World Athletics 2025 Tokyo | ಟೋಕಿಯೋ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಚಿನ್ನದ ಮೇಲೆ ಕಣ್ಣಿಟ್ಟ ನೀರಜ್ ಚೋಪ್ರಾ | World Athletics 2025 Tokyo Neeraj Chopra Targets Gold Kvn

World Athletics 2025 Tokyo | ಟೋಕಿಯೋ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಚಿನ್ನದ ಮೇಲೆ ಕಣ್ಣಿಟ್ಟ ನೀರಜ್ ಚೋಪ್ರಾ | World Athletics 2025 Tokyo Neeraj Chopra Targets Gold Kvn



World Athletics 2025 Tokyo | ಟೋಕಿಯೋ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಚಿನ್ನದ ಮೇಲೆ ಕಣ್ಣಿಟ್ಟ ನೀರಜ್ ಚೋಪ್ರಾ | World Athletics 2025 Tokyo Neeraj Chopra Targets Gold Kvn

ಟೋಕಿಯೋದಲ್ಲಿ ಆರಂಭವಾಗಲಿರುವ 20ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 19 ಮಂದಿ ಭಾಗವಹಿಸಲಿದ್ದಾರೆ. ಚಿನ್ನದ ಗೆಲುವಿನ ಭರವಸೆಯಾಗಿರುವ ನೀರಜ್ ಚೋಪ್ರಾ ಸತತ ಎರಡನೇ ಬಾರಿ ಚಿನ್ನ ಗೆಲ್ಲುವತ್ತ ಗಮನ ಹರಿಸಿದ್ದಾರೆ.  

ಟೋಕಿಯೋ: 20ನೇ ಆವೃತ್ತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಶನಿವಾರ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಚಾಲನೆ ಸಿಗಲಿದೆ. ಸೆಪ್ಟೆಂಬರ್ 21ರ ವರೆಗೂ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 19 ಮಂದಿ ಕಣದಲ್ಲಿದ್ದಾರೆ. ಆದರೆ ಹಾಲಿ ವಿಶ್ವಚಾಂಪಿಯನ್, ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮಾತ್ರ ಭಾರತದ ಪದಕ ಭರವಸೆಯಾಗಿದ್ದಾರೆ.

ನೀರಜ್ 2022ರಲ್ಲಿ ಬೆಳ್ಳಿ, 2023ರಲ್ಲಿ ಚಿನ್ನ ಗೆದ್ದಿದ್ದರು. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದರು. ಈ ಬಾರಿಯೂ ಅವರು ಚಿನ್ನದ ಮೇಲೆ ಕಣ್ಣಿಟ್ಟಿದ್ದು, ಸತತ 2 ಆವೃತ್ತಿಗಳಲ್ಲಿ ಚಿನ್ನ ಗೆದ್ದ ವಿಶ್ವದ 3ನೇ ಕ್ರೀಡಾಪಟು ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ.

ನೀರಜ್-ನದೀಂ ಸ್ಪರ್ಧೆ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ, ಕಳೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು. ಪಾಕಿಸ್ತಾನದ ಅರ್ಶದ್ ನದೀಂ ಚಿನ್ನ ಜಯಿಸಿದ್ದರು. ಆ ಬಳಿಕ ಇದೇ ಮೊದಲ ಬಾರಿ ನೀರಜ್ ಹಾಗೂ ನದೀಂ ಮುಖಾಮುಖಿಯಾಗಲಿದ್ದಾರೆ. ಅವರಿಗೆ ಜೆಕ್ ಗಣರಾಜ್ಯದ ಜಾಕುಬ್ ವೆಡ್ಲೆಚ್, ಜರ್ಮನಿಯ ಜೂಲಿಯನ್ ವೆಬರ್, ಕೀನ್ಯಾದ ಜೂಲಿಯಸ್‌ ಯೆಗೊ ಸೇರಿ ಪ್ರಮುಖರ ಸವಾಲು ಎದುರಾಗಲಿದೆ. ಉಳಿದಂತೆ ಜಾವೆಲಿನ್‌ನಲ್ಲಿ ಭಾರತದ ಸಚಿನ್ ಯಾದವ್, ಯಶ್ವಿರ್ ಸಿಂಗ್, ರೋಹಿತ್ ಯಾದವ್ ಕೂಡಾ ಕಣದಲ್ಲಿದ್ದಾರೆ. ಜಾವೆಲಿನ್‌ನ ಅರ್ಹತಾ ಸುತ್ತು ಸೆ.17ಕ್ಕೆ, ಫೈನಲ್ ಸುತ್ತು ಸೆ.18ರಂದು ನಡೆಯಲಿದೆ.

ಇಂದು ನಾಲ್ವರು ಸ್ಪರ್ಧೆ

ಭಾರತೀಯರು ಇರುವ ಸ್ಪರ್ಧೆಗಳು ಶನಿವಾರ ಆರಂಭಗೊಳ್ಳಲಿವೆ. 35 ಕಿ.ಮೀ. ರೇಸ್‌ವಾಕ್ ನಲ್ಲಿ ರಾಮ್ ಬಾಬು, ಸಂದೀಪ್ ಕುಮಾರ್, ಪ್ರಿಯಾಂಕ ಗೋಸ್ವಾಮಿ, 1500 ಮೀ. ರೇಸ್ ನಲ್ಲಿ ಪೂಜಾ ಸ್ಪರ್ಧಿಸಲಿದ್ದಾರೆ.

ಪಾರುಲ್, ಮುರಳಿ, ಅನಿಮೇಶ್ ಕಣಕ್ಕೆ

ನೀರಜ್ ಹೊರತಾಗಿ ಭಾರತದಿಂದ ಅನ್ನು ರಾಣಿ (ಮಹಿಳಾ ಜಾವೆಲಿನ್ ಎಸೆತ), ಪಾರುಲ್ (3000 ಮೀ. ಸ್ಟೀಪಲ್‌ಚೇಸ್), ಮುರಳಿ (ಲಾಂಗ್‌ಜಂಪ್), ಪ್ರವೀಣ್ (ಟ್ರಿಪಲ್ ಜಂಪ್), ಗುಲ್ಲೀರ್ ಸಿಂಗ್ (5000 ಮೀ. ಓಟ), ಅನಿಮೇಶ್ ಕುಜೂರ್ (200 ಮೀ.) ಸೇರಿ ಪ್ರಮುಖರು ಕಣದಲ್ಲಿದ್ದಾರೆ.

ಈವರೆಗೆ ಭಾರತಕ್ಕೆ ಸಿಕ್ಕಿದ್ದು 3 ಮೆಡಲ್!

ಅಥ್ಲೆಟಿಕ್ಸ್‌ನಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಭಾರತ ಸಾಧನೆ ಹೇಳಿಕೊಳ್ಳುವಂತದ್ದೇನೂ ಇಲ್ಲ. 1983ರಿಂದಲೂ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆದ್ದಿದ್ದು ಕೇವಲ 3 ಪದಕ. 2003ರಲ್ಲಿ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚು, ಜಾವೆಲಿನ್‌ನಲ್ಲಿ ನೀರಜ್ 2022ರಲ್ಲಿ ಬೆಳ್ಳಿ, 2023ರಲ್ಲಿ ಚಿನ್ನ ಜಯಿಸಿದ್ದಾರೆ.

ಸ್ಪರ್ಧೆಗಳು ಜಿಯೋಹಾಟ್‌ಸ್ಟಾರ್ ಹಾಗೂ ಸ್ಟಾರ್ ಸ್ಪೋರ್ಟ್ಸ್‌ನ ವಿವಿಧ ಚಾನೆಲ್‌ಗಳಲ್ಲಿ ಪ್ರಸಾರ.

 



Source link

Leave a Reply

Your email address will not be published. Required fields are marked *