'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ ಬಾಲಕಿ- ಏನಿದು ಟ್ವಿಸ್ಟ್​?

'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ  ಬಾಲಕಿ- ಏನಿದು ಟ್ವಿಸ್ಟ್​?

'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ  ಬಾಲಕಿ- ಏನಿದು ಟ್ವಿಸ್ಟ್​?

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ ಮತ್ತು ಶರತ್ ಮದುವೆಯಾಗಿ, ಹಿತಾ ಅಪಘಾತದಲ್ಲಿ ಸಾವನ್ನಪ್ಪಿದಂತೆ ತೋರಿಸಲಾಗಿದೆ. ಹಿತಾಳ ಹುಟ್ಟಿನ ರಹಸ್ಯ ಬೇರೆಯದ್ದೇ ಇದ್ದು, ಅವಳು ಕೂಡ ಆತ್ಮವಾಗಿ ಬರುವ ಸೂಚನೆ ಇದೆ. ಏನಿದು ಟ್ವಿಸ್ಟ್​?

ಸದ್ಯ ನಾನಿನ್ನ ಬಿಡಲಾರೆ ಸೀರಿಯಲ್ ಸಕತ್​ ಕುತೂಹಲ ಘಟ್ಟ ತಲುಪಿದೆ. ಶರತ್​ ಮತ್ತು ಮಾಯಾ ಮದುವೆ ತಯಾರಿ ನಡೆಯುತ್ತಿದ್ದರೆ, ದುರ್ಗಾ ಮತ್ತು ಶರತ್​ ಒಂದಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದರು. ದುರ್ಗಾ ಮತ್ತು ಶರತ್​ ಒಬ್ಬರನ್ನೊಬ್ಬರು ಲವ್​ ಮಾಡದೇ ಹೋದರೂ ಅವರು ಒಂದಾಗಲಿ ಎಂದು ವೀಕ್ಷಕರು ಹಾರೈಸ್ತಿರೋದು ಈ ಸೀರಿಯಲ್​ನ ಕುತೂಹಲವಾಗಿತ್ತು. ಹಿತಾ ಮತ್ತು ದುರ್ಗಾ ಜೋಡಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ ವೀಕ್ಷಕರು ಅಂದುಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು.

ಅಷ್ಟಕ್ಕೂ ಮೃತಪಟ್ಟ ಅಂಬಿಕಾ ಶಕ್ತಿ ಹೆಚ್ಚಾಗಿ, ದುಷ್ಟರ ನಾಶ ಆಗಬೇಕು ಎಂದರೆ ಆಕೆಗೆ ಮರು ಮಾಂಗಲ್ಯಧಾರಣೆ ಆಗಬೇಕು ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆಯೇ ಅಂಬಿಕಾ ತನ್ನ ತಂಗಿ ದುರ್ಗಾಳ ಮೈಯೊಳಗೆ ಹೊಕ್ಕು, ಶರತ್​ನನ್ನು ಮದುವೆಯಾಗಿದ್ದಾಳೆ. ಹೇಗಾದ್ರೂ ಸರಿ ಶರತ್​ ಮತ್ತು ದುರ್ಗಾ ಮದ್ವೆಯಾಯ್ತಲ್ಲ, ಇನ್ನು ಸೀರಿಯಲ್​ ಮುಗಿಯತ್ತೆ ಎನ್ನೋಷ್ಟ್ರಲ್ಲಿ ಬೇರೆಯದ್ದೇ ಟ್ವಿಸ್ಟ್​ ಆಗೋಯ್ತು.

ದುರ್ಗಾ ಮತ್ತು ಶರತ್​ ಇಬ್ಬರೂ ಮದುವೆಯ ಸಮಯದಲ್ಲಿ ಸಮ್ಮೋಹನಕ್ಕೆ ಒಳಗಾಗಿದ್ದರಿಂದ ಈ ಮದುವೆ ಹೇಗೆ ಆಯ್ತು ಎನ್ನೋದಿ ತಿಳಿಯುತ್ತಿಲ್ಲ. ದುರ್ಗಾನೇ ಷಡ್ಯಂತ್ರ ಮಾಡಿರುವುದಾಗಿ ಅವಳ ಮೇಲೆ ಆರೋಪ ಬಂದಿದೆ. ಮದುವೆಯಾಗದ ಕಾರಣ, ಮಾಯಾ ಸಿಟ್ಟಿನಿಂದ ಬೆಂಕಿ ಹಚ್ಚಿಕೊಳ್ಳಲು ಹೋಗಿ ಆಸ್ಪತ್ರೆ ದಾಖಲಾಗಿದ್ದಾಳೆ.

ಅವಳು ಸತ್ತರೆ ಸಾಯಲಿ ಬಿಡಿ ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಾಗಲೇ ಸೀರಿಯಲ್​ ಮತ್ತೆ ಬೇರೆಯದ್ದೇ ಟರ್ನ್​ ತೆಗೆದುಕೊಂಡಿದೆ. ದುರ್ಗಾಳನ್ನು ಅಮ್ಮನ ರೂಪದಲ್ಲಿ ನೋಡಲು ಹಿತಾ ಇಷ್ಟಪಟ್ಟಿರಲಿಲ್ಲ. ಅವಳು ದುರ್ಗಾಳನ್ನು ತುಂಬಾ ಪ್ರೀತಿಸುತ್ತಿದ್ದರೂ ಅಮ್ಮನಾಗುವುದು ಇಷ್ಟವಿರಲಿಲ್ಲ. ಅದಕ್ಕಾಗಿ ನೊಂದು ಮನೆ ಬಿಟ್ಟಿದ್ದಾಳೆ.

ಆಗ ಅವಳಿಗೆ ಆ್ಯಕ್ಸಿಡೆಂಟ್​ ಆಗಿ ಸಾವನ್ನಪ್ಪಿರುವಂತೆ ತೋರಿಸಲಾಗಿದೆ. ಆದರೆ, ಆಕೆಯ ಹುಟ್ಟಿನ ರಹಸ್ಯ ಬೇರೆಯದ್ದೇ ಇರುವ ರೀತಿ ತೋರಿಸಲಾಗಿದ್ದು, ಆಕೆ ಕೂಡ ಅಮ್ಮನಂತೆಯೇ ಆತ್ಮ ಆಗಲಿದ್ದಾಳೆಯೇ ಎನ್ನುವುದು ಈಗಿರುವ ಪ್ರಶ್ನೆ. ಅಮ್ಮನ ಆತ್ಮನ ಜೊತೆ ಮಗಳ ಆತ್ಮವೂ ಸೇರಿ ಸೀರಿಯಲ್​ಗೆ ಇನ್ನಷ್ಟು ರೋಚಕತೆ ಬರುವಲ್ಲಿ ಸಂದೇಹವಿಲ್ಲ.

ಆದರೆ, ಇದಕ್ಕೆಲ್ಲಾ ಕಾರಣ ದುರ್ಗಾ ಎಂದು ಎಲ್ಲರೂ ಬೈದುಕೊಂಡರೆ ಎನ್ನುವುದು ವೀಕ್ಷಕರ ನೋವು. ಒಟ್ಟಿನಲ್ಲಿ ಆತ್ಮದ ಕಥೆಗೆ ಟಿಆರ್​ಪಿ ಹೆಚ್ಚಿರೋ ಕಾರಣದಿಂದ, ಅಷ್ಟಕ್ಕೂ ಅಂಬಿಕಾಳ ಆತ್ಮವನ್ನು ವೀಕ್ಷಕರೆಲ್ಲರೂ ತುಂಬಾ ಪ್ರೀತಿಸುತ್ತಿರೋ ಕಾರಣದಿಂದ ಮತ್ತೊಂದು ಆತ್ಮದ ಕಥೆ ಶುರುವಾಗುವ ಸಾಧ್ಯತೆ ಇದೆ.
View this post on Instagram
A post shared by Zee Kannada (@zeekannada)

Source link

Leave a Reply

Your email address will not be published. Required fields are marked *