Headlines

‘ನೀರಾ ಆರ್ಯ’ರಾಗಿ ಬಾಲಿವುಡ್‌ನಲ್ಲಿ ಮಿಂಚಲಿರುವ ರೂಪಾ ಅಯ್ಯರ್, ‘ಆಝಾದ್ ಭಾರತ್’ ಬಿಡುಗಡೆ ಸನ್ನಿಹಿತ! | Kannada Director And Actor Roopa Iyer Bollywood Movie Azad Bharath To Release

‘ನೀರಾ ಆರ್ಯ’ರಾಗಿ ಬಾಲಿವುಡ್‌ನಲ್ಲಿ ಮಿಂಚಲಿರುವ ರೂಪಾ ಅಯ್ಯರ್, ‘ಆಝಾದ್ ಭಾರತ್’ ಬಿಡುಗಡೆ ಸನ್ನಿಹಿತ! | Kannada Director And Actor Roopa Iyer Bollywood Movie Azad Bharath To Release



‘ನೀರಾ ಆರ್ಯ’ರಾಗಿ ಬಾಲಿವುಡ್‌ನಲ್ಲಿ ಮಿಂಚಲಿರುವ ರೂಪಾ ಅಯ್ಯರ್, ‘ಆಝಾದ್ ಭಾರತ್’ ಬಿಡುಗಡೆ ಸನ್ನಿಹಿತ! | Kannada Director And Actor Roopa Iyer Bollywood Movie Azad Bharath To Release

‘ಭಾರತದಲ್ಲಿ ಮೊಟ್ಟಮೊದಲ ಮಹಿಳಾ ಆರ್ಮಿ’ಯನ್ನು ಕಟ್ಟಿದ್ದು ನೇತಾಜಿ ಸುಭಾಷ್ ಚಂದ್ರ ಭೋಸ್. ಅವರಿಗೆ ಆಗಲೇ ‘ಮಹಿಳೆಯರಲ್ಲಿ ದೇಶಭಕ್ತಿ ಹಾಗೂ ದೇಶವನ್ನು ಗುಲಾಮರಿಂದ ಮುಕ್ತಗೊಳಿಸುವ ತಾಕತ್ತು ಇದೆ ಎಂಬ ಆ ದೂರದೃಷ್ಟಿ ಇತ್ತು. ಹೀಗಾಗಿ ‘ಮಹಿಳಾ ಆರ್ಮಿ’ಯನ್ನು ಕಟ್ಟಿ, ‘ಝಾನ್ಸಿ ರಾಣಿ’ ರೆಜಿಮೆಂಟ್‌ ಮಾಡಿದ್ದರು.

ಬಾಲಿವುಡ್‌ ನಿರ್ಮಾಪಕಿ-ನಿರ್ದೇಶಕಿ ಹಾಗೂ ನಟಿಯಾದ ಕನ್ನಡತಿ ರೂಪಾ ಅಯ್ಯರ್!

ಕನ್ನಡದ ನಟಿ-ನಿರ್ದೇಶಕಿ-ನಿರ್ಮಾಪಕಿ ರೂಪಾ ಅಯ್ಯರ್ (Roopa Iyer) ಅವರು ಬಾಲಿವುಡ್‌ನಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ‘ಆಝಾದ್ ಭಾರತ್’ (Azad Bharath) ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡಿರುವ ರೂಪಾ ಅಯ್ಯರ್, ಅದರಲ್ಲಿನ ಮುಖ್ಯ ಪಾತ್ರ ‘ನೀರಾ ಆರ್ಯ’ಕ್ಕೆ ನಟನೆಯನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಸಿನಿಮಾದ ನಿರ್ಮಾಪಕರಲ್ಲಿ ರೂಪಾ ಅಯ್ಯರ್ ಕೂಡ ಒಬ್ಬರಾಗಿ ಬಾಲಿವುಡ್‌ ಸಿನಿಮಾ ನಿರ್ಮಾಪಕಿ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದಾರೆ. ದೇಶಭಕ್ತೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ರೂಪಾ ಅಯ್ಯರ್ ಅವರು ಭಾರತಕ್ಕೆ ಸ್ವಾತಂತ್ರ ಸಿಕ್ಕು 75 ವರ್ಷಗಳಾಗಿರುವ ಈ ಕಾಲಘಟ್ಟದಲ್ಲಿ ಇಂತಹ ಅಪರೂಪದ ಕ್ಲಾಸಿಕ್ ಸಿನಿಮಾವನ್ನು ತೆರೆಗೆ ತರುವ ಮೂಲಕ ದೇಶಭಕ್ತಿಯನ್ನು ಸಾರಿದ್ದಾರೆ.

ಹೌದು, ಕನ್ನಡದ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಅವರು ಇದೀಗ ‘ಅಝಾದ್ ಭಾರತ್’ಹೆಸರಿನ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ‘ಆಝಾದಿ ಕಾ ಅಮೃತ ಮಹೋತ್ಸವ್‌’ ಕೆ ಅವಸರ್ ಅಂದ್ರೆ, ಭಾರತಕ್ಕೆ ಸ್ವಾತಂತ್ರ ಸಿಕ್ಕಿ 75 ವರ್ಷಗಳ ಈ ಕಾಲದಲ್ಲಿ ಖುಷಿಯಿಂದ ಇಡೀ ದೇಶ ಆಚರಣೆಯಲ್ಲಿ ತೊಡಗಿಕೊಂಡಿದೆ. ಈ ವೇಳೆ ಬಿಜೆಪಿ ಅಜೆಂಡಾ ಅಂತಲ್ಲದ, ಇಡೀ ದೇಶದ ನಾಗರೀಕರ ಖುಷಿಯ ಕ್ಷಣದಲ್ಲಿ ಈ ‘ಆಝಾದ್ ಭಾರತ್’ ಹೆಸರಿನ ಸಿನಿಮಾವನ್ನು ತೆರೆಗೆ ತರಲು ಯೋಜನೆ ರೂಪಿಸಲಾಗಿದೆ. ಈ ಸಿನಿಮಾ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆ ಆಗಲಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಷ್‌ಚಂದ್ರ ಭೋಸ್ ಅವರ ಹೆಸರು ಕೂಡ ಬಹುಮುಖ್ಯವಾದದ್ದು. ಅವರು ಅಮದು ಬ್ರಿಟೀಷರ ವಿರುದ್ಧ ಹೋರಾಡಲು ಸೈನ್ಯವನ್ನು ಕಟ್ಟಿ ಆ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದು ಈಗ ಎಂದೂ ಅಳಿಸಲಾಗದ ಇತಿಹಾಸ. ಅದರಲ್ಲೂ ಮುಖ್ಯವಾಗಿ ನೇತಾಜಿಯವರು ಮಾಡಿದ್ದ ಬಹುಮುಖ್ಯ ಕ್ತಾಂತಿಕಾರೀ ಕೆಲಸ ಎಂದರೆ, ಅದು ಭಾರತದಲ್ಲಿ ಮೊಟ್ಟಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಸೈನ್ಯ ‘ಮಹಿಳಾ ಆರ್ಮಿ’ಯನ್ನು ಕಟ್ಟಿದ್ದು.

‘ಆಝಾದ್ ಭಾರತ್’ ಸಿನಿಮಾದ ಸೃಷ್ಟಿಕರ್ತೆ ರೂಪಾ ಅಯ್ಯರ್ ಹೇಳಿಕೆ!

ಈ ಬಗ್ಗೆ ‘ಆಝಾದ್ ಭಾರತ್’ ಸಿನಿಮಾದ ಸೃಷ್ಟಿಕರ್ತೆ ರೂಪಾ ಅಯ್ಯರ್ ಹೀಗೆ ಹೇಳಿದ್ದಾರೆ.. ‘ಭಾರತದಲ್ಲಿ ಮೊಟ್ಟಮೊದಲ ಮಹಿಳಾ ಆರ್ಮಿ’ಯನ್ನು ಕಟ್ಟಿದ್ದು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು. ಅವರಿಗೆ ಆಗಲೇ ‘ಮಹಿಳೆಯರಲ್ಲಿ ದೇಶಭಕ್ತಿ ಹಾಗೂ ದೇಶವನ್ನು ಗುಲಾಮರಿಂದ ಮುಕ್ತಗೊಳಿಸುವ ತಾಕತ್ತು ಇದೆ ಎಂಬ ಆ ದೂರದೃಷ್ಟಿ ಇತ್ತು. ಹೀಗಾಗಿ ‘ಮಹಿಳಾ ಆರ್ಮಿ’ಯನ್ನು ಕಟ್ಟಿ, ‘ಝಾನ್ಸಿ ರಾಣಿ’ ರೆಜಿಮೆಂಟ್ ಮಾಡಿ ಅದರಲ್ಲಿನ ಪ್ರತಿಯೊಬ್ಬ ಮಹಿಳಾ ಸ್ವಾತಂತ್ರ ಹೋರಾಟಗಾರರಿಗೆ ಅವರು ‘ರಾಣಿ’ ಎಂದೇ ಕರೆಯುತ್ತಿದ್ದರು. ಅವರಲ್ಲಿ ನೀರಾ ಆರ್ಯ ಎಂಬ ಸ್ವಾತಂತ್ರ್ಯ ಹೋರಾಟಗಾರ್ತಿ ಸಹ ಪ್ರಮುಖರು. ಆ ಪಾತ್ರವನ್ನು ನಾನು ಈ ಸಿನಿಮಾದಲ್ಲಿ ಮಾಡಿದ್ದೇನೆ’ ಎಂದಿದ್ದಾರೆ.

‘ನೀರಾ ಆರ್ಯ’ ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ರೂಪಾ ಅಯ್ಯರ್!

ಒಟ್ಟಿನಲ್ಲಿ, ಬಿಜೆಪಿ ರಾಜ್ಯ ಸಂಚಾಲಕಿಯಾಗಿಯೂ ಕೆಲಸ ಮಾಡುತ್ತಿರುವ ನಟಿ-ನಿರ್ದೇಶಕಿ ಹಾಗೂ ನಿರ್ಮಾಪಕಿಯೂ ಅಗಿರುವ ರೂಪಾ ಅಯ್ಯರ್ ಅವರು ಸದ್ಯದಲ್ಲೇ ‘ಆಝಾದ್ ಭಾರತ್’ ಮೂಲಕ ಸಿನಿಪ್ರೇಕ್ಷಕರಿಗೆ ‘ದರ್ಶನ’ ಕೊಡಲಿದ್ದಾರೆ. ‘ನೀರಾ ಆರ್ಯ’ ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ಜನಮಾನಸದಲ್ಲಿ ಉಳಿಯುವ ಸಿನಿಮಾ ಕಲಾವಿದೆಯಾಗುವ ಕ್ಷಣ ಸನ್ನಿಹಿತವಾಗುತ್ತಿದೆ. ಅಂದುಕೊಂಡಂತೆ ಎಲ್ಲ ಕೆಲಸಗಳೂ ಮುಗಿದರೆ ಈ ‘ಆಝಾದ್ ಭಾರತ್’ ಚಿತ್ರವು ಇನ್ನೆರಡು ತಿಂಗಳಲ್ಲಿ ತೆರೆಗೆ ಬರಲಿದೆ.



Source link

Leave a Reply

Your email address will not be published. Required fields are marked *