Headlines

ಹಾವುಗಳನ್ನು ಆಕರ್ಷಿಸುವ ವಸ್ತುಗಳು; ಮನೆಯಲ್ಲಿದ್ರೆ ಇಂದೇ ಕ್ಲೀನ್ ಮಾಡಿ

ಹಾವುಗಳನ್ನು ಆಕರ್ಷಿಸುವ ವಸ್ತುಗಳು; ಮನೆಯಲ್ಲಿದ್ರೆ ಇಂದೇ ಕ್ಲೀನ್ ಮಾಡಿ

ಹಾವುಗಳನ್ನು ಆಕರ್ಷಿಸುವ ವಸ್ತುಗಳು; ಮನೆಯಲ್ಲಿದ್ರೆ ಇಂದೇ ಕ್ಲೀನ್ ಮಾಡಿ

snake repellent plants ಈ ವಸ್ತುಗಳನ್ನು ಮನೆಯಿಂದ ದೂರವಿಡುವುದರಿಂದ ಹಾವುಗಳು ಮನೆಗೆ ಬರುವುದನ್ನು ತಡೆಯಬಹುದು. ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟಿರುವುದೇ ಕಾರಣ ಎಂದು ಉರಗ ತಜ್ಞರು ಹೇಳುತ್ತಾರೆ.

ಹಲವರಿಗೆ ಹಾವು ಅಂದ್ರೆ ಸಿಕ್ಕಾಪಟ್ಟೆ ಭಯ. ಈ ಕಾರಣದಿಂದ ಹಾವುಗಳು ಮನೆಗೆ ಬರದಂತೆ ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದ್ರೂ ಕೆಲವೊಮ್ಮೆ ಹಾವುಗಳು ಮನೆಯೊಳಗೆ ಬರುತ್ತವೆ. ಇದಕ್ಕೆ ಹಾವುಗಳನ್ನು ಆಕರ್ಷಿಸುವ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟಿರುವುದೇ ಕಾರಣ ಎಂದು ಉರಗ ತಜ್ಞರು ಹೇಳುತ್ತಾರೆ. ಹಾವುಗಳನ್ನು ಆಕರ್ಷಿಸುವ ವಸ್ತುಗಳು ಯಾವವು ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಈ ವಸ್ತುಗಳನ್ನು ಮನೆಯಿಂದ ದೂರ ಇಟ್ಟರೆ ಹಾವುಗಳು ಮನೆಗೆ ಬರುವುದನ್ನು ತಡೆಯಬಹುದು.

ಮನೆ ಸುತ್ತ ಸುವಾಸನೆ ಬೀರುವ ಗಿಡಗಳನ್ನು ನೆಡಬೇಡಿ. ಮನೆ ಮುಂದೆ ಅಥವಾ ಮನೆ ಸುತ್ತ ಸುವಾಸನೆ ಬೀರುವ ಹೂವಿನ ಗಿಡಗಳನ್ನು ನೆಟ್ಟರೆ ಹಾವುಗಳು ಮನೆಗೆ ಆಗಾಗ್ಗೆ ಬರಲು ಸಾಧ್ಯತೆ ಇರುತ್ತದೆ. ಅದರಲ್ಲೂ ಮಲ್ಲಿಗೆ ಗಿಡ ನೆಡಲೇಬೇಡಿ. ಅವು ಹಾವುಗಳನ್ನು ಆಕರ್ಷಿಸುತ್ತವೆ. ಕುಂಕುಮ, ಸೇವಂತಿಗೆ ಹೂವಿನ ಗಿಡಗಳಾದ ಕೆಮೊಮಿಲ್‌ಗಳು ಹಾವುಗಳನ್ನು ಆಕರ್ಷಿಸುತ್ತವೆ.

ಕೆಲವರು ತಮ್ಮ ತೋಟಗಳಲ್ಲಿ ಗೊಬ್ಬರ ಹಾಕಲು ಎಲೆಗಳನ್ನು ರಾಶಿ ಹಾಕಿಡುತ್ತಾರೆ. ಇಲ್ಲಿ ಹಾವುಗಳು ಕಾಣಸಿಗುತ್ತವೆ. ಕೊಳೆಯುತ್ತಿರುವ ಕಸದ ಬಳಿ ಇಲಿಗಳು, ಕೀಟಗಳು ಬರುವುದು ಸಹಜ. ಅವುಗಳನ್ನು ತಿನ್ನಲು ಹಾವುಗಳು ಬರಬಹುದು. ಹಾಗಾಗಿ ಮನೆ ಸುತ್ತ ಕಸ ರಾಶಿ ಹಾಕಬೇಡಿ.

ಕೆಲವರು ಮನೆಯನ್ನು ಅಲಂಕರಿಸಲು ಮನೆಯಲ್ಲಿ ಸಣ್ಣ ನೀರಿನ ತೊಟ್ಟಿ ನಿರ್ಮಿಸಿ ಅದರಲ್ಲಿ ತಾಮರ ಮುಂತಾದ ಗಿಡಗಳನ್ನು ಬೆಳೆಸುತ್ತಾರೆ. ಹೀಗೆ ಸಣ್ಣ ತೊಟ್ಟಿಗಳನ್ನು ನಿರ್ಮಿಸಿದರೆ ಅದರಲ್ಲಿ ಕಪ್ಪೆಗಳು ವಾಸಿಸುತ್ತವೆ. ಹಾವುಗಳು ಇವುಗಳನ್ನು ತಿನ್ನುತ್ತವೆ. ಅದಕ್ಕಾಗಿಯೇ ಬರುತ್ತವೆ. ಮನೆ ಸುತ್ತ ನೀರು ನಿಂತರೆ, ಸಣ್ಣ ತೊಟ್ಟಿಗಳನ್ನು ನಿರ್ಮಿಸಿದರೆ ಎಚ್ಚರಿಕೆಯಿಂದಿರಿ. ಬಿಸಿಲಿನ ಸಮಯದಲ್ಲಿ ತಂಪಿಗಾಗಿಯೂ ಹಾವುಗಳು ಈ ರೀತಿಯ ತೇವಾಂಶ ಇರುವ ಸ್ಥಳಗಳನ್ನು ಹುಡುಕಿ ಬರುತ್ತವೆ.

ಮನೆಯನ್ನು ಅಲಂಕರಿಸಬೇಕೆಂದು ಬಳ್ಳಿಗಳಂತಹ ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು. ನೆಲದ ಮೇಲೆ ದಟ್ಟವಾಗಿ ಬೆಳೆಯುವ ಹುಲ್ಲುಹಾಸುಗಳನ್ನು ಹಾಕಬೇಡಿ. ಇವು ಹಾವುಗಳನ್ನು ಆಕರ್ಷಿಸುತ್ತವೆ. ಹಾವುಗಳಿಗೆ ತಂಪಾದ ವಾತಾವರಣವನ್ನು ಒದಗಿಸುವುದರಿಂದ ಅವು ಇಲ್ಲಿ ಬಂದು ವಾಸಿಸುತ್ತವೆ.

ಮನೆಯಲ್ಲಿ ದಟ್ಟವಾದ ಮರಗಳು, ಪೊದೆಗಳನ್ನು ಬೆಳೆಸಬೇಡಿ. ಇವು ಪ್ರಾಣಿಗಳು, ಪಕ್ಷಿಗಳು, ಕೀಟಗಳನ್ನು ಆಕರ್ಷಿಸುತ್ತವೆ. ಅವು ಬಂದು ವಾಸಿಸುವುದರಿಂದ ಹಾವುಗಳು ಅವುಗಳನ್ನು ತಿನ್ನಲು ಅಲ್ಲಿಗೆ ಬರುತ್ತವೆ. ಮನೆ ಸುತ್ತ ಪೊದೆಗಳಂತಹ ಗಿಡಗಳನ್ನು ಬೆಳೆಸಲೇಬಾರದು.

Source link

Leave a Reply

Your email address will not be published. Required fields are marked *