿ ವಸಂತ್​ ಮತ್ತು ಗುಲ್ಶನ್ ದೇವಯ್ಯ ಪಾತ್ರಗಳ ಪೋಸ್ಟರ್ಸ್ ಹೊರಬಂದಿವೆ. ಇವುಗಳನ್ನ ನೋಡ್ತಾ ಇದ್ರೆ ಇದು ರಾಜರ ಕಾಲದ ಕಥೆ ಅನ್ನೋದಂತೂ ಪಕ್ಕಾ ಆಗಿದೆ. ಕಾಂತಾರ-1ನಲ್ಲಿ ಕದಂಬರ ಕಾಲದ ಕಥೆ ಇದೆ ಎನ್ನಲಾಗ್ತಾ ಇದೆ.

ಒಟ್ಟಾರೆ ಕಾಂತಾರ ಚಾಪ್ಟರ್-1 ಕಥೆಯೇನು ಅನ್ನೋ ಗುಟ್ಟು ಹೊರಬರಲಿಕ್ಕೆ ಹೆಚ್ಚೇನೂ ಕಾಯಬೇಕಿಲ್ಲ. ಅಕ್ಟೋಬರ್ 2ಕ್ಕೆ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬರಲಿದೆ. ಅದೇ ದಿನದಿಂದ ಬಾಕ್ಸಾಫೀಸ್​ ನಲ್ಲಿ ಸುನಾಮಿ ಏಳಲಿದೆ. ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

Source link

Leave a Reply

Your email address will not be published. Required fields are marked *