ದಕ್ಷಿಣ ಭಾರತದ ಜನಪ್ರಿಯ ನಟಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗಿಂತ ಚಿಕ್ಕ ವಯಸ್ಸಿನ ನಿರ್ಮಾಪಕನೊಬ್ಬ ‘ಅಕ್ಕ’ ಎಂದು ಕರೆದು, ನಂತರ ಹಾಸಿಗೆ ಹಂಚಿಕೊಳ್ಳಲು ಕೇಳಿದ್ದರಿಂದ ಆಘಾತಗೊಂಡು ಶೂಟಿಂಗ್ ನಿಲ್ಲಿಸಿ ಬಂದಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.
1 Min read
15

Image Credit : charmila christina Instagram
ಅಕ್ಕಾ ಅಂತಾ ಕರೆದು ಮಂಚಕ್ಕೆ ಬಾ ಅಂದ್ರು
ಚಿತ್ರರಂಗದಲ್ಲಿ ಅನೇಕ ನಟಿಯರು ಕಾಸ್ಚಿಂಗ್ ಕೌಚ್‌ನಿಂದ ಸಿನಿಮಾದ ಹೊರಬರಬೇಕಾಯ್ತು ಎಂದು ಹೇಳಿಕೆ ನೀಡಿದ್ದಾರೆ. ಚಿತ್ರರಂಗದಲ್ಲಿ ತಮಗೆ ಯಾರಿಂದ ತೊಂದರೆಯಾಯ್ತು ಎಂದು ಬಹಿರಂಗಪಡಿಸಲು ಹಲವು ನಟಿಯರು ಹಿಂದೇಟು ಹಾಕುತ್ತಾರೆ. ಅಕ್ಕಾ ಅಂತಾ ಕರೆದು ಮಂಚಕ್ಕೆ ಬಾ ಅಂದ್ರು ಎಂಬ ಹೇಳಿಕೆಯನ್ನು ಸೌಥ್ ನಟಿ ಹೇಳಿದ್ದಾರೆ.
25
Image Credit : charmila christina Instagram
ದಕ್ಷಿಣ ಭಾರತದ ಜನಪ್ರಿಯ ನಟಿ ಚಾರ್ಮಿಲಾ ಕ್ರಿಸ್ಟಿನಾ
ದಕ್ಷಿಣ ಭಾರತದ ಜನಪ್ರಿಯ ನಟಿ ಚಾರ್ಮಿಲಾ ಕ್ರಿಸ್ಟಿನಾ ಸಿನಿಮಾರಂಗದಲ್ಲಿ ತಮಗೆ ಆಘಾತಕಾರಿಯ ಅನುಭವ ಉಂಟಾಗಿದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಚಾರ್ಮಿಲಾ ಕ್ರಿಸ್ಟಿನಾ, ನಿರ್ಮಾಪಕರೊಬ್ಬರು ಮೊದಲು ನನ್ನನ್ನ ಅಕ್ಕ ಎಂದು ಕರೆದರು. ನಂತರ ಅದೇ ವ್ಯಕ್ತಿಯೇ ನನ್ನನ್ನು ಮಂಚಕ್ಕೆ ಕರೆದ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
35
Image Credit : charmila christina Instagram
ಮಗನ ವಯಸ್ಸಿನ ನಿರ್ಮಾಪಕ
48 ವರ್ಷದ ನಟಿ ಚಾರ್ಮಿಲಾ ಕ್ರಿಸ್ಟಿನಾ ಮಲಯಾಳಂ ಸಿನಿಮಾರಂಗದಲ್ಲಿ ಅಹಿತಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ಆ ನಿರ್ಮಾಪಕ ನನಗಿಂತ ಚಿಕ್ಕ ವಯಸ್ಸಿನವರು. ಹಾಗಾಗಿ ನನ್ನನ್ನು ದೀದಿ (ಅಕ್ಕ) ಎಂದು ಕರೆಯುತ್ತಿದ್ದರು. ಒಂದು ದಿನ ನನ್ನ ಮಗನ ವಯಸ್ಸಿನ ನಿರ್ಮಾಪಕ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಬೇಡಿಕೆ ಇರಿಸಿದ್ದ. ಇದರಿಂದ ನಾನು ಆಘಾತಕ್ಕೊಳಗಾಗಿದ್ದೆ ಎಂದು ಚಾರ್ಮಿಲಾ ಕ್ರಿಸ್ಟಿನಾ ಹೇಳಿದ್ದಾರೆ.
ಇದನ್ನೂ ಓದಿ: Amruthadhaare Serial: ಗೌತಮ್-ಭೂಮಿ ಒಂದಾಗೋ ಅಮೃತ ಘಳಿಗೆಯಲ್ಲಿ ರಣರೋಚಕ ಟ್ವಿಸ್ಟ್! ಇದು ಚೆನ್ನಾಗಿರೋದು
45
Image Credit : charmila christina Instagram
ತಾಯಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಚಾರ್ಮಿಲಾ
ಆ ವೇಳೆ ನಾನು ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದೆ. ನಿರ್ಮಾಪಕ ಈ ವಿಷಯವಾಗಿ ನನ್ನ ಸಹಾಯಕಿಯನ್ನು ಸಂಪರ್ಕಿಸಿದ್ದರು. ಇದಕ್ಕಾಗಿ 50 ಸಾವಿರ ರೂಪಾಯಿ ಕೊಡುವೆ ಎಂದು ಹೇಳಿದ್ದರು. ನಾನು ಅಥವಾ ನನ್ನ ಸಹಾಯಕಿ ಇಬ್ಬರಲ್ಲಿ ಯಾರಾದ್ರು ಒಬ್ಬರು ಈ ವಿಷಯಕ್ಕೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಅಂತ ಕಂಡೀಷನ್ ಹಾಕಿದ್ದರು ಎಂದು ನಟಿ ಚಾರ್ಮಿಲಾ ಹೇಳಿದ್ದಾರೆ.
ಇದನ್ನೂ ಓದಿ: ಅದಿತಿ ರಾವ್ ಹೈದರಿ-ಸಿದ್ದಾರ್ಥ್ ಆನಿವರ್ಸರಿ ಸಂಭ್ರಮ…. ಅದ್ದು-ಸಿದ್ಧು Unseen Photos Viral
55
Image Credit : charmila christina Instagram
ಶೂಟಿಂಗ್ ನಿಲ್ಲಿಸಿ ಚೆನ್ನೈಗೆ ಬಂದೆ