ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಆಯ್ಕೆ, 532 ಮತಗಳ ಭರ್ಜರಿ ಗೆಲುವು | Vice President Election Result Cp Radhakrishnan Elected As New Vp Massive Win

ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಸಂಜೆ 6 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿದೆ.ಇದೀಗ ಫಲಿತಾಂಶ ಘೋಷಣೆಯಾಗಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಗೆಲುವು ಕಂಡಿದ್ದಾರೆ.

ನವದೆಹಲಿ (ಸೆ.09) ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಭಾರಿ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿ ಬಿ ಸುದರ್ಶನ ರೆಡ್ಡಿ ವಿರುದ್ದ ಸಿಪಿ ರಾಧಾಕೃಷ್ಣನ್ 452 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಎನ್‌ಡಿಎ ಒಟ್ಟು ಸಂಖ್ಯಾ ಬಲ 427. ಆದರೆ ರಾಧಾಕೃಷ್ಣನ್ ಹೆಚ್ಚುವರಿಯಾಗಿ ಮತಗಳನ್ನು ಪಡೆಯುವ ಮೂಲಕ ಭಾರಿ ಗೆಲುವು ದಾಖಲಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 781 ಮತಗಳ ಪೈಕಿ 768 ಮತಗಳು ಚಲಾವಣೆಯಾಗಿದೆ.

ಎನ್‌ಡಿಎ ಅಭ್ಯರ್ಥಿ ಪರವಾಗಿ 452 ಮತದಾನವಾಗಿದೆ. ಉಪರಾಷ್ಟ್ರಪತಿ ಚುನಾವಣೆಯ ಮತದಾನದಿಂದ ಬಿಜೆಡಿ ಹಾಗೂ ಬಿಆರ್‌ಎಸ್ ಮತದಾನದಿಂದ ದೂರ ಉಳಿದಿತ್ತು. ಒಟ್ಟು 13 ಸಂಸದರು ಮತದಾನದಿಂದ ದೂರ ಉಳಿದಿದಿದ್ದರು. ಎನ್‌ಡಿಎ ಅಭ್ಯರ್ಥಿ ಪರವಾಗಿ ಭಾರಿ ಅಡ್ಡಮತದಾನವಾಗಿದೆ ಎಂದು ವರದಿಗಳು ಹೇಳುತ್ತಿದೆ. 452 ಮತಗಳನ್ನು ಪಡೆಯುವ ಮೂಲಕ ರಾಧಾಕೃಷ್ಣನ್ ಭಾರಿ ಬಹುಮತದೊಂದಿಗೆ ಗೆಲುವು ದಾಖಲಿಸಿದ್ದಾರೆ.

ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು. ಕಣದಲ್ಲಿ ಇಬ್ಬರು ಅಭ್ಯರ್ಥಿಗಳಿದ್ದರು. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಹಾಗೂ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಬಿ ಸುದರ್ಶನ ರೆಡ್ಡಿ.

Source link

Leave a Reply

Your email address will not be published. Required fields are marked *