Sanjay Bangar’s Daughter Anaya Reveals a Top Cricketer Sent Her Obscene Photos ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ರಿಯಾಲಿಟಿ ಶೋವೊಂದರಲ್ಲಿ ತಮಗೆ ಪ್ರಸಿದ್ಧ ಕ್ರಿಕೆಟಿಗರೊಬ್ಬರು ಅಶ್ಲೀಲ ಫೋಟೋ ಕಳುಹಿಸಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಮಗ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಅನಯಾ ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಯಾ ಬಂಗಾರ್ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಆರ್ಯನ್ ಬಂಗಾರ್ ಆಗಿದ್ದ ಮಾಜಿ ಕ್ರಿಕೆಟರ್ ಹಾಗೂ ಟೀಮ್ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಪುತ್ರ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಬಳಿಕ ಅನಾಯಾ ಆಗಿ ಬದಲಾದರು.

ಅನಯಾ ನಿರಂತರವಾಗಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ರಿಯಾಲಿಟಿ ಶೋವೊಂದರಲ್ಲಿ ಸಹ-ನಿರೂಪಕಿಯಾಗಿದ್ದಾರೆ. ಅದರಲ್ಲಿ, ಅವರು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಅನಯಾ ಪ್ರಸ್ತುತ ಅಮೆಜಾನ್ MX ಪ್ಲೇಯರ್‌ನಲ್ಲಿ ಪ್ರಸಾರವಾಗುತ್ತಿರುವ ‘ರೈಸ್ ಅಂಡ್ ಫಾಲ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದ ಅವರ ಕೆಲವು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಈ ಕಾರ್ಯಕ್ರಮದಲ್ಲಿ, ಶಸ್ತ್ರಚಿಕಿತ್ಸೆಯ ನಂತರ ಪ್ರಸಿದ್ಧ ಕ್ರಿಕೆಟಿಗನೊಬ್ಬ ತನಗೆ ಅಶ್ಲೀಲ ಫೋಟೋ ಕಳುಹಿಸಿದ್ದ ಎಂದು ಅವರು ಹೇಳಿದ್ದಲ್ಲದೆ, ಆ ಕ್ರಿಕೆಟಿಗನ ಬಗ್ಗೆ ಭಾರತೀಯರೆಲ್ಲರಿಗೂ ತಿಳಿದಿದೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ.

"ಕಳೆದ ವರ್ಷ ನವೆಂಬರ್‌ನಲ್ಲಿ ನಾನು ಸಾರ್ವಜನಿಕ ವೇದಿಕೆಗಳಿಗೆ ಬಂದೆ. ಡಿಸೆಂಬರ್-ಜನವರಿಯಲ್ಲಿ, ನನ್ನ ಮನಸ್ಸಿಗೆ ಬಂದದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದೆ" ಎಂದು ಅನಯಾ ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

"ಇದ್ದಕ್ಕಿದ್ದಂತೆ ಒಬ್ಬ ಕ್ರಿಕೆಟಿಗ ನನ್ನನ್ನು ತಮ್ಮ ಬಳಗದಲ್ಲಿ ಸೇರಿಸಿಕೊಂಡ.ಆತನೊಂದಿಗೆ ಹಿಂದೆ ಎಂದೂ ನಾನು ಸಂವಹನ ನಡೆಸಿರಲಿಲ್ಲ. ಆತ ನಿಧಾನವಾಗಿ ಅವನ ಫೋಟೋವನ್ನು ಕಳುಹಿಸಿದ’ ಎಂದು ಅನಾಯಾ ಹೇಳಿದ್ದಾರೆ.

ಆಕೆಯ ಪಕ್ಕದಲ್ಲಿ ಕುಳಿತಿದ್ದ ಇತರರು ಆ ಫೋಟೋ ಅಶ್ಲೀಲವಾಗಿತ್ತಾ ಎಂದು ಅನಾಯಾಗೆ ಕೇಳಿದ್ದಾರೆ. ಅದಕ್ಕೆ ಅನಯಾ "ಈಗ ನಿನಗೆ ಅರ್ಥವಾಯಿತು" ಎಂದು ಉತ್ತರಿಸಿದ್ದಾರೆ.

ಮತ್ತೊಬ್ಬ ಸ್ಪರ್ಧಿ ಫೋಟೋ ಕಳುಹಿಸಿದ ವ್ಯಕ್ತಿ ನಿಮಗೆ ತಿಳಿದಿದೆಯೇ ಎಂದು ಕೇಳಿದ್ದಾರೆ. ಅದಕ್ಕೆ ಅನಯಾ "ಎಲ್ಲರಿಗೂ ಅವನು ಗೊತ್ತು" ಎಂದು ಉತ್ತರಿಸಿದ್ದಾರೆ.

ಪ್ರಸ್ತುತ, ಅನಯಾ ಅವರ ‘ರೈಸ್ ಅಂಡ್ ಫಾಲ್’ ಕಾರ್ಯಕ್ರಮದ ಹಲವು ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಅನೇಕರು ಕುತೂಹಲದಿಂದ ಇದ್ದಾರೆ.

Source link
'ಟಾಪ್ ಕ್ರಿಕೆಟರ್ ನನಗೆ ಅಶ್ಲೀಲ ಫೋಟೋ ಕಳಿಸಿದ್ದ..' ಶಾಕಿಂಗ್ ಸತ್ಯ ಹೇಳಿದ ಸಂಜಯ್ ಬಂಗಾರ್ 'ಪುತ್ರಿ'!