Headlines

ಮತಪಟ್ಟಿ ಪರಿಷ್ಕರಣೆ ವೇಳೆ ಆಯೋಗದ ವಿಧಾನ ಲೋಪವಿದ್ದರೆ ಪ್ರಕ್ರಿಯೆ ರದ್ದು : ಸುಪ್ರೀಂಕೋರ್ಟ್‌ | Will Scrap Sir If Illegality Found In Methodology Says Supreme Court

ಮತಪಟ್ಟಿ ಪರಿಷ್ಕರಣೆ ವೇಳೆ ಆಯೋಗದ ವಿಧಾನ ಲೋಪವಿದ್ದರೆ ಪ್ರಕ್ರಿಯೆ ರದ್ದು : ಸುಪ್ರೀಂಕೋರ್ಟ್‌ | Will Scrap Sir If Illegality Found In Methodology Says Supreme Court



ಮತಪಟ್ಟಿ ಪರಿಷ್ಕರಣೆ ವೇಳೆ ಆಯೋಗದ ವಿಧಾನ ಲೋಪವಿದ್ದರೆ ಪ್ರಕ್ರಿಯೆ ರದ್ದು : ಸುಪ್ರೀಂಕೋರ್ಟ್‌ | Will Scrap Sir If Illegality Found In Methodology Says Supreme Court

ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗವು ಬಿಹಾರದಲ್ಲಿ ಕಾನೂನು ಪಾಲಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ನಾವು ಭಾವಿಸಿದ್ದೇವೆ. ಒಂದು ವೇಳೆ ಆಯೋಗದ ವಿಧಾನದಲ್ಲಿಯೇ ಯಾವುದಾದರೂ ಲೋಪವಿದ್ದರೆ, ಪರಿಷ್ಕರಣೆ ಪ್ರಕ್ರಿಯೆಯನ್ನೇ ರದ್ದು ಮಾಡುವುದಾಗಿ ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

ನವದೆಹಲಿ: ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗವು ಬಿಹಾರದಲ್ಲಿ ಕಾನೂನು ಪಾಲಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ನಾವು ಭಾವಿಸಿದ್ದೇವೆ. ಒಂದು ವೇಳೆ ಆಯೋಗದ ವಿಧಾನದಲ್ಲಿಯೇ ಯಾವುದಾದರೂ ಲೋಪವಿದ್ದರೆ, ಪರಿಷ್ಕರಣೆ ಪ್ರಕ್ರಿಯೆಯನ್ನೇ ರದ್ದು ಮಾಡುವುದಾಗಿ ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ. ಜತೆಗೆ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿರುವ ಕುರಿತ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅ.7ಕ್ಕೆ ನಿಗದಿಪಡಿಸಿದೆ.

ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾ.ಜೋಯ್‌ಮಲ್ಯ ಬಗ್ಚಿ ಅವರಿದ್ದ ಪೀಠವು, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ನಮ್ಮ ತೀರ್ಪು ಇಡೀ ದೇಶಕ್ಕೆ ಅನ್ವಯವಾಗಲಿದೆ ಎಂದು ಹೇಳಿದೆ. ಆದರೆ ಆಯೋಗವು ದೇಶಾದ್ಯಂತ ಇದೇ ರೀತಿಯ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಈ ನಡುವೆ, ಬಿಹಾರ ಮತಪದಾರರ ಪಟ್ಟಿ ಪರಿಷ್ಕರಣೆ ವೇಳೆ ಆಧಾರ್‌ ಕಾರ್ಡ್‌ ಅನ್ನೂ ಒಂದು ದಾಖಲೆಯಾಗಿ ಪರಿಗಣಿಸುವಂತೆ ನಿರ್ದೇಶಿಸಿ ಸೆ.8ರಂದು ನೀಡಿದ್ದ ತೀರ್ಪು ಹಿಂಪಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಅರ್ಜಿದಾರರಿಗೆ ನೋಟಿಸ್‌ ಕೂಡ ನೀಡಿದೆ. ಆಧಾರ್‌ ಕಾರ್ಡ್‌ ನಾಗರಿಕತ್ವವನ್ನು ನಿರ್ಧರಿಸುವ ದಾಖಲೆಯಾಗದಿದ್ದರೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅದನ್ನೂ ಒಂದು ದಾಖಲೆಯನ್ನಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸೆ.8ರಂದು ಸೂಚಿಸಿತ್ತು.

ಮತಗಳ್ಳತನ ಪಿತೂರಿಯ ಹಿಂದೆಯೂ ವಿದೇಶಿ ಕೈವಾಡ? ಸಿಕ್ಕೇ ಬಿಟ್ಟಿತು ಸಾಕ್ಷ್ಯ

ಇತ್ತೀಚಿನ ದಿನಗಳಲ್ಲಿ ಮತಗಳ್ಳತನದ ಆರೋಪ ಬಹಳ ಸದ್ದು ಮಾಡುತ್ತಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೋದಲ್ಲಿ ಬಂದಲ್ಲಿ ಇದೇ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಖುದ್ದು ಚುನಾವಣಾ ಆಯೋಗ ಹೇಳಿದ್ದರೂ ಸಂಸತ್ತಿನ ಅಧಿವೇಶನವನ್ನೂ ನಡೆಸಲು ಕೊಡದೇ ಕಾಂಗ್ರೆಸ್ಸಿಗರ ಭಾರಿ ಕೋಲಾಹಲವನ್ನೇ ಸೃಷ್ಟಿಸಿದ್ದರು. ಕರ್ನಾಟಕದಲ್ಲಿಯೂ ಇದರ ಕಾವು ಬಹು ಜೋರಾಗಿಯೇ ನಡೆಯುತ್ತಿದೆ. ಆದರೆ ಇದೀಗ ಶಾಕಿಂಗ್​ ವಿಷಯವೊಂದು ಬಯಲಿಗೆ ಬಂದಿದೆ. ಅದೇನೆಂದರೆ, ಮತಗಳ್ಳತನ (Vote Chori) ಆರೋಪದ ದಾಖಲೆ ಹಿಂದೆ ವಿದೇಶಿ ಕೈವಾಡ ಇರುವುದು ಬಯಲಾಗಿದೆ? ಈ ಬಗ್ಗೆ ವಿಷಯ ಹೊರಬರುತ್ತಲೇ ಕಾಂಗ್ರೆಸ್​ ಕಾರ್ಯಕರ್ತರು ಸಮರ್ಥಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಸಿಕ್ಕಿದೆ ಪುರಾವೆ!

ಭಾರತ ಚುನಾವಣಾ ಆಯೋಗಕ್ಕೆ (ECI) ಕಳಂಕ ತರುವ ‘ವೋಟ್ ಚೋರಿ’ ಪಿತೂರಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಈಗ ಉತ್ತರಿಸಬೇಕಿದೆ ಎಂದು ಬಿಜೆಪಿ ಹೇಳುತ್ತಿದೆ. ಅಷ್ಟಕ್ಕೂ ಈ ವರ್ಷದ ಆಗಸ್ಟ್ 7 ರಂದು ನಡೆದ ತಮ್ಮ ಪತ್ರಿಕಾಗೋಷ್ಠಿಯಲ್ಲಿ ರಾಹುಲ್​ ಗಾಂಧಿ ಮಂಡಿಸಿದ ದಾಖಲೆಯನ್ನು ಮ್ಯಾನ್ಮಾರ್ ದೇಶದಲ್ಲಿ ಸಿದ್ಧಪಡಿಸಲಾಗಿದೆ ಎಂದು ಇದೀಗ ಬೆಳಕಿಗೆ ಬಂದಿದೆ. ಇದನ್ನು ಮೊದಲು Xನಲ್ಲಿ ರಿವೀಲ್​ ಮಾಡಿದ್ದು, ‘ಖುರ್ಪೆಂಚ್’. ರಾಹುಲ್ ಗಾಂಧಿಯವರ ‘ವೋಟ್ ಚೋರಿ’ ದಾಖಲೆಯನ್ನು ಭಾರತದ ಹೊರಗೆ ರಚಿಸಲಾಗಿದೆ ಎನ್ನುವ ಮೂಲಕ ಬಲವಾದ ಪುರಾವೆಗಳನ್ನು ಅವರು ಹಂಚಿಕೊಂಡಿದ್ದಾರೆ!



Source link

Leave a Reply

Your email address will not be published. Required fields are marked *