
ಅಂದಹಾಗೆ, ನಮ್ರತಾ ಗೌಡ ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದರೆ, ಮತ್ತು ಬಿಗ್ಬಾಸ್ ಕನ್ನಡ ಸೀಸನ್ 7 ಸ್ಪರ್ಧಿಯಾಗಿದ್ದರು ಕಿಶನ್ ಬಿಳಗಲಿ (Kishen Bilagali). ಕಿಶನ್ ಅವರು ಮೂಲತಃ ಡಾನ್ಸರ್ ಚಿಕ್ಕಮಗಳೂರಿನ ಇವರು ಬಿಗ್ಬಾಸ್ 7ರಿಂದ ಸಕತ್ ಫೇಮಸ್ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್. ಡಾನ್ಸ್ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್ಲೆಟ್ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.