
ಖಜುರಾಹೋ ದೇಗುಲದ ವಿರೂಪಗೊಂಡ ವಿಷ್ಣುವಿನ ವಿಗ್ರಹ ಸರಿಪಡಿಸಲು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಿಜೆಐ ಬಿ.ಆರ್.ಗವಾಯಿ ತಿರಸ್ಕರಿಸಿದ್ದಾರೆ. ಅರ್ಜಿದಾರರಿಗೆ ‘ಹೋಗಿ ವಿಷ್ಣುವನ್ನೇ ಕೇಳು’ ಎಂದು ಅವರು ನೀಡಿದ ಹೇಳಿಕೆಯು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಹೋಗಿ ವಿಷ್ಣುನನ್ನೇ ಕೇಳು: ಹಿಂದೂ ದೇವರ ವಿಗ್ರಹ ವಿರೂಪದ ಕುರಿತು ಸಿಜೆಐ ಗವಾಯಿ ಹೇಳಿಕೆ ವಿವಾದ
ನವದೆಹಲಿ: ಮಧ್ಯಪ್ರದೇಶದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿರುವ ಖಜುರಾಹೋ ದೇಗುಲದಲ್ಲಿ ವಿಷ್ಣುವಿನ ವಿರೂಪಗೊಂಡಿದ್ದ ವಿಗ್ರಹ ಸರಿಪಡಿಸುವಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾ। ಬಿ.ಆರ್.ಗವಾಯಿ ಅವರು ನೀನು ವಿಷ್ಣುವಿನ ಪರಮಭಕ್ತನಲ್ಲವೇ ಹೋಗಿ ವಿಷ್ಣುವನ್ನೇ ಕೇಳು. ಹೋಗಿ ಪ್ರಾರ್ಥನೆ ಮಾಡು ಎಂದು ಅರ್ಜಿದಾರನಿಗೆ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ರಾಕೇಶ್ ದಲಾಲ್ ಎಂಬುವರು 7 ಅಡಿ ಎತ್ತರದ ತಲೆ ತುಂಡಾಗಿರುವ ವಿಗ್ರಹ ಸರಿಪಡಿಸುವಂತೆ ಸರ್ಕಾರಗಳಿಗೆ ಮನವಿ ಕೊಟ್ಟು ಸಾಕಾಗಿದೆ. ವಿರೂಪಗೊಂಡ ವಿಗ್ರಹವು ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ. ಹೀಗಾಗಿ ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸಿಜೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸುಪ್ರೀಂಕೋರ್ಟ್ ಸಿಜೆಯ ಈ ಅಸಡ್ಡೆ ಮಾತಿಗೆ ಆಕ್ರೋಶ ವ್ಯಕ್ತವಾಗಿದೆ.
ಮಾಲಿನ್ಯದ ಕಾರಣ ದಿಲ್ಲಿ ಕೆಂಪು ಕೋಟೆ ಇದೀಗ ಕಪ್ಪುಕೋಟೆ: ಕಳವಳ
ನವದೆಹಲಿ: ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ದೆಹಲಿಯ ಕೆಂಪುಕೋಟೆಯ ಹೊಳಪು ವಾಯುಮಾಲಿನ್ಯದಿಂದ ಮಾಸುತ್ತಿದೆ ಎಂದು ಕೇಂದ್ರ ಸರ್ಕಾರದ ವರದಿ ಕಳವಳ ವ್ಯಕ್ತಪಡಿಸಿದೆ. ವಾಯುಮಾಲಿನ್ಯ ಏರಿಕೆಯಿಂದಾಗಿ ಕೆಂಪುಕೋಟೆಯ ಕೆಂಪು ಮರಳುಗಲ್ಲುಗಳ ಮೇಲೆ ಕಪ್ಪಾದ ಪದರ ಸೃಷ್ಟಿಯಾಗುತ್ತಿದೆ. ಈ ಪದರವು ಕಲ್ಲಿನ ಹೊಳಪು ಕೊಗ್ಗಿಸಿ ಕಲ್ಲಿನ ಮೇಲೆ ರಾಸಾಯನಿಕ ಅಡ್ಡ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ. ಕೇಂದ್ರ ವಿಜ್ಞಾನ ಮತ್ತು ಇಲಾಖೆ ಮತ್ತು ಇಟಲಿಯ ವಿದೇಶಾಂಗ ಇಲಾಖೆಯು ಜಂಟಿಯಾಗಿ ವರದಿಯನ್ನು ತಯಾರಿಸಿವೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅನೈತಿಕತೆ ತಡೆಯಲು ವೈ-ಫೈ ಸೇವೆಯನ್ನೇ ಬಂದ್ ಮಾಡಿದ ತಾಲಿಬಾನ್
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಪ್ರಚಾರ: ಉತ್ತಪ್ಪ, ಯುವಿ, ಸೋನು ಸೂದ್ಗೆ ಇಡಿ ಸಮನ್ಸ್: ಭೂವಂಚನೆ ಕೇಸಲ್ಲಿ ಯೂಸುಫ್ ಪಠಾಣ್