Karnataka man Behaded in US: ಅಮೆರಿಕಾದಲ್ಲಿ ಕರ್ನಾಟಕ ಮೂಲದ ಮ್ಯಾನೇಜರ್ ತಲೆಕಡಿದ ಕೆಲಸದವ | Karnataka Based Manager Beheaded In Us By His Employe

Karnataka man Behaded in US: ಅಮೆರಿಕಾದಲ್ಲಿ ಕರ್ನಾಟಕ ಮೂಲದ ಮ್ಯಾನೇಜರ್ ತಲೆಕಡಿದ ಕೆಲಸದವ | Karnataka Based Manager Beheaded In Us By His Employe



Karnataka man Behaded in US: ಅಮೆರಿಕಾದಲ್ಲಿ ಕರ್ನಾಟಕ ಮೂಲದ ಮ್ಯಾನೇಜರ್ ತಲೆಕಡಿದ ಕೆಲಸದವ | Karnataka Based Manager Beheaded In Us By His Employe

ಡಲ್ಲಾಸ್‌ನಲ್ಲಿ ಮೊಟೇಲ್ ಮಾಲೀಕರಾದ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ ಅವರನ್ನು ಉದ್ಯೋಗಿಯೇ ತಲೆಕಡಿದು ಹತ್ಯೆ ಮಾಡಿದ್ದಾನೆ. ಮುರಿದ ವಾಷಿಂಗ್ ಮೆಷಿನ್ ಬಳಸಬೇಡ ಎಂದು ಹೇಳಿದ್ದಕ್ಕೆ ಕೋಪಗೊಂಡ ಉದ್ಯೋಗಿ ಈ ಕೃತ್ಯ ಎಸಗಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತೀಯ ಮೂಲದ ವ್ಯಕ್ತಿಯೋರ್ವನನ್ನು ಆತನ ಮೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ತಲೆ ಕಡಿದು ಹತ್ಯೆ ಮಾಡಿದ ಭಯಾನಕ ಘಟನೆ ಅಮೆರಿಕಾದ ಡಲ್ಲಾಸ್‌ನಲ್ಲಿ ನಡೆದಿದೆ. ಮುರಿದ ವಾಶಿಂಗ್ ಮೆಷಿನ್ ಅನ್ನು ಬಳಸಬೇಡ ಎಂದು ಹೇಳಿದ್ದಕ್ಕೆ ಕ್ರೋಧಿತನಾದ ಕೆಲಸದವ ತನ್ನ ಮಾಲೀಕನನ್ನೇ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ವ್ಯಕ್ತಿಯನ್ನು ಯೊರ್ಡನಿಸ್ ಕೊಬೊಸ್ ಮಾರ್ಟಿನೇಜ್ ಎಂದು ಗುರುತಿಸಲಾಗಿದೆ. ಆತನನ್ನುಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಭಾರತದ ಕರ್ನಾಟಕದವರು ಎಂದು ತಿಳಿದು ಬಂದಿದ್ದು, 50 ವರ್ಷದ ಚಂದ್ರ ನಾಗಮಲೈ ಎಂದು ಗುರುತಿಸಲಾಗಿದೆ.

ತನ್ನ ಮ್ಯಾನೇಜರ್ ಜೊತೆ ವಾದ ಮಾಡಿದ ಆರೋಪಿ ಯೊರ್ಡನಿಸ್ ಬಳಿಕ ಮಚ್ಚಿನಿಂದ ಚಂದ್ರ ನಾಗಮಲೈ ಅವರ ತಲೆ ಕಡಿದಿದ್ದಾನೆ. ಬುಧವಾರ ಸೆಪ್ಟೆಂಬರ್ 10ರಂದು ಘಟನೆ ನಡೆದಿದೆ.

ತನ್ನ ಮಾತು ಕೇಳದ ಯೊರ್ಡನಿಸ್‌ಗೆ ತಾನೇ ಹೋಗಿ ಇನ್ನೊಮ್ಮೆ ಹೇಳುವ ಬದಲು ಚಂದ್ರ ನಾಗಮಲೈ, ತನ್ನ ಆದೇಶವನ್ನು ಭಾಷಾಂತರಿಸಿ ಹೇಳುವಂತೆ ಇನ್ನೊಬ್ಬ ಉದ್ಯೋಗಿಗೆ ಹೇಳಿದ್ದರಿಂದ ಈ ಉದ್ಯೋಗಿ ಯೊರ್ಡನಿಸ್ ಸಿಟ್ಟಿಗೆದ್ದ ಎಂದು ವರದಿಯಾಗಿದೆ. ಇದಾದ ನಂತರ ಆತ ಮಚ್ಚನ್ನು ತೆಗೆದುಕೊಂಡು ಬಂದು 50 ವರ್ಷದ ಚಂದ್ರನಾಗಮಲ್ಲಯ್ಯ ಅವರ ಮೇಲೆ ಹಲವು ಬಾರಿ ದಾಳಿ ಮಾಡಿದ್ದಾನೆ. ಈ ವೇಳೆ ಚಂದ್ರನಾಗಮಲ್ಲಯ್ಯ ಅವರು ಆತನಿಂದ ತಪ್ಪಿಸಿಕೊಳ್ಳವುದಕ್ಕಾಗಿ ತನ್ನ ಮೊಟೇಲ್‌ನ ಮುಂಭಾಗದ ಪಾರ್ಕಿಂಗ್‌ ಜಾಗಕ್ಕೆ ಓಡಿದ್ದಾರೆ ಆದರೆ ಆರೋಪ ಯೊರ್ಡನಿಸ್ ಅವರನ್ನು ಓಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.

ಈ ವೇಳೆ ಚಂದ್ರನಾಗಮಲ್ಲಯ್ಯ ಅವರ 18 ವರ್ಷದ ಮಗ ಹಾಗೂ ಪತ್ನಿ ಕೂಡ ಕಚೇರಿ ಮುಂಭಾಗದ ಪಾರ್ಕಿಂಗ್ ಪ್ರದೇಶಕ್ಕೆ ಬಂದು ಚಂದ್ರನಾಗಮಲ್ಲಯ್ಯ ಅವರನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯೊರ್ಡನಿಸ್ ಅವರಿಬ್ಬರನ್ನು ಮಚ್ಚು ಹಿಡಿದು ಓಡಿಸಿದ್ದಾನೆ. ನಂತರ ಚಂದ್ರನಾಗಮಲ್ಲಯ್ಯ ಅವರ ತಲೆಯನ್ನು ಕತ್ತರಿಸಿದ ಆತ ತಲೆಯನ್ನು ಚೆಂಡಿನಂತೆ ಒದ್ದಿದ್ದಾನೆ.

ಈ ಭಯಾನಕ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಲೆಯ ನಂತರ ಆತ ತಲೆಯನ್ನು ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ಎಸೆಯಲು ಹೋಗಿದ್ದಾನೆ. ಆತ ರಕ್ತಸಿಕ್ತವಾದ ಮಚ್ಚನ್ನು ಹಿಡಿದುಕೊಂಡು ಕಸದ ಬುಟ್ಟಿ ಇದ್ದ ಜಾಗದಿಂದ ಬರುತ್ತಿರುವ ದೃಶ್ಯ ವೀಡಿಯೋದಲ್ಲಿ ವೈರಲ್ ಆಗಿದ್ದು, ಆತ ಅಲ್ಲಿಂದ ಬರುತ್ತಿದ್ದಾಗಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *