Viral VIdeo: ಅಂಗಡಿಯಲ್ಲಿ ಕೆಲಸ ಮಾಡೋ ಯುವತಿಗೆ ಅಶ್ಲೀಲ ವಿಡಿಯೋ ಕಳಿಸಿದ ಮಾಲೀಕ, ಚಪ್ಪಲಿ ಪುಡಿ ಮಾಡಿದ ಲೇಡಿ! | Woman Thrashes Shop Owner Harassment Viral Video San

Viral VIdeo: ಅಂಗಡಿಯಲ್ಲಿ ಕೆಲಸ ಮಾಡೋ ಯುವತಿಗೆ ಅಶ್ಲೀಲ ವಿಡಿಯೋ ಕಳಿಸಿದ ಮಾಲೀಕ, ಚಪ್ಪಲಿ ಪುಡಿ ಮಾಡಿದ ಲೇಡಿ! | Woman Thrashes Shop Owner Harassment Viral Video San



Viral VIdeo: ಅಂಗಡಿಯಲ್ಲಿ ಕೆಲಸ ಮಾಡೋ ಯುವತಿಗೆ ಅಶ್ಲೀಲ ವಿಡಿಯೋ ಕಳಿಸಿದ ಮಾಲೀಕ, ಚಪ್ಪಲಿ ಪುಡಿ ಮಾಡಿದ ಲೇಡಿ! | Woman Thrashes Shop Owner Harassment Viral Video San

woman thrashes shop owner harassment ಕಲ್ಯಾಣ್‌ನಲ್ಲಿ ಅಂಗಡಿ ಮಾಲೀಕನ ಕಿರುಕುಳಕ್ಕೆ ಒಳಗಾದ ಯುವತಿ ಆತನಿಗೆ ಚಪ್ಪಲಿಯಿಂದ ಹೊಡೆದ ಘಟನೆ ವೈರಲ್. ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೂ ಯುವತಿಯನ್ನು ವಜಾ ಮಾಡಲಾಗಿದೆ.

ಥಾಣೆ (ಸೆ.13): ಇಲ್ಲಿನ ಕಲ್ಯಾಣ್ ಪೂರ್ವದ ಕೊಲ್ಸೆವಾಡಿ ಪ್ರದೇಶದಲ್ಲಿ ಶನಿವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಯುವತಿಯೊಬ್ಬಳು ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿದ ಆರೋಪದ ಮೇಲೆ ತನ್ನ ಮಾಲೀಕನಿಗೆ ಸಾರ್ವಜನಿಕವಾಗಿ ಥಳಿಸಿದ ಘಟನೆ ನಡೆದಿದೆ. ಈ ಇಡೀ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂಗಡಿಗೆ ನುಗ್ಗಿ ಚಪ್ಪಲಿಯಲ್ಲಿ ಬಾರಿಸಿದ ಯುವತಿ

ಯುವತಿ ಕೋಲ್ಸೆವಾಡಿಯ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದು,ಈ ಅಂಗಡಿಯ ಮಾಲೀಕ ನಿರಂತರವಾಗಿ ಆಕೆಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳಿಸೋದನ್ನು ಮಾಡುತ್ತಿದ್ದ. ಆಕೆಯ ಡ್ರೆಸ್‌ಗಳ ಬಗ್ಗೆ ಕಾಮೆಂಟ್‌ ಮಾಡುತ್ತಿದ್ದ ಎನ್ನಲಾಗಿದೆ. ನಿರಂತರವಾಗಿ ನಡೆಯುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ, ಯುವತಿ ಶನಿವಾರ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಕೋಪದಿಂದ ಅಂಗಡಿಯೊಳಗೆ ನುಗ್ಗಿ ಆತನಿಗೆ ಚಪ್ಪಲಿಯಲ್ಲಿ ಬಾರಿಸಿದ್ದಾಳೆ.

ಈ ನಾಟಕೀಯ ಬೆಳವಣಿಗೆ ಹಲವರು ಜನರ ಮುಂದೆಯೇ ನಡೆದಿದೆ. ಅವರಲ್ಲಿ ಹಲವರು ಲೇಡಿ ಚಪ್ಪಲಿ ಪುಡಿ ಮಾಡಿದ ವಿಡಿಯೋವನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಕಿರುಕುಳದಿಂದ ಸ್ಪಷ್ಟವಾಗಿ ನೊಂದಿದ್ದಂತೆ ಕಂಡಿದ್ದ ಯುವತಿ, ಅಂಗಡಿ ಮಾಲೀಕನಿಗೆ ಅಳುತ್ತಲೇ ತನ್ನ ಚಪ್ಪಲಿಯಿಂದ ಪದೇ ಪದೇ ಹೊಡೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸಾರ್ವಜನಿಕರ ಆಕ್ರೋಶ ಮತ್ತು ಕ್ಷಮೆಯಾಚನೆ

ಘಟನೆ ದೊಡ್ಡದಾಗುತ್ತಿದ್ದಂತೆ, ಅಂಗಡಿಯ ಹೊರಗಡೆ ಭಾರೀ ಜನಸಮೂಹ ಜಮಾಯಿಸಿತ್ತು. ಕೆಲವು ಸಾರ್ವಜನಿಕರು ಮತ್ತು ಹುಡುಗಿಯ ಸಂಬಂಧಿಕರು ಸ್ಥಳದಲ್ಲೇ ನ್ಯಾಯಕ್ಕಾಗಿ ಒತ್ತಾಯಿಸಿದರು. ಅವರು, ಅಂಗಡಿ ಮಾಲೀಕ, ಯುವತಿಯ ಕಾಲಿಗೆ ಬಿದ್ದು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು ಎಂದು ವರದಿಯಾಗಿದೆ.

ಇನ್ನೂ ಯಾವುದೇ ಪೊಲೀಸ್ ಕ್ರಮ ಕೈಗೊಂಡಿಲ್ಲ: ಸಾರ್ವಜನಿಕ ಆಕ್ರೋಶ ಮತ್ತು ವೈರಲ್ ವೀಡಿಯೊದ ಹೊರತಾಗಿಯೂ, ವರದಿ ಮಾಡುವ ಸಮಯದಲ್ಲಿ ಅಂಗಡಿಯವನ ವಿರುದ್ಧ ಯಾವುದೇ ಅಧಿಕೃತ ಪೊಲೀಸ್ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆಘಾತಕಾರಿಯಾಗಿ, ಈ ಘಟನೆಯ ನಂತರ ಯುವತಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಇನ್ನೂ ಔಪಚಾರಿಕ ಹೇಳಿಕೆ ನೀಡಿಲ್ಲ ಅಥವಾ ಪ್ರಕರಣ ದಾಖಲಿಸಿಲ್ಲ. ವೈರಲ್ ಆಗಿರುವ ಪುರಾವೆಗಳು ಮತ್ತು ಸಾರ್ವಜನಿಕರ ಆಕ್ರೋಶವನ್ನು ಗಮನಿಸಿದರೆ, ಅಂಗಡಿ ಮಾಲೀಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ನೋಡಲು ಅನೇಕರು ಈಗ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Scroll to load tweet…

 

 



Source link

Leave a Reply

Your email address will not be published. Required fields are marked *