ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ಗೆ ಪ್ರತಿಕ್ರಿಯಿಸಿ, ತಮ್ಮ ಆತ್ಮವನ್ನು 33 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಈ ವಿಚಿತ್ರ ಒಪ್ಪಂದಕ್ಕೆ ರಕ್ತದಲ್ಲಿ ಸಹಿ ಹಾಕಲಾಗಿದ್ದು, ಈ ಹಣದಿಂದ ಆಕೆ ಗೊಂಬೆ ಮತ್ತು ಸಂಗೀತ ಕಾರ್ಯಕ್ರಮದ ಟಿಕೆಟ್ ಖರೀದಿಸಿದ್ದಾರೆ.

ವಿಚಿತ್ರ ಮತ್ತು ಅಘಾತಕಾರಿ ಘಟನೆಯೊಂದು ಮುನ್ನಲೆಗೆ ಬಂದಿದ್ದು, ಜಾಗತೀಕಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಮಹಿಳೆಯೊಬ್ಬರು ತಮ್ಮ ಆತ್ಮವನ್ನು ಬರೋಬ್ಬರಿ 33 ಕೋಟಿ ರೂ. ($4 ಮಿಲಿಯನ್) ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಒಪ್ಪಂದಕ್ಕೆ ರಕ್ತದಲ್ಲಿ ಸಹಿ ಹಾಕಲಾಗಿದೆ.

ಈ ಕುರಿತು ಡೈಲಿ ಸ್ಟಾರ್ ಪತ್ರಿಕೆಯೊಂದು ವರದಿ ಮಾಡಿದೆ. ರಷ್ಯಾದ Vkontakteನ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಡಿಮಿಟ್ರಿ ಹೆಸರಿನ ವ್ಯಕ್ತಿಯೊಬ್ಬರು ಆತ್ಮವನ್ನು ಖರೀದಿಸಬೇಕು ಎಂದು ಬರೆದುಕೊಂಡಿದ್ದರು. ಆರಂಭದಲ್ಲಿ ಎಲ್ಲರೂ ಇದನ್ನು ತಮಾಷೆ ಎಂದು ತಿಳಿದುಕೊಂಡು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಗಂಭೀರವಾಗಿ ಪರಿಗಣಿಸಿದ ಕರೀನಾ ಎಂಬ ಮಹಿಳೆ ತಮ್ಮ ಆತ್ಮ ಮಾರಾಟ ಮಾಡಲು ಒಪ್ಪಿಕೊಂಡಿದ್ದಾರೆ.

ನಾನು ಮೊದಲ ಆತ್ಮ ಖರೀದಿಸಿದ್ದೇನೆ. ಈ ಒಪ್ಪಂದದ ದಾಖಲೆಯನ್ನು ಡಿಮಿಟ್ರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಒಪ್ಪಂದವನ್ನು ರಕ್ತದಲ್ಲಿ ಸಹಿ ಮಾಡಲಾಗಿದೆ. ನಾನು ಡೇವಿ ಜೋನ್ಸ್ನಂತೆ ಭಾವಿಸುತ್ತೇನೆ ಎಂದು ಡಿಮಿಟ್ರಿ ಬರೆದುಕೊಂಡಿದ್ದಾರೆ. ಈ ಒಪ್ಪಂದದ ಕುರಿತು ಮಹಿಳೆ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ಟೆಡ್ಡಿಬೇರ್? ನಾಸಾ ವಿಜ್ಞಾನಿಗಳಿಗೆ ಸಿಕ್ಕೇ ಬಿಟ್ಟಿತು ಕುತೂಹಲದ ಸಾಕ್ಷ್ಯ- ಇಲ್ಲಿದೆ ಡಿಟೇಲ್ಸ್

ಆತ್ಮ ಮಾರಾಟ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಯಾವುದೇ ವಿಷಾದವಿಲ್ಲ. ನನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗಿದೆ. ಈ ಹಣದಿಂದ Labubu ಗೊಂಬೆ ಮತ್ತು ಪ್ರಸಿದ್ಧ ಗಾಯಕಿ ನಾಡೆಜ್ಡಾ ಕಡಿಶೇವಾ ಅವರ ಮ್ಯೂಸಿಕ್ ಪ್ರೋಗ್ರಾಂನ ಟಿಕೆಟ್ ಖರೀದಿಸಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಐಸ್ಕ್ರೀಂ ಶಾಪ್ಗೆ ನುಗ್ಗಿ ಹೊಟ್ಟೆ ಬಿರಿಯುವಷ್ಟು ಐಸ್ಕ್ರೀಂ ತಿಂದು ಅಲ್ಲೇ ನಿದ್ದೆಗೆ ಜಾರಿದ ಕರಡಿ

ಆತ್ಮ ಖರೀದಿಯ ಒಪ್ಪಂದವನ್ನು ನಾನು ತಮಾಷೆಯಾಗಿ ನೀಡಿದ್ದೆ. ಆದರೆ ಮಹಿಳೆಯೊಬ್ಬರು ಇಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಡಿಮಿಟ್ರಿ ಹೇಳಿಕೊಂಡಿದ್ದಾರೆ. 33 ಕೋಟಿ ರೂಪಾಯಿ ನೀಡಿ ಖರೀದಿಸಿರುವ ಆತ್ಮದೊಂದಿಗೆ ಡಿಮಿಟ್ರಿ ಏನು ಮಾಡುತ್ತಾರೆ ಎಂದು ಎಲ್ಲರೂ ಯೋಚಿಸುತ್ತಿದ್ದಾರೆ.

ಇದನ್ನೂ ಓದಿ: ಹುಡುಗಿಯ ಸೀರೆ ಬಿಚ್ಚಿ, ಮೇಕಪ್ ಉಜ್ಜಿ ನೋಡಿದ ಗಂಡಿನ ಕಡೆಯವರು: ಆಮೇಲೇನಾಯ್ತು ನೋಡಿ!

Source link
33 ಕೋಟಿಗೆ ತನ್ನ ಆತ್ಮವನ್ನು ಮಾರಾಟ ಮಾಡಿ ರಕ್ತದಲ್ಲಿ ಸಹಿ ಹಾಕಿದ ಮಹಿಳೆ