ದಸರಾ ಉದ್ಘಾಟನಾ ವಿವಾದ: ಬಾನು ಬೆನ್ನಿಗೆ ನಿಂತ ರಾಜ್ಯದ ಲೇಖಕಿಯರು, ನಾಳೆ ಮಹತ್ವದ ಸುದ್ದಿಗೋಷ್ಠಿ | Banu Mushtaqs Dasara Inauguration Sparks Controversy Women Writers Support

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಪ್ರಮುಖ ಲೇಖಕಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಆಯ್ಕೆಯ ಸಮರ್ಥನೆ, ಬಾನು ಅವರ ಸಾಹಿತ್ಯ ಕೊಡುಗೆ ಮತ್ತು ಸಾಮಾಜಿಕ ಹೋರಾಟದ ಬಗ್ಗೆ ವಿವರಿಸಲಿದ್ದಾರೆ.

ಬೆಂಗಳೂರು (ಸೆ.10): ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯಾಗಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ ಸಿಂಹ ಕೋರ್ಟ್ ಮೊರೆ ಹೋಗಿದ್ದು, ವಿವಾದ ತಾರಕಕ್ಕೇರಿದೆ. ಆದರೆ, ಬಾನು ಮುಷ್ತಾಕ್‌ಗೆ ಬೆಂಬಲವಾಗಿ ಕನ್ನಡ ಸಾಹಿತ್ಯ ಮತ್ತು ಹೋರಾಟದ ವಲಯದ ಪ್ರಮುಖ ಲೇಖಕಿಯರು ಒಗ್ಗಟ್ಟಿನಿಂದ ನಿಂತಿದ್ದಾರೆ. ನಾಳೆ ಬೆಳಿಗ್ಗೆ 12:30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಈ ಲೇಖಕಿಯರು ಸುದ್ದಿಗೋಷ್ಠಿ ಆಯೋಜಿಸಿದ್ದು, ಬಾನು ಮುಷ್ತಾಕ್ ಆಯ್ಕೆಯನ್ನು ಸಮರ್ಥಿಸಿಕೊಳ್ಳಲಿದ್ದಾರೆ.

ಈ ಗೋಷ್ಠಿಯಲ್ಲಿ ಡಾ ವಸುಂಧರಾ ಭೂಪತಿ, ಡಾ ಸುನಂದಮ್ಮ, ಡಾ ಪೂರ್ಣಿಮಾ, ಅಕ್ಕೈ ಪದ್ಮಶಾಲಿ ಮತ್ತು ಡಾ ಎನ್ ಗಾಯತ್ರಿ ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಬಾನು ಮುಷ್ತಾಕ್‌ರ ಕೊಡುಗೆ, ಸಾಮಾಜಿಕ ಹೋರಾಟದಲ್ಲಿ ಅವರ ಪಾತ್ರ ಮತ್ತು ದಸರಾ ಉದ್ಘಾಟನೆಗೆ ಅವರ ಆಯ್ಕೆಯ ಸಮಂಜಸತೆಯನ್ನು ಈ ಲೇಖಕಿಯರು ತಿಳಿಸಲಿದ್ದಾರೆ.

ಬಾನು ಮುಷ್ತಾಕ್‌ರ ಆಯ್ಕೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಗೌರವವನ್ನು ಎತ್ತಿಹಿಡಿಯುವ ಕ್ರಮವಾಗಿದೆ. ಇದನ್ನು ವಿರೋಧಿಸುವುದು ಅನಗತ್ಯ ವಿವಾದ ಸೃಷ್ಟಿಸುವ ಯತ್ನವಷ್ಟೇ ಎಂದು ಲೇಖಕಿಯರು ಹೇಳಿದ್ದಾರೆ ಸದ್ಯ ಈ ವಿವಾದದಿಂದ ದಸರಾ ಉದ್ಘಾಟನೆ ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಬೀರದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಾಳೆ ನಡೆಯುವ ಲೇಖಕಿಯರ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ.

Source link

Leave a Reply

Your email address will not be published. Required fields are marked *