Anushka Shetty biggest mistake: ನಟಿ ಅನುಷ್ಕಾ ಶೆಟ್ಟಿ ತಮ್ಮ ಸಿನಿ ಕೆರಿಯರ್‌ನ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಒಂದು ಸಿನಿಮಾದಲ್ಲಿ ನಟಿಸಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ‘ಬಾಹುಬಲಿ’ ಚಿತ್ರ ತಮ್ಮ ವೃತ್ತಿಜೀವನಕ್ಕೆ ಬಹುದೊಡ್ಡ ತಿರುವು ನೀಡಿತು ಎಂದು ತಿಳಿಸಿದ್ದಾರೆ.

ಟಾಲಿವುಡ್‌ನ ಸೂಪರ್ ಸ್ಟಾರ್ ಲೇಡಿ ಎಂದು ಕರೆಸಿಕೊಳ್ಳುವ ನಟಿ ಅನುಷ್ಕಾ ಶೆಟ್ಟಿ ಸಂದರ್ಶನದಲ್ಲಿ ಸಿನಿ ಕೆರಿಯರ್ ಬಗ್ಗೆ ಮಾತನಾಡಿದ್ದಾರೆ. 2005ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ಸೂಪರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಾನು ಎಲ್ಲಾ ಪಾತ್ರಗಳಿಗೂ ಸೈ ಅನ್ನೋದನ್ನು ಅನುಷ್ಕಾ ಶೆಟ್ಟಿ ಪ್ರೂವ್ ಮಾಡಿದ್ದಾರೆ.

2008ರಲ್ಲಿ ಬಾಲಕೃಷ್ಣ ಅವರ ಒಕ್ಕ ಮಗಾಡು ಸಿನಿಮಾ ಬಿಡುಗಡೆಯಾಗಿತ್ತು. ಬಾಲಕೃಷ್ಣ ಅವರಿಗೆ ಜೊತೆಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ಈ ಚಿತ್ರದಲ್ಲಿ ನಾನು ನಟಿಸಬಾರದಿತ್ತು. ಆ ಸಮಯದಲ್ಲಿ ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳದೇ ಸಿನಿಮಾ ಒಪ್ಪಿಕೊಂಡೆ. ಈ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಹಲವು ಸಮಸ್ಯೆಗಳನ್ನು ಮಾಡಿತು ಎಂದು ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ಬಾಹುಬಲಿ ಸಿನಿಮಾ ನನ್ನ ಕೆರಿಯುರ್‌ನಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದ್ದು ನಿಜ ಎಂದು ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳ ಮೂಲಕನೇ ಅನುಷ್ಕಾ ಶೆಟ್ಟಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಹುಬಲಿ ಯಶಸ್ಸಿನ ಬಳಿಕ ಭಾಗಮತಿ, ನಿಶಬ್ದಂ, ಮಿಸ್ ಶೆಟ್ಟಿ ಮಿಸ್ಟರ್ ಪಾಲಿಶೆಟ್ಟಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಘಾಟಿ ಸಹ ಅನುಷ್ಕಾ ಶೆಟ್ಟಿ ಕೈ ಹಿಡಿಯಲಿಲ್ಲ. ಚಿತ್ರ ಸೋಲಿನಿಂದ ಅನುಷ್ಕಾ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದಾರೆ. ಭಾಗಮತಿ, ನಿಶ್ಯಬ್ದಂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡರೂ ಬಾಕ್ಸ್ ಆಫಿಸ್‌ನಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ.

ಇದನ್ನೂ ಓದಿ: ಯಾರು ಹೇಳಿದ್ದು?- ‘ಅನುಷ್ಕಾ ಶೆಟ್ಟಿ ಬಿಟ್ಟರೆ ಬೇರೆ ಯಾರೂ ಮಾಡಲಾಗದು; ಅಂಥ ಸ್ಟಾರ್‌ಡಮ್ ಬೇರೆ ಯಾರಿಗಿದೆ?’

ವಯಸ್ಸು 44 ಆದ್ರೂ ಸಿಂಗಲ್ ಆಗಿರುವ ಅನುಷ್ಕಾ ಶೆಟ್ಟಿ ಅಪ್ಪಟ ಕನ್ನಡತಿ. ಪ್ರಭಾಸ್ ಜೊತೆಗೆ ಅನುಷ್ಕಾ ಶೆಟ್ಟಿ ಹೆಸರು ಪದೇ ಪದೇ ಕೇಳಿ ಬರುತ್ತಿದ್ದರೂ ಇಬ್ಬರು ಮಾತ್ರ ನಾವು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಪ್ರಭಾಸ್ ವಯಸ್ಸು 45 ಆದ್ರು ಇನ್ನು ಸಿಂಗಲ್ ಆಗಿದ್ದಾರೆ.

ಇದನ್ನೂ ಓದಿ: ಪವನ್ ಕಲ್ಯಾಣ್-ಅನುಷ್ಕಾ ಶೆಟ್ಟಿ ಎರಡು ಹಿಟ್ ಸಿನಿಮಾಗಳನ್ನು ಮಿಸ್ ಮಾಡಿಕೊಂಡ್ರು: ಕಾರಣವೇನು?

Source link
ಅನುಷ್ಕಾ ಶೆಟ್ಟಿ ವೃತ್ತಿಜೀವನದಲ್ಲಿ ಮಾಡಿದ ಅತಿದೊಡ್ಡ ತಪ್ಪು; ಈ ಬಗ್ಗೆ ಸ್ವೀಟಿಯೇ ಹೇಳಿದ್ದು!