ಐಯ್ಯಂಗಾರ್ ಬೇಕರಿಗಳು ತಮ್ಮ ಪಪ್ಸ್, ಹನಿ ಕೇಕ್, ಬನ್ ಗಳಿಗಾಗಿ ಸಖತ್ ಫೇಮಸ್. ಬೆಂಗಳೂರಿನಲ್ಲಿ ಯಾವ ಐಯ್ಯಂಗಾರಿ ಬೇಕರಿಯಲ್ಲಿ ನೀವು ಏನು ಟ್ರೈ ಮಾಡಬಹುದು ನೋಡೋಣ.

ಇದೀಗ ಸಿಟಿಯಲ್ಲಿ ಅದೆಷ್ಟೊ ಹೊಸ ಹೊಸ ಬೇಕರಿಗಳು ಬಂದಿವೆ. ಆದರೆ ಐಯ್ಯಂಗಾರ್ ಬೇಕರಿಯಲ್ಲಿ (Iyengar Bakery) ಸಿಗುವ ಪಪ್ಸ್, ಹನಿ ಕೇಕ್, ಬನ್ ರುಚಿ ಬೇರೆ ಯಾವ ಬೇಕರಿಯಲ್ಲೂ ಸಹ ಸಿಗಲ್ಲ. ನೀವು ಅಯ್ಯಂಗಾರ್ ಬೇಕರಿ ಪ್ರಿಯರಾಗಿದ್ದರೆ, ಬೆಂಗಳೂರಿನ ಈ 7 ಬೇಕರಿಯಲ್ಲಿ ನೀವು ಟ್ರೈ ಮಾಡಲೇಬೇಕು.

ಐಯ್ಯಂಗಾರ್ ಬೇಕರಿ, ಜಯನಗರ

ಜಯನಗರದ 4ನೇ ಬ್ಲಾಕ್ ನಲ್ಲಿರುವ ಈ ಬೇಕರಿ ಯಾವಾಗಲೂ ಜನರಿಂದ ತುಂಬಿರುತ್ತದೆ. ಇಲ್ಲಿ ಸಿಗುವ ಹನಿ ಕೇಕ್ (Honey cake), ದಿಲ್ ಪಸಂದ್ ಕಳೆದ ಹಲವು ವರ್ಷಗಳಿಂದ ಜನರ ಫೇವರಿಟ್ ಆಗಿದೆ.

ವಿ.ಬಿ. ಬೇಕರಿ, ವಿವಿ ಪುರಂ

1960ನೇ ಇಸವಿಯಿಂದ ಈ ಬೇಕರಿ ಬೆಸ್ಟ್ ಸ್ಟ್ರೀಟ್ ಫುಡ್ ಐಕಾನ್ (street food icon) ಆಗಿದೆ. ಕಾಂಗ್ರೇಸ್ ಬನ್ ಹುಟ್ಟಿಕೊಂಡಿದ್ದು ಇಲ್ಲಿಯೇ. ಖಾರ ಬನ್, ಸ್ಪೈಸಿ ಮಸಾಲ ಬ್ರೆಡ್, ಜೊತೆಗೆ ಹನಿ ಕೇಕ್ ಇಲ್ಲಿ ನೀವು ಟ್ರೈ ಮಾಡಲೇಬೇಕು.

ಓಜಿ ವಾರಿಯರ್ ಆಂಡ್ ಸನ್ಸ್ ರಾಜಾಜಿನಗರ

ಯಾವುದೇ ಪ್ರಿಸರ್ವೇಟಿವ್ಸ್ ಬಳಸದೇ ಇನ್ನು ಹಳೆಯ ವಿಧಾನಗಳನ್ನು ಬಳಸಿ ಮಾಡುವಂತಹ ಬೇಕರಿ ಇದು. ಇಲ್ಲಿನ ಬಟರ್ ಬಿಸ್ಕೆಟ್ (butter cookies), ಬಿಸಿ ಬಿಸಿ ಬ್ರೆಡ್, ಕೊಕನಟ್ ಕುಕ್ಕೀಸ್ ಸಖತ್ ಆಗಿರುತ್ತದೆ.

ಶ್ರೀ ಜಯಲಕ್ಷ್ಮೀ ಬೇಕರಿ, ಶಾಂತಿ ನಗರ

ಫ್ರೆಶ್ ಬನ್, ವೆಜ್ ಪಫ್ಸ್, ಬಟರ್ ಕುಕ್ಕೀಸ್ ಮತ್ತು ಆಪಲ್ ಕೇಕ್ ಗಳಿಗೆ ಹೆಸರುವಾಸಿಯಾದಂತಹ ಒಂದು ಅತ್ಯುತ್ತಮ ಬೇಕರಿ ಇದಾಗಿದೆ.

ಎಲ್. ಜೆ ಅಯ್ಯಂಗಾರ್ ಬೇಕರಿ, ಮಲ್ಲೇಶ್ವರಂ

80ರ ದಶಕದಿಂದಲೂ ಇದು ಫೇಮಸ್. ಇಲ್ಲಿ ಸಿಗುವ ಕ್ರಿಸ್ಪಿ ಖಾರ ಬಿಸ್ಕಟ್, ಕ್ರೀಮಿ ವೆಜ್ ಪಫ್ಸ್, ವೆನಿಲ್ಲಾ ಸ್ಪಾಂಜ್ ಕೇಕ್ ಇಲ್ಲಿನ ಜನಪ್ರಿಯ ತಿನಿಸುಗಳು.

ಬನ್ ವರ್ಲ್ಡ್, ಮಲ್ಲೇಶ್ವರಂ

1995ರಲ್ಲಿ ಆರಂಭವಾದ ಈ ಬೇಕರಿ, ಅಯ್ಯಂಗಾರ್ ಬೇಕರಿಯ ಹಾದಿಯಲ್ಲೇ ನಡೆದುಕೊಂಡು ಬಂದಿದೆ. ಇಲ್ಲಿ ಸಿಗುವ ಮಾಯಿಸ್ಟ್ ಎಗ್ ಲೆಸ್ ಕೇಕ್ (Moist eggless cake), ಸಾಫ್ಟ್ ಬನ್ಸ್, ಮಾವಾ ಕೇಕ್, ಫಿಲ್ಟರ್ ಕಾಫಿ ಸಿಕ್ಕಾಪಟ್ಟೆ ಫೇಮಸ್.

ಶ್ರೀನಿವಾಸ ಬ್ರಾಹ್ಮಿಣ್ಸ್ ಬೇಕರಿ, ಬಸವನಗುಡಿ

ಈ ಬೇಕರಿ 1958ರಲ್ಲಿ ಆರಂಭವಾಗಿದೆ, ಇದನ್ನು ಹೆರಿಟೇಜ್ ಬೇಕರಿ ಅಂತಾನೆ ಹೇಳಬಾಹುದು. ತಲತಲಾಂತರಗಳಿಂದ ಕುಟುಂಬ ನಡೆಸಿಕೊಂಡು ಬಂದಿದೆ. ಇಲ್ಲಿನ ಬಟರಿ ಬನ್ಸ್, ಕ್ರಂಚಿ ರಸ್ಕ್ಸ್, ಆಪಲ್ ಕೇಕ್, ಕೋಕನಟ್ ಬಿಸ್ಕಟ್ ಎಲ್ಲವೂ ಫೇಮಸ್.

Source link
ಬೆಂಗಳೂರಿಗರು ಒಂದ್ಸಲನಾದ್ರು ಭೇಟಿ ನೀಡಲೇಬೇಕಾದ 7 ಐಕಾನಿಕ್ ಐಯ್ಯಂಗಾರ್ ಬೇಕರಿಗಳು…