‌ಮಾಳವಿಕಾ- ಅವಿನಾಶ್‌ರಂತೆ ಸೀರಿಯಲ್‌ನಲ್ಲಿ ನಟಿಸುವಾಗಲೇ, ಪ್ರೀತಿಯಲ್ಲಿ ಬಿದ್ದು ಮದುವೆಯಾದ ಜೋಡಿಗಳಿವು

‌ಮಾಳವಿಕಾ- ಅವಿನಾಶ್‌ರಂತೆ ಸೀರಿಯಲ್‌ನಲ್ಲಿ ನಟಿಸುವಾಗಲೇ, ಪ್ರೀತಿಯಲ್ಲಿ ಬಿದ್ದು ಮದುವೆಯಾದ ಜೋಡಿಗಳಿವು

‌ಮಾಳವಿಕಾ- ಅವಿನಾಶ್‌ರಂತೆ ಸೀರಿಯಲ್‌ನಲ್ಲಿ ನಟಿಸುವಾಗಲೇ, ಪ್ರೀತಿಯಲ್ಲಿ ಬಿದ್ದು ಮದುವೆಯಾದ ಜೋಡಿಗಳಿವು

ಮಾಯಾಮೃಗ ಧಾರಾವಾಹಿಯಲ್ಲಿ ನಟ ಅವಿನಾಶ್‌ ಹಾಗೂ ಮಾಳವಿಕಾ ನಟಿಸಿದ್ದರು. ಈ ಧಾರಾವಾಹಿಯಲ್ಲಿ ನಟಿಸುವಾಗಲೇ ಇವರಿಬ್ಬರಿಗೂ ಲವ್‌ ಆಗಿ ಮದುವೆಯಾಗಿದ್ದರು. ಈ ಜೋಡಿಗೆ ಓರ್ವ ಮಗನಿದ್ದಾನೆ. ಈ ರೀತಿ ಪ್ರೀತಿಸಿ ಮದುವೆಯಾದ ಜೋಡಿಗಳಿವು

ಇಂದು ಮಾಳವಿಕಾ ಹಾಗೂ ಅವಿನಾಶ್‌ ಅವರು ಸೀರಿಯಲ್‌, ಸಿನಿಮಾ ಎಂದು ಚಿತ್ರರಂಗದಲ್ಲಿ ಬ್ಯುಸಿಯಿದ್ದಾರೆ. 27 ವರ್ಷಗಳ ಬಳಿಕ ಅವಿನಾಶ್‌ ಅವರು ಸೀರಿಯಲ್‌ಗೆ ಕಂಬ್ಯಾಕ್‌ ಮಾಡಿದ್ದಾರೆ. ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ಅವರು ನಟಿಸಿದ್ದಾರೆ.

ಚಂದನ್‌ ಕುಮಾರ್-‌ ಕವಿತಾ ಗೌಡ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಸೀರಿಯಲ್‌ನಲ್ಲಿ ಸ್ನೇಹಿತರಾಗಿದ್ದ ಈ ಜೋಡಿ ಆಮೇಲೆ ಬೇರೆ ಬೇರೆ ಪ್ರಾಜೆಕ್ಟ್‌ ಮಾಡಿದರೂ ಕೂಡ, ಸ್ನೇಹವನ್ನು ಹಾಗೆ ಉಳಿಸಿಕೊಂಡಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಆಮೇಲೆ ಇವರಿಬ್ಬರು 2021ರಲ್ಲಿ ಮದುವೆ ಆದರು.

ಮಹಾಸತಿ ಧಾರಾವಾಹಿಯಲ್ಲಿ ವಿನಯ್‌ ಯುಜೆ ಹಾಗೂ ಐಶ್ವರ್ಯಾ ಯುಜೆ ಅವರು ನಟಿಸಿದ್ದರು. ಇದು ಇವರಿಬ್ಬರ ಫಸ್ಟ್‌ ಸೀರಿಯಲ್.‌ ಆ ಬಳಿಕ ಈ ಜೋಡಿ ಪ್ರೀತಿಸಿ 2022ರಲ್ಲಿ ಮದುವೆಯಾಗಿದೆ. ಈಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.

‘ರಾಜಾ ರಾಣಿ’ ಧಾರಾವಾಹಿಯಲ್ಲಿ ಶಶಿ ಹೆಗಡೆ ಹಾಗೂ ಲಾವಣ್ಯಾ ಭಾರದ್ವಾಜ್‌ ಅವರು ನಟಿಸಿದ್ದರು. ಈ ಧಾರಾವಾಹಿಯಲ್ಲಿ ಶಶಿ ಅಣ್ಣನ ಪಾತ್ರ ಮಾಡಿದ್ದರೆ, ಲಾವಣ್ಯಾ ಅವರು ತಂಗಿ ಪಾತ್ರ ಮಾಡಿದ್ದರು. ಇವರಿಬ್ಬರು ಪ್ರೀತಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.

‘ಪಾಪ ಪಾಂಡು’ ಧಾರಾವಾಹಿಯಲ್ಲಿ ನಟಿಸಿದ್ದ ನಮಿತಾ ರಾವ್‌, ವಿಕ್ರಮ್‌ ಸೂರಿ ಕೂಡ ಪ್ರೀತಿಸಿ ಮದುವೆಯಾಗಿದ್ದರು. ಇವರು ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. ಈ ಜೋಡಿ ನಟನೆ, ನಿರ್ದೇಶನ ಎಂದು ಬ್ಯುಸಿ ಇದೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಕುಲವಧು’ ಧಾರಾವಾಹಿಯಲ್ಲಿ ಆಕರ್ಷ್‌, ದೀಪಿಕಾ ನಟಿಸಿದ್ದರು. ಇವರಿಬ್ಬರು ಲವ್‌ ಮಾಡಿ ಮದುವೆಯಾಗಿದ್ದಾರೆ. ಈಗ ಈ ಜೋಡಿ ಚಿತ್ರರಂಗದಲ್ಲಿ ಬ್ಯುಸಿ ಇದೆ.

ಅಮೃತಾ ರಾಮಮೂರ್ತಿ ಹಾಗೂ ರಘು ಅವರು ‘ಮಿಸ್ಟರ್‌ ಮಿಸ್‌ಸ್‌ ರಂಗೇಗೌಡ’ ಧಾರಾವಾಹಿಯಲ್ಲಿ ನಟಿಸಿದ್ದರು. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿಗೆ ಓರ್ವ ಮಗಳಿದ್ದಾಳೆ.

ಒಟ್ಟೂ 1162 ಕಂತುಗಳನ್ನು ಪೂರೈಸಿದ್ದ ʼಸಿಲ್ಲಿ ಲಲ್ಲಿʼ ಧಾರಾವಾಹಿಯಲ್ಲಿ ರೂಪಾ ಪ್ರಭಾಕರ್‌ ಹಾಗೂ ಪ್ರಶಾಂತ್‌ ನಟಿಸಿದ್ದರು. ಇವರಿಬ್ಬರ ಮಧ್ಯೆ ಶುರುವಾದ ಸ್ನೇಹ, ಪ್ರೀತಿಗೆ ತಿರುಗಿತ್ತು. ಕುಟುಂಬದ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಿದೆ. ಇವರಿಗೆ ಆಲಾಪ್‌ ಎಂಬ ಮಗನಿದ್ದಾನೆ.

Source link

Leave a Reply

Your email address will not be published. Required fields are marked *