Headlines

ತರಕಾರಿ ಕಟ್ ಮಾಡಿದ ನಂತ್ರ ತೊಳೆಯುತ್ತೀರಾ?, ಹಾಗಾದ್ರೆ ಇಂದೇ ಈ ಅಭ್ಯಾಸ ಬದಲಾಯಿಸಿಕೊಳ್ಳಿ

ತರಕಾರಿ ಕಟ್ ಮಾಡಿದ ನಂತ್ರ ತೊಳೆಯುತ್ತೀರಾ?, ಹಾಗಾದ್ರೆ ಇಂದೇ ಈ ಅಭ್ಯಾಸ ಬದಲಾಯಿಸಿಕೊಳ್ಳಿ

ತರಕಾರಿ ಕಟ್ ಮಾಡಿದ ನಂತ್ರ ತೊಳೆಯುತ್ತೀರಾ?, ಹಾಗಾದ್ರೆ ಇಂದೇ ಈ ಅಭ್ಯಾಸ ಬದಲಾಯಿಸಿಕೊಳ್ಳಿ

Vegetable Washing Guide: ನೀವು ತರಕಾರಿ ಕ್ಲೀನ್ ಮಾಡಲು ಶುದ್ಧ ನೀರಿನಿಂದ ಹಲವಾರು ಬಾರಿ ತೊಳೆಯುತ್ತೀರಿ ಅಲ್ಲವೇ. ಅದು ಒಳ್ಳೆಯ ಅಭ್ಯಾಸವೇ. ಆದರೆ ಕಟ್ ಮಾಡಿ ತೊಳೆಯೋದ್ರಿಂದ ಏನಾಗುತ್ತೆ ಎಂಬುದನ್ನ ಯೋಚನೆ ಮಾಡಿದ್ದೀರಾ?.

ವಿವಿಧ ತರಕಾರಿಗಳು ಗಮನಾರ್ಹ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ನೀವು ಅವುಗಳನ್ನು ಸರಿಯಾಗಿ ಕತ್ತರಿಸಿ, ಸಿಪ್ಪೆ ಸುಲಿದು, ತೊಳೆದು, ಬೇಯಿಸಿದರೆ ಮಾತ್ರ ಅವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತವೆ. ಈ ಯಾವುದೇ ಹಂತಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ತರಕಾರಿಗಳ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಹಾಗಾದ್ರೆ ತರಕಾರಿಗಳನ್ನು ಕಟ್ ಮಾಡಿದ ನಂತರ ನೀರಿನಿಂದ ತೊಳೆಯಬೇಕೇ ಅಥವಾ ಮುಂಚಿತವಾಗಿ ತೊಳೆಯುವುದು ಒಳ್ಳೆಯದೇ?. ಇಲ್ಲಿದೆ ನೋಡಿ ಉತ್ತರ.

ನೀವು ತರಕಾರಿಗಳನ್ನ ಕಟ್ ಮಾಡಿದ ನಂತ್ರ 2-4 ಬಾರಿ ನೀರಿನಿಂದ ತೊಳೆಯುತ್ತೀರಾ?. ಹಾಗಿದ್ದಲ್ಲಿ, ಈ ಅಭ್ಯಾಸವನ್ನು ಇಂದೇ ಬದಲಾಯಿಸಿಕೊಳ್ಳಲೇಬೇಕು. ಏಕೆಂದರೆ ಕತ್ತರಿಸಿದ ತಕ್ಷಣ ತರಕಾರಿಗಳನ್ನು ತೊಳೆಯಬಾರದು. ಕತ್ತರಿಸಿದ ನಂತರ ತರಕಾರಿಗಳನ್ನು ತೊಳೆಯುವುದರಿಂದ ಅವುಗಳ ಅಗತ್ಯ ಪೋಷಕಾಂಶಗಳು ನಾಶವಾಗಬಹುದು. ಆದ್ದರಿಂದ ತರಕಾರಿಗಳನ್ನು ಕಟ್ ಮಾಡೋ ಮೊದಲೇ ನೀರಿನಿಂದ ಚೆನ್ನಾಗಿ ತೊಳೆಯಬೇಕು.

ಆಹಾರ ಮತ್ತು ಔಷಧ ಆಡಳಿತ (Food and Drug Administration)ದ ಪ್ರಕಾರ, ನೀವು ತರಕಾರಿಗಳನ್ನು ಖರೀದಿಸಿದ ಮೇಲೆ ಮೊದಲು ನಿಮ್ಮ ಕೈಗಳನ್ನು ಬೆಚ್ಚಗಿನ ನೀರು ಮತ್ತು ಸೋಪಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯಬೇಕು. ನಂತರ, ನೀವು ತರಕಾರಿಗಳನ್ನು ಸ್ಕ್ರಬ್ ಮಾಡಿ ಹರಿಯುವ ನೀರಿನ ಅಡಿಯಲ್ಲಿ ತೊಳೆಯಬಹುದು. ತರಕಾರಿಗಳ ಹೊರ ಪದರವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ತರಕಾರಿಗಳನ್ನು ಸಿಪ್ಪೆ ತೆಗೆಯುವ ಮೊದಲು ಕನಿಷ್ಠ ಎರಡು ಬಾರಿ ತೊಳೆಯಬೇಕು.

ಸಿಪ್ಪೆ ತೆಗೆಯಬಹುದಾದ ತರಕಾರಿಗಳನ್ನು ತೆಳುವಾಗಿ ಸಿಪ್ಪೆ ತೆಗೆಯಬೇಕು, ಇಲ್ಲದಿದ್ದರೆ ಅವುಗಳಲ್ಲಿರುವ ಪೋಷಕಾಂಶಗಳು ಕಡಿಮೆಯಾಗಬಹುದು.

ಇದಲ್ಲದೆ, ಸಿಪ್ಪೆ ತೆಗೆಯದೆ ಸೇವಿಸಬಹುದಾದ ತರಕಾರಿಗಳನ್ನು ಸಿಪ್ಪೆ ತೆಗೆಯುವ ಅಗತ್ಯವಿಲ್ಲ, ಏಕೆಂದರೆ ಆ ತರಕಾರಿಗಳ ಸಿಪ್ಪೆಯಲ್ಲೂ ಪೋಷಕಾಂಶಗಳಿವೆ.

ನೀವು ತರಕಾರಿಗಳನ್ನು ಬೇಯಿಸಲು ಹೋದಾಗ ಮಾತ್ರ ಸಿಪ್ಪೆ ತೆಗೆದು ಕತ್ತರಿಸಬೇಕು. 2-4 ಗಂಟೆಗಳ ಕಾಲ ಮುಂಚಿತವಾಗಿ ತರಕಾರಿಗಳ ಸಿಪ್ಪೆ ತೆಗೆಯುವ ಅಥವಾ ಕಟ್ ಮಾಡುವ ಅಗತ್ಯವಿಲ್ಲ.

Source link

Leave a Reply

Your email address will not be published. Required fields are marked *