The secret of the Earth: ಪ್ರತಿ 26 ಸೆಕೆಂಡ್‌ಗಳಿಗೊಮ್ಮೆ ಭೂಮಿ ಕಂಪಿಸುತ್ತಿರುವ ಅಚ್ಚರಿಯ ವಿದ್ಯಮಾನವನ್ನು ವಿಜ್ಞಾನಿಗಳು ಗಮನಿಸುತ್ತಿದ್ದಾರೆ. ಈ ಸೂಕ್ಷ್ಮ ಕಂಪನಗಳಿಗೆ ನಿಖರವಾದ ಕಾರಣ ಇನ್ನೂ ನಿಗೂಢವಾಗಿದೆ.

ಜನರ ಹೃದಯಬಡಿತ ಹೆಚ್ಚಾಗುವ ಸುದ್ದಿಯೊಂದು ಹೊರಬಂದಿದ್ದು, ವಿಜ್ಞಾನಿಗಳಿಗೂ ಇದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಹಲವು ದಶಕಗಳಿಂದ ಈ ವಿದ್ಯಮಾನ ಸಂಭವಿಸುತ್ತಿದ್ದು, ಈ ಸಂಬಂಧ ವಿಜ್ಞಾನಿಗಳು ಗಂಭೀರವಾಗಿ ಸಂಶೋಧನೆ ಮಾಡುತ್ತಿದ್ದಾರೆ. ಭೂಮಿಯ ಈ ಅಚ್ಚರಿ ವಿದ್ಯಮಾನವನ್ನು 2005ರಲ್ಲಿ ಪತ್ತೆ ಮಾಡಲಾಗಿತ್ತು.

ಭೂಕಂಪ ಸಂಭವಿಸಿದಾಗ ಭೂಮಿ ಅಲ್ಲಾಡಿದ ಅನುಭವ ಆಗಿರುತ್ತದೆ. 2005ರಿಂದ ಪ್ರತಿ 26 ಸೆಕೆಂಡ್‌ಗೆ ಭೂಮಿ ಕಂಪಿಸುತ್ತಿದೆ. 26 ಸೆಕೆಂಡ್‌ನ ಕಂಪನ ಅತ್ಯಂತ ಸೌಮ್ಯವಾಗಿದ್ದು, ಜನರ ಅನುಭವಕ್ಕೆ ಬರುತ್ತಿಲ್ಲ. ಈ ಸೌಮ್ಯವಾದ ಕಂಪನದಿಂದ ಭೂಮಿ ಮೇಲೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡುತ್ತಿಲ್ಲ. ಆದ್ರೆ ಭೂಮಿಯ ಅಂತರಾಳದಲ್ಲಿ ಏನು ನಡೆಯುತ್ತಿದೆ ಎಂಬುವುದು ವಿಜ್ಞಾನಿಗಳ ತರ್ಕಕ್ಕೆ ಸಿಗುತ್ತಿಲ್ಲ. ಭೂಮಿಯೊಳಗೆ ಅಚ್ಚರಿಯ ವಿದ್ಯಮಾನ ನಡೆಯುತ್ತಿರೋದು ಮಾತ್ರ ಖಚಿತವಾಗಿದೆ.

ಸೂರ್ಯದ ತಾಪಮಾನ ಏರಿಕೆಯಾದ್ರೆ ತಾಪಮಾನ ಅಧಿಕವಾಗಿ ಸಮುದ್ರದಲ್ಲಿ ಚಂಡಮಾರುತ, ಬಿರುಗಾಳಿ ಉಂಟಾಗುತ್ತದೆ. ಇದರಿಂದ ದೊಡ್ಡ ಸಮುದ್ರ ಅಲೆಗಳ ಸೃಷ್ಟಿಯಾಗುತ್ತದೆ. ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿದಾಗ ಅವುಗಳ ಶಕ್ತಿ ಭೂಮಿಗೆ ರವಾನೆಯಾಗುತ್ತದೆ. ಈ ಶಕ್ತಿ ಭೂಮಿಯಾದ್ಯಂತ ಹರಡುತ್ತದೆ. ಈ ವಿದ್ಯಮಾನವನ್ನು ವಿಜ್ಞಾನಿಗಳು ಕಂಪನಗಳ ರೂಪದಲ್ಲಿ ದಾಖಲಿಸುತ್ತಿದ್ದಾರೆ. ಸಾಗರದಲ್ಲಿ ಉತ್ಪತ್ತಿಯಾಗುವ ಶಕ್ತಿ ಭೂಮಿಯಾದ್ಯಂತ ಹರಡುತ್ತದೆ.

ಇದನ್ನೂ ಓದಿ: ಐದು ತಂತ್ರಜ್ಞಾನವನ್ನು ಭಾರತೀಯ ಕಂಪನಿಗಳಿಗೆ ಹಸ್ತಾಂತರ ಮಾಡಿದ ಇಸ್ರೋ!

ಈ ಪ್ರತಿ 26 ಸೆಕೆಂಡ್‌ಗಳ ಭೂಮಿಯ ಕಂಪನ ಯಾಕಾಗುತ್ತಿದೆ ಅನ್ನೋದು ಇನ್ನೂ ನಿಗೂಢವಾಗಿದೆ. ಕಾರಣ ತಿಳಿಯದ ಹಿನ್ನೆಲೆಯಲ್ಲಿ ಇದನ್ನು ನಿಗೂಢ ವಿದ್ಯಮಾನ ಅಂತಾನೇ ಕರೆಯಲಾಗುತ್ತದೆ. ಈ ಕಂಪನ ಭೂಮಿಯ ಆಳದಲ್ಲಿನ ಅಂದರೆ ಮ್ಯಾಂಟಲ್ ಮತ್ತು ಕೋರ್ ನಡುವಿನ ಚಲನೆ/ಘರ್ಷಣೆ/ಚಟುವಟಿಕೆಯಿಂದ ಸಂಭವಿಸುತ್ತಿರಬಹುದು ಎಂದು ಕೆಲ ಸಂಶೋಧಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಸಮುದ್ರದ ಶಕ್ತಿ ಎಫೆಕ್ಟ್ ಎಂದು ಹೇಳುತ್ತಾರೆ.

ಇದನ್ನೂ ಓದಿ: ವೇಗವಾಗಿ ತಿರುಗುತ್ತಿದೆ ಭೂಮಿ: 2029ರಲ್ಲಿ ಸಮಯದಲ್ಲಿ ಬದಲಾವಣೆ! ಏನಿದು ಕುತೂಹಲದ ವಿದ್ಯಮಾನ?

2005ರಿಂದ ಅಂದ್ರೆ ಎರಡು ದಶಕಗಳಿಂದ ಈ ಭೂಮಿಯ ಆಂತರಿಕ ರಚನೆಯನ್ನು ಅರ್ಥಮಾಡಿಕೊಳ್ಳಲು ಭೂಕಂಪನ ಶಬ್ದ ಬಳಕೆ ಮಾಡಿಕೊಂಡು ಅಧ್ಯಯನ ನಡೆಸುತ್ತಿದ್ದಾರೆ. ಭೂಕಂಪನ ಶಬ್ದದಿಂದ ದೋಷ ರೇಖೆಗಳು ಮತ್ತು ಕ್ರಸ್ಟ್-ಮ್ಯಾಂಟಲ್ ಕುರಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈವರೆಗೂ 26 ಸೆಕೆಂಡುಗಳ ಕಂಪನ ವಿಜ್ಞಾನಿಗಳಿಗೆ ಬಿಡಿಸಲಾದ ಒಗಟು ಆಗಿದೆ. ಸದ್ಯಕ್ಕೆ 26 ಸೆಕೆಂಡುಗಳಲ್ಲಿ ಭೂಮಿಯು ಕಂಪಿಸುವುದು ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: ಕ್ಯಾನ್ಸರ್‌ಗೆ ಹೊಸ ವ್ಯಾಕ್ಸಿನ್, ರಷ್ಯಾದ ಔಷಧಿ ಮಾರಕ ರೋಗಕ್ಕೆ ಆಗುತ್ತಾ ವರ?

Source link
ಪ್ರತಿ 26 ಸೆಕೆಂಡ್‌ಗೆ ಗಢ ಗಢ ನಡಗುತ್ತಿದೆ ಭೂಮಿ; ವಿಜ್ಞಾನಿಗಳಿಗೆ ಕಬ್ಬಿಣದ ಕಡಲೆಯಾದ ಅಚ್ಚರಿ ವಿದ್ಯಮಾನ