Headlines

Koppal steel Plant: ಕೊಪ್ಪಳದಲ್ಲಿ ₹2,345 ಕೋಟಿ ವೆಚ್ಚದ ಉಕ್ಕು ಘಟಕ; ಹುಬ್ಬಳ್ಳಿಯ ಎನ್‌ಜಿಇಎಫ್‌ ಪುನಶ್ಚೇತನ! | Koppal Sumitomo Steel Plant 2345 Cr Hubli Ngef Resuscitation In Karnataka Sat

Koppal steel Plant: ಕೊಪ್ಪಳದಲ್ಲಿ ₹2,345 ಕೋಟಿ ವೆಚ್ಚದ ಉಕ್ಕು ಘಟಕ; ಹುಬ್ಬಳ್ಳಿಯ ಎನ್‌ಜಿಇಎಫ್‌ ಪುನಶ್ಚೇತನ! | Koppal Sumitomo Steel Plant 2345 Cr Hubli Ngef Resuscitation In Karnataka Sat



Koppal steel Plant: ಕೊಪ್ಪಳದಲ್ಲಿ ₹2,345 ಕೋಟಿ ವೆಚ್ಚದ ಉಕ್ಕು ಘಟಕ; ಹುಬ್ಬಳ್ಳಿಯ ಎನ್‌ಜಿಇಎಫ್‌ ಪುನಶ್ಚೇತನ! | Koppal Sumitomo Steel Plant 2345 Cr Hubli Ngef Resuscitation In Karnataka Sat

ಕೊಪ್ಪಳದಲ್ಲಿ ಮುಕಂದ ಸುಮಿ ಜೊತೆಗೂಡಿ ₹2,345 ಕೋಟಿ ಹೂಡಿಕೆಯ ಉಕ್ಕು ಘಟಕ ಸ್ಥಾಪಿಸುವುದಾಗಿ ಸುಮಿಟೊಮೊ ಖಚಿತಪಡಿಸಿದೆ. ಯಸ್ಕಾವಾ ಬೆಂಗಳೂರಿನಲ್ಲಿ ಮೋಷನ್ ಕಂಟ್ರೋಲ್ ಘಟಕ ಸ್ಥಾಪಿಸಲಿದೆ. ಹುಬ್ಬಳ್ಳಿ ಎನ್‌ಜಿಇಎಫ್‌ ಪುನಶ್ಚೇತನಕ್ಕೆ ಜೆಎಫ್‌ಇ ಷೋಜಿ ಜೊತೆ ಸರ್ಕಾರ ಮಾತುಕತೆ ನಡೆಸಿದೆ.

ಬೆಂಗಳೂರು/ಕೊಪ್ಪಳ/ಹುಬ್ಬಳ್ಳಿ (ಸೆ.09): ಬಜಾಜ್‌ ಗ್ರೂಪ್‌ ಜೊತೆಗಿನ ಸಹಭಾಗಿತ್ವದ ಮುಕಂದ ಸುಮಿ ಮೂಲಕ ಕೊಪ್ಪಳದಲ್ಲಿರುವ ಉಕ್ಕು ತಯಾರಿಕಾ ಘಟಕದಲ್ಲಿ ₹2,345 ಕೋಟಿ ಬಂಡವಾಳ ಹೂಡಿಕೆ ಮಾಡುವುದನ್ನು ಸುಮಿಟೊಮೊ ಖಚಿತಪಡಿಸಿದೆ. ಈ ಘಟಕವು 2028ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ಜಪಾನ್‌ನ ಪ್ರಮುಖ ಕಂಪನಿಗಳಾದ ಸುಮಿಟೊಮೊ, ಯಸ್ಕಾವಾ ಹಾಗೂ ಜೆಎಫ್‌ಇ ಷೋಜಿ ಜೊತೆ ರಾಜ್ಯ ಸರ್ಕಾರವು ಪ್ರಮುಖ ಮಾತುಕತೆಗಳನ್ನು ನಡೆಸಿದೆ. ಜಪಾನ್‌ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗವು, ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಈ ಕಂಪನಿಗಳ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆಗಳನ್ನು ನಡೆಸಿದೆ. ಈ ಮಾತುಕತೆಗಳು ರಾಜ್ಯದಲ್ಲಿ ಹೊಸ ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ.

ಕೊಪ್ಪಳದಲ್ಲಿ ಸುಮಿಟೊಮೊದಿಂದ ಬೃಹತ್ ಉಕ್ಕು ಘಟಕ:

ಸುಮಿಟೊಮೊ ಕಂಪನಿಯು ತನ್ನ ಸಹಭಾಗಿತ್ವದ ಸಂಸ್ಥೆಯಾದ ಮುಕಂದ ಸುಮಿಯೊಂದಿಗೆ ಕೊಪ್ಪಳದಲ್ಲಿ ಬೃಹತ್ ಉಕ್ಕು ತಯಾರಿಕಾ ಘಟಕವನ್ನು ಸ್ಥಾಪಿಸುವುದಾಗಿ ದೃಢಪಡಿಸಿದೆ. ಈ ಯೋಜನೆಗೆ ಸುಮಾರು ₹2,345 ಕೋಟಿ ಹೂಡಿಕೆಯಾಗಲಿದ್ದು, 2028ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಈ ಘಟಕವು ವಾರ್ಷಿಕವಾಗಿ 3,50,000 ಟನ್‌ಗಳಷ್ಟು ಕಬ್ಬಿಣ ಮತ್ತು ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಜೊತೆಗೆ, ರಾಜ್ಯದಲ್ಲಿ ಬಯೊಮಾಸ್ ಘಟಕವನ್ನು ಸ್ಥಾಪಿಸುವ ಬಗ್ಗೆಯೂ ಸುಮಿಟೊಮೊ ಆಸಕ್ತಿ ವ್ಯಕ್ತಪಡಿಸಿದೆ.

ಅಂಕೋಲಾ ಶಾಸಕ ಸತೀಶ್ ಸೈಲ್ ಬಂಧನ: ₹1.41 ಕೋಟಿ ನಗದು, 6.75 ಕೆ.ಜಿ. ಚಿನ್ನ ಜಪ್ತಿ!

ಬೆಂಗಳೂರಿನಲ್ಲಿ ಯಸ್ಕಾವಾದ ಅತ್ಯಾಧುನಿಕ ತಯಾರಿಕಾ ಘಟಕ

ಯಸ್ಕಾವಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರಿಕ್ವೆನ್ಸಿ ಡ್ರೈವ್ಸ್ ಘಟಕವನ್ನು ಸ್ಥಾಪಿಸಲು ಬಂಡವಾಳ ಹೂಡಿಕೆ ಮಾಡುವುದನ್ನು ಖಚಿತಪಡಿಸಿದೆ. ಈ ಘಟಕವು ಕರ್ನಾಟಕವನ್ನು ಅತ್ಯಾಧುನಿಕ ತಂತ್ರಜ್ಞಾನದ ತಯಾರಿಕಾ ಕೇಂದ್ರವಾಗಿ ರೂಪಿಸಲು ಸಹಾಯಕವಾಗಲಿದೆ. ಇದರ ಜೊತೆಗೆ, ಕಂಪನಿಯು ಶೀಘ್ರದಲ್ಲಿಯೇ ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳು (BEV) ಮತ್ತು ವಿದ್ಯುತ್ ಚಾಲಿತ ವಾಹನಗಳ (EV) ಮೋಟರ್ ಕೋರ್‌ಗಳನ್ನು ತಯಾರಿಸುವ ₹400 ಕೋಟಿ ವೆಚ್ಚದ ಯೋಜನೆಯನ್ನು ಕಾರ್ಯಗತಗೊಳಿಸಲಿದೆ ಎಂದು ಭರವಸೆ ನೀಡಿದೆ.

ಹುಬ್ಬಳ್ಳಿ ಎನ್‌ಜಿಇಎಫ್‌ ಪುನಶ್ಚೇತನಕ್ಕೆ ಜೆಎಫ್‌ಇ ಷೋಜಿ ಜೊತೆ ಮಾತುಕತೆ:

ಸಚಿವ ಎಂ. ಬಿ. ಪಾಟೀಲ ಅವರು ಜೆಎಫ್‌ಇ ಷೋಜಿ ಕಂಪನಿಯೊಂದಿಗೆ ಹುಬ್ಬಳ್ಳಿಯಲ್ಲಿರುವ ರಾಜ್ಯ ಸರ್ಕಾರದ ಸ್ವಾಮ್ಯದ ‘ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್‌ಜಿಇಎಫ್‌)’ಯ ಪುನಶ್ಚೇತನದ ಕುರಿತು ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಗೆ ಹೊಸ ಚೈತನ್ಯ ನೀಡುವ ಉದ್ದೇಶ ಹೊಂದಿದೆ. ಜೆಎಫ್‌ಇ ಷೋಜಿ ಕಂಪನಿಯು ವಿದ್ಯುತ್ ಪರಿವರ್ತಕಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವುದರಿಂದ, ಈ ಪಾಲುದಾರಿಕೆ ಯಶಸ್ವಿಯಾದರೆ, ಹುಬ್ಬಳ್ಳಿಯ ಎನ್‌ಜಿಇಎಫ್‌ಗೆ ಹೊಸ ಬದುಕು ಸಿಗಲಿದೆ. ಮಾತುಕತೆಗಳ ಭಾಗವಾಗಿ, ಜೆಎಫ್‌ಇ ಷೋಜಿ ಕಂಪನಿಯ ಉನ್ನತಾಧಿಕಾರಿಗಳಾದ ಹಿರೋಶಿ ಲಿಜಿಮಾ ಮತ್ತು ಹಿಡೆಕಸು ಯೋಶಿಒಕೊ ಅವರನ್ನು ಹುಬ್ಬಳ್ಳಿ ಘಟಕಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ.

ನಿಯೋಗದಲ್ಲಿನ ಅಧಿಕಾರಿಗಳು

ರಾಜ್ಯದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ. ಈ ಭೇಟಿಯು ಕರ್ನಾಟಕದ ಕೈಗಾರಿಕಾ ವಲಯಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಹೂಡಿಕೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.



Source link

Leave a Reply

Your email address will not be published. Required fields are marked *