ದರ್ಶನ್​ ನಂಬಿ ನೆಮ್ಮದಿ ಕಳೆದುಕೊಂಡ್ರಾ ಎಂ.ಡಿ ಶ್ರೀಧರ್? ನಿಜವಾಗಿಯೂ ಆಗಿರೋ ಕಥೆ ಏನು? | Director Md Sridhar Talks On Darshan Thoogudeepa Jail Problem Statement

ದರ್ಶನ್​ ನಂಬಿ ನೆಮ್ಮದಿ ಕಳೆದುಕೊಂಡ್ರಾ ಎಂ.ಡಿ ಶ್ರೀಧರ್? ನಿಜವಾಗಿಯೂ ಆಗಿರೋ ಕಥೆ ಏನು? | Director Md Sridhar Talks On Darshan Thoogudeepa Jail Problem Statement


ಜೈಲಿನೊಳಗೆ ‘ದಾಸ’ ಪರದಾಡ್ತಾ ಇದ್ರೆ, ಹೊರಗೆ ದರ್ಶನ್​ಗೆ ಅಡ್ವಾನ್ಸ್ ಕೊಟ್ಟಿದ್ದ ನಿರ್ಮಾಪಕರು ಪರದಾಡ್ತಾ ಇದ್ದಾರೆ. ಈಗಿನ ಪರಿಸ್ಥಿತಿ ನೋಡಿದ್ರೆ ದರ್ಶನ್ ಹೊರಬರೋದು ಸದ್ಯಕ್ಕಂತೂ ಸಾಧ್ಯ ಇಲ್ಲ. ಸೋ ದರ್ಶನ್ ಜೊತೆ ಸಿನಿಮಾ ಮಾಡಿ ಭರ್ಜರಿ ಹಣ ಮಾಡ್ತಿನಿ ಅಂತ ನಂಬಿಕೊಂಡು ಅಡ್ವಾನ್ಸ್ ಕೊಟ್ಟ ನಿರ್ಮಾಪಕರ ಗತಿ ಏನು..? ಅದ್ರಲ್ಲೂ ದರ್ಶನ್ ಜೊತೆ 3 ಸಿನಿಮಾ ಮಾಡಿದ್ದ ನಿರ್ದೇಶಕ ಎಂ.ಡಿ ಶ್ರೀಧರ್ ಈಗ ಅದೆಂಥಾ ಕಷ್ಟಕ್ಕೆ ಸಿಲುಕಿದ್ದಾರೆ ಹೊತ್ತಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಜೈಲಿನ ಒಳಗೆ ದಾಸನ ಪರದಾಟ, ಹೊರಗೆ ನಿರ್ಮಾಪಕರ ಪರದಾಟ..!
ಯೆಸ್ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಬಟ್ಟೆ, ಬರೆ, ಹಾಸಿಗೆಯೂ ಸಿಗದೇ ಪರದಾಡ್ತಾ ಇರೋ ವಿಚಾರ ಗೊತ್ತೇ ಇದೆ. ಹೊರಗೆ ಚಕ್ರವರ್ತಿಯಂತೆ ಮೆರೆದಾತನಿಗೆ ಸೆರೆಮನೆಯಲ್ಲಿ ಹೇಗೆ ತಾನೆ ನೆಮ್ಮದಿ ಸಿಗಬೇಕು. ಸೋ ಹೊರಗೆ ಇದ್ರೆ ನೆಮ್ಮದಿಯಾಗ್ ಇಬೇಕ್ ಅಂದಿದ್ದ ದರ್ಶನ್, ಒಳಗೆ ನೆಮ್ಮದಿ ಕಳೆದುಕೊಂಡು ಪರದಾಡೋ ಸ್ಥಿತಿ ಬಂದಿದೆ.

ಇದು ದರ್ಶನ್ ಸ್ಥಿತಿ ಆದ್ರೆ ದರ್ಶನ್​ ನಂಬಿಕೊಂಡ ಅನೇಕರು ಹೊರಗಡೆ ಪರದಾಡ್ತಾ ಇದ್ದಾರೆ. ಅದ್ರಲ್ಲೂ ದರ್ಶನ್​ಗೆ ಕೋಟಿಗಟ್ಟಲೆ ಅಡ್ವಾನ್ಸ್ ಕೊಟ್ಟು ಸಿನಿಮಾ ಮಾಡ್ಲಿಕ್ಕೆ ಹೊರಟವರು ಈಗ ದುಡ್ಡೂ ಇಲ್ಲ, ಸಿನಿಮಾನೂ ಇಲ್ಲದಂತಾಗಿ ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ದರ್ಶನ್ ನಂಬಿಕೊಂಡಿದ್ದ ಅವರ ನೆಮ್ಮದಿ ಕೂಡ ಭಂಗವಾಗಿದೆ.

ದರ್ಶನ್​ಗೆ ಅಡ್ವಾನ್ಸ್ ಕೊಟ್ಟಿದ್ದ ಎಂ.ಡಿ ಶ್ರೀಧರ್..!
ಹಿರಿಯ ನಿರ್ದೇಶಕ ಕಂ ನಿರ್ಮಾಪಕ ಎಂ.ಡಿ.ಶ್ರೀಧರ್ ದರ್ಶನ್​ಗೆ ಈ ಹಿಂದೆ ಅಡ್ವಾನ್ಸ್ ಕೊಟ್ಟಿದ್ರು. ಅಸಲಿಗೆ ಎಂ.ಡಿ . ಶ್ರೀಧರ್ ದರ್ಶನ್ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾ ಮಾಡಿದವರು. ಪೋರ್ಕಿ, ಬುಲ್ ಬುಲ್ ಮತ್ತು ಒಡೆಯ ಚಿತ್ರಗಳ ನಿರ್ದೇಶಕ ಇವರು. ಅಷ್ಟೇ ಅಲ್ಲ ಬುಲ್ ಬುಲ್ ಸಿನಿಮಾಗೆ ಸಹ ನಿರ್ಮಾಪಕ ಕೂಡ ಹೌದು.

ಬುಲ್ ಬುಲ್ ಸಿನಿಮಾ ದೊಡ್ಡ ಯಶಸ್ಸು ಕಂಡು ಎಂ.ಡಿ ಶ್ರೀಧರ್​ಗೆ ಒಳ್ಳೆ ಲಾಭವೇ ಬಂದಿತ್ತು. ಅಲ್ಲಿಂದ ಮುಂದೆ ದರ್ಶನ್ ಮಾರ್ಕೆಟ್ ಬೆಳೀತಾನೇ ಹೋಯ್ತು. ಸೋ ದರ್ಶನ್ ಕಾಲ್​ಶೀಟ್ ಪಡೆದು ತಾವು ಕೂಡ ಒಂದು ಸಿನಿಮಾ ಮಾಡೋಣ. ಅದರಿಂದ ಒಂದಿಷ್ಟು ಲಾಭ ಸಿಗುತ್ತೆ ಅನ್ನೋ ನಂಬಿಕೆಯಿಂದ ಶ್ರೀಧರ್, ದರ್ಶನ್​ಗೆ ಹತ್ತಿರತ್ತಿರ 4 ಕೋಟಿ ಹಣ ಅಡ್ವಾನ್ಸ್ ಕೊಟ್ಟಿದ್ರಂತೆ.

ದರ್ಶನ್ ಬೇಲ್ ಪಡೆದು ಹೊರಬಂದು ದಿ ಡೆವಿಲ್ ಸಿನಿಮಾ ಕಂಪ್ಲೀಟ್ ಮಾಡಿಕೊಟ್ಟಾಗ , ಶ್ರೀಧರ್​ಗೆ ಕೊಂಚ ಆಶಾಭಾವ ಮೂಡಿತ್ತು. ಕೆಲವೇ ದಿನಗಳಲ್ಲಿ ತಮ್ಮ ಸಿನಿಮಾ ಶುರುವಾಗುತ್ತೆ ಅಂದುಕೊಂಡಿದ್ರು. ಆದ್ರೇ ಬೇಲ್ ಕ್ಯಾನ್ಸಲ್ ಆಗಿ ದರ್ಶನ್ ಮತ್ತೆ ಜೈಲು ಸೇರಿದ ಮೇಲೆ ತಮ್ಮ ಸಿನಿಮಾದ ಗತಿಯೇನು.. ಅಂತ ಶ್ರೀಧರ್ ತಲೆಕೆಡಿಸಿಕೊಂಡಿದ್ದಾರೆ.

ಇದು ಬರೀ ಶ್ರೀಧರ್ ಒಬ್ಬರ ಚಿಂತೆಯಲ್ಲ, ದರ್ಶನ್​ಗೆ ಅಡ್ವಾನ್ಸ್ ಕೊಟ್ಟ ಅನೇಕರ ಪರಿಸ್ಥಿತಿ ಹೀಗೆಯೇ ಇದೆ. ಅಸಲಿಗೆ ದರ್ಶನ್  ಬೇಲ್ ಪಡೆದು ಹೊರ ಬಂದಾಗಲೇ ಕೆಲವರ ಅಡ್ವಾನ್ಸ್ ಮರಳಿಸಿದ್ರು. ಆಗ ಮರಳಿ ಪಡೆದುಕೊಂಡವರು ನೆಮ್ಮದಿಯಾಗ್ ಇದ್ದಾರೆ. ಆದ್ರೆ ಉಳಿದವರ ಪಾಡು ಮಾತ್ರ ಗಂಭೀರವಾಗಿದೆ.

ಇದ್ದುದರಲ್ಲಿ ಬಚಾವ್ ಆಗಿದ್ದು ಅಂದ್ರೆ ದಿ ಡೆವಿಲ್ ಸಿನಿಮಾ ತಂಡ. ದರ್ಶನ್ ಬೇಲ್ ಪಡೆದು ಹೊರಬಂದು ವಾಪಾಸ್ ಅಂದರ್ ಆಗೋವಷ್ಟರಲ್ಲಿ ಇಡೀ ಸಿನಿಮಾ ಕಂಪ್ಲೀಟ್ ಆಗೋಗಿದೆ. ಡಿಸೆಂಬರ್ 12ಕ್ಕೆ ದಿ ಡೆವಿಲ್ ತೆರೆಗೆ ಬರಲಿದ್ದು, ಇದೇ ದಾಸನ ಕೊನೆ ಚಿತ್ರವಾದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ ಸಿನಿಇಂಡಸ್ಟ್ರಿಯ ಮಂದಿ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ…



Source link

Leave a Reply

Your email address will not be published. Required fields are marked *