Finance Ministry Official ಹಣಕಾಸು ಸಚಿವಾಲಯ ಅಧಿಕಾರಿ ಬೈಕ್‌ಗೆ ಕಾರು ಡಿಕ್ಕಿ, ನವಜೋತ್ ಸಿಂಗ್ ಸಾವು, ಪತ್ನಿ ಗಂಭೀರ | Finance Ministry Officials Dies Wife Injured After Bmw Car Hits His Bike Delhi

Finance Ministry Official ಹಣಕಾಸು ಸಚಿವಾಲಯ ಅಧಿಕಾರಿ ಬೈಕ್‌ಗೆ ಕಾರು ಡಿಕ್ಕಿ, ನವಜೋತ್ ಸಿಂಗ್ ಸಾವು, ಪತ್ನಿ ಗಂಭೀರ | Finance Ministry Officials Dies Wife Injured After Bmw Car Hits His Bike Delhi



Finance Ministry Official ಹಣಕಾಸು ಸಚಿವಾಲಯ ಅಧಿಕಾರಿ ಬೈಕ್‌ಗೆ ಕಾರು ಡಿಕ್ಕಿ, ನವಜೋತ್ ಸಿಂಗ್ ಸಾವು, ಪತ್ನಿ ಗಂಭೀರ | Finance Ministry Officials Dies Wife Injured After Bmw Car Hits His Bike Delhi

ಹಣಕಾಸು ಸಚಿವಾಲಯ ಅಧಿಕಾರಿ ಬೈಕ್‌ಗೆ ಕಾರು ಡಿಕ್ಕಿ, ನವಜೋತ್ ಸಿಂಗ್ ಸಾವು, ಪತ್ನಿ ಗಂಭೀರ , ಪತ್ನಿ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. BMW ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.

ನವದೆಹಲಿ (ಸೆ.15) ಪತ್ನಿ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ಕೇಂದ್ರ ಹಣಕಾಸು ಸಚಿವಾಲಯ ಅಧಿಕಾರಿ ನವಜೋತ್ ಸಿಂಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ಕಂಟೋನ್ಮೆಟ್ ಮೆಟ್ರೋ ನಿಲ್ದಾಣದ ಬಳಿಕ ರಿಂಗ್ ರೋಡ್ ಮೂಲಕ ಸಾಗುತ್ತಿದ್ದ ವೇಳೆ ಅತೀ ವೇಗದಿಂದ ಆಗಮಿಸಿದ BMW ಕಾರು ಡಿಕ್ಕಿಯಾಗಿದೆ. 52 ವರ್ಷದ ನವಜೋತ್ ಸಿಂಗ್ ಗಂಭೀರ ಗಾಯಗಳಿಂದ ಮೃತಪಟ್ಟರೆ, ಸಂದೀಪ್ ಕೌರ್ ತೀವ್ರ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಮರಳುವಾಗ ಘಟನೆ

ಭಾನುವಾರ (ಸೆ.14) ಕಚೇರಿಗೆ ರಜಾ ದಿನವಾದ ಕಾರಣ ನವಜೋತ್ ಸಿಂಗ್ ಪತ್ನಿ ಜೊತೆ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ತೆರಳಿದ್ದರು. ಪ್ರಾರ್ಥನೆ ಸಲ್ಲಿಸುವ ಮರಳುತ್ತಿರುವಾಗ ಘಟನೆ ಸಂಭವಿಸಿದೆ. ಮಹಿಳೆ ಚಲಾಯಿಸುತ್ತಿದ್ದ BMW ಕಾರು ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ನವಜೋತ್ ಸಿಂಗ್ ಡೈವೈಡರ್‌ಗೆ ಬಡಿದು ರಸ್ತೆಗೆ ಬಿದ್ದಿದ್ದಾರೆ. ಇತ್ತ ಪತ್ನಿ ಸಂದೀಪ್ ಕೌರ್ ಕೂಡ ರಸ್ತೆಗೆ ಬಿದ್ದು ತೀವ್ರಗಾಯಗೊಂಡಿದ್ದಾರೆ. ತಕ್ಷಣವೇ ಕಾರಿನಲ್ಲಿದ್ದ ಮಹಿಳೆ ಹಾಗೂ ಆಕೆಯ ಪತಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗಳಿಂದ ನವಜೋತ್ ಸಿಂಗ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಅಸ್ಥಿ ವಿಸರ್ಜಿಸಿ ಹಿಂದಿರುಗುತ್ತಿದ್ದ ಕಾರ್ ಅಪಘಾತ; ಇಬ್ಬರು ಮಕ್ಕಳು ಸೇರಿದಂತೆ ಏಳು ಜನರ ಸಾವು

ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ

52 ವರ್ಷದ ನವಜೋತ್ ಸಿಂಗ್, ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಿರಿಯ ಅಧಿಕಾರಿಯಾಗಿದ್ದ ನವಜೋತ್ ಸಿಂಗ್ ದೆಹಲಿಯ ಹರಿನಗರದಲ್ಲಿ ವಾಸವಿದ್ದರು. ಘಟನೆಯಲ್ಲಿ BMW ಕಾರು ಚಲಾಯಿಸುತ್ತಿದ್ದ ಮಹಿಳೆಯ ಪತಿಗೂ ಗಾಯವಾಗಿದೆ. ನವಜೋತ್ ಸಿಂಗ್ ಪತ್ನಿ ಸಂದೀಪ್ ಕೌರ್ ಹಾಗೂ ಕಾರು ಚಾಲಕಿ ಪತಿ ಇಬ್ಬರೂ ನ್ಯೂಲೈಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

17 ಕಿಲೋಮೀಟರ್ ದೂರದ ಆಸ್ಪತ್ರೆ ಸಾಗಿಸಿದ್ದೇ ತಪ್ಪಾಯಿತಾ?

ಮಹಿಳೆ ಚಲಾಯಿಸುತ್ತಿದ್ದ BMW ಕಾರು ನವಜೋತ್ ಸಿಂಗ್ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತದ ಬಳಿಕ ನವಜೋತ್ ಸಿಂಗ್ ಹಾಗೂ ಪತ್ನಿ ಸಂದೀಪ್ ಕೌರ್ ಹಾಗೂ ಮಹಿಳೆಯ ಪತಿ ಮೂವರನ್ನು ಖಾಸಗಿ ಕ್ಯಾಬ್ ಮೂಲಕ ಮಹಿಳೆ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಮಹಿಳೆ ಸ್ಥಳೀಯ ಆಸ್ಪತ್ರೆ ದಾಖಲಿಸಿ ತಕ್ಷಣದ ಚಿಕಿತ್ಸೆ ನೀಡುವ ಬದಲು 17 ಕಿಲೋಮೀಟರ್ ದೂರದ ನ್ಯೂಲೈಫ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರ ನಡುವೆ ತೀವ್ರ ರಕ್ತಸ್ರಾವದಿಂದ ನವಜೋತ್ ಸಿಂಗ್ ಮೃತಪಟ್ಟಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೆ ನವಜೋತ್ ಸಿಂಗ್ ಪ್ರಾಣ ಉಳಿಸಬಹುದಿತ್ತು ಅನ್ನೋ ಮಾತುಗಳು ಕೇಳಿಬಂದಿದೆ.

ಹಾಸನ ದುರಂತಕ್ಕೆ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಬೈಕ್ ಹಾಗೂ ಕಾರು ವಶಕ್ಕೆ ಪಡೆದ ಪೊಲೀಸ್

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. BMW ಕಾರು ಹಾಗೂ ನವಜೋತ್ ಸಿಂಗ್ ಬೈಕ್ ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಿಂದ ಮಾಹಿತ ಕಲೆ ಹಾಕಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಆಸ್ಪತ್ರೆಗೆ ಭೇಟಿ ನೀಡಿರುವ ಪೊಲೀಸರು ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಆರೋಗ್ಯ ವಿಚಾರಿಸಿದ್ದಾರೆ. BMW ಕಾರು ಚಲಾಯಿಸುತ್ತಿದ್ದ ಮಹಿಳಾ ಚಾಲಕಿಯನ್ನು ವಿಚಾರಣೆ ನಡೆಸಲಿದ್ದಾರೆ. 

 



Source link

Leave a Reply

Your email address will not be published. Required fields are marked *