Asia Cup 2025: ಭಾರತ-ಯುಎಇ ಪಂದ್ಯ ಎಷ್ಟು ಗಂಟೆಯಿಂದ ಆರಂಭ? ಜಿಯೋಸ್ಟಾರ್ ಅಲ್ಲ ಈ ಚಾನೆಲ್‌ನಲ್ಲಿ ಲೈವ್ ಮ್ಯಾಚ್ ನೋಡಿ

Asia Cup 2025: ಭಾರತ-ಯುಎಇ ಪಂದ್ಯ ಎಷ್ಟು ಗಂಟೆಯಿಂದ ಆರಂಭ? ಜಿಯೋಸ್ಟಾರ್ ಅಲ್ಲ ಈ ಚಾನೆಲ್‌ನಲ್ಲಿ ಲೈವ್ ಮ್ಯಾಚ್ ನೋಡಿ

Asia Cup 2025: ಭಾರತ-ಯುಎಇ ಪಂದ್ಯ ಎಷ್ಟು ಗಂಟೆಯಿಂದ ಆರಂಭ? ಜಿಯೋಸ್ಟಾರ್ ಅಲ್ಲ ಈ ಚಾನೆಲ್‌ನಲ್ಲಿ ಲೈವ್ ಮ್ಯಾಚ್ ನೋಡಿ

ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ಈಗಾಗಲೇ ಭರ್ಜರಿ ಚಾಲನೆ ಸಿಕ್ಕಿದೆ. ಹೀಗಿರುವಾಗ, ಇಂದು ನಡೆಯಲಿರುವ ಪಂದ್ಯ ಎಷ್ಟು ಗಂಟೆಯಿಂದ ಆರಂಭವಾಗಲಿದೆ. ಎಲ್ಲಿ ವೀಕ್ಷಿಸಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಏಷ್ಯಾಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಗೂ ಹಾಂಕಾಂಗ್ ತಂಡಗಳು ಮುಖಾಮುಖಿಯಾಗಿದ್ದವು. ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ಇನ್ನು ಇಂದು ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸುತ್ತಿದೆ.

ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯು ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಲು ಸಿಗುತ್ತಿಲ್ಲ. ಹೀಗಾಗಿ ಏಷ್ಯಾಕಪ್ ಟೂರ್ನಿಯನ್ನು ಯಾವ ಚಾನೆಲ್‌ನಲ್ಲಿ, ಓಟಿಟಿ ಪ್ಲಾಟ್‌ಫಾರಂನಲ್ಲಿ ನೋಡಬಹುದು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಏಷ್ಯಾಕಪ್ ಟೂರ್ನಿಯ ಪ್ರಸಾರದ ಅಧಿಕೃತ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿದೆ. ಹೀಗಾಗಿ ಏಷ್ಯಾಕಪ್ ಟೂರ್ನಿಯ ಪಂದ್ಯಾವಳಿಗಳನ್ನು ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್ ಹಾಗೂ ಸೋನಿ ಲಿವ್ ಓಟಿಟಿ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.

ಇನ್ನು ಭಾರತ ಹಾಗೂ ಯುಎಇ ನಡುವಿನ ಪಂದ್ಯವು ಇಂದು ಸಂಜೆ ಭಾರತೀಯ ಕಾಲಮಾನ 8 ಗಂಟೆಯಿಂದ ಆರಂಭವಾಗಲಿದೆ. ಇದಕ್ಕೂ ಅರ್ಧ ಗಂಟೆ ಮೊದಲು ಅಂದರೆ 7.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ದುಬೈನಲ್ಲಿ ಟೀಂ ಇಂಡಿಯಾ ಸಾಧಾರಣ ಟ್ರ್ಯಾಕ್ ರೆಕಾರ್ಡ್ ಹೊಂದಿದೆ. ಇಲ್ಲಿ 9 ಪಂದ್ಯಗಳನ್ನಾಡಿರುವ ಭಾರತ 5 ಗೆಲುವು ಹಾಗೂ 4 ಸೋಲು ಕಂಡಿದೆ.

Source link

Leave a Reply

Your email address will not be published. Required fields are marked *