Celebrities who lost loved ones India: ದಕ್ಷಿಣ ಭಾರತದ ಕೆಲ ನಟ-ನಟಿಯರು ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಈಗಲೂ ಅವರ ನೆನಪುಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಅವರು ಯಾರು? ಯಾರು?

ದಕ್ಷಿಣ ಭಾರತದ ಕೆಲ ಕಲಾವಿದರು ತಮ್ಮ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸಂಗಾತಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪತಿ ಪುನೀತ್ ರಾಜ್‌ಕುಮಾರ್ ಅವರನ್ನು ದೈಹಿಕವಾಗಿ ಕಳೆದುಕೊಂಡಿದ್ದಾರೆ. ಹೃದಯಾಘಾತದಿಂದ ಅಪ್ಪು ನಿಧನರಾದರು. ಇದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅಪ್ಪು ಕನಸಿನ ಕೆಲಸಗಳನ್ನು ಅಶ್ವಿನಿ ಮಾಡುತ್ತಿರುವುದು ಇನ್ನೊಂದು ವಿಶೇಷ.

ಖ್ಯಾತ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ಕೂಡ ಶ್ವಾಸಕೋಶದ ಸಮಸ್ಯೆಯಿಂದ ನಿಧನರಾಗಿದ್ದಾರೆ. ಸಾಕಷ್ಟು ಬಾರಿ ಇವರು ಎರಡನೇ ಮದುವೆ ಆಗ್ತಾರೆ ಎಂಬ ವದಂತಿಗಳು ಬಂದರೂ ಕೂಡ ಅವನ್ನೆಲ್ಲ ಮೀನಾ ತಳ್ಳಿ ಹಾಕಿದ್ದಾರೆ.

ನಟ ವಿಜಯ್ ರಾಘವೇಂದ್ರ ಅವರು ನಟ, ನಿರ್ದೇಶಕ, ಗಾಯಕ ಆಗಿಯೂ ಗುರುತಿಕೊಂಡಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ರಾಘವೇಂದ್ರ ಅವರು ಉತ್ತಮ ಡ್ಯಾನ್ಸರ್ ಕೂಡ ಹೌದು.

ಪ್ರೀತಿಸಿ ಮದುವೆಯಾಗಿದ್ದ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಕಳೆದ ವರ್ಷ ನಿಧನರಾಗಿದ್ದಾರೆ. ಬ್ಯಾಂಕಾಕ್‌ಗೆ ಟ್ರಿಪ್‌ಗೆ ಹೋಗಿದ್ದಾಗ ಅವರಿಗೆ ಹೃದಯಾಘಾತ ಆಗಿತ್ತು. ಇಂದಿಗೂ ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಪತಿ ಫೋಟೋ ಹಂಚಿಕೊಂಡು ನೆನಪಿಸಿಕೊಳ್ಳುತ್ತಿರುತ್ತಾರೆ.

ನಟ ಚಿರಂಜೀವಿ ಸರ್ಜಾ ಅವರು 2021ರಲ್ಲಿ ನಿಧನರಾದರು. ಆರೋಗ್ಯವಾಗಿದ್ದ ಚಿರಂಜೀವಿ ಅವರಿಗೆ ಹೃದಯಾಘಾತ ಆಗಿತ್ತು. ಚಿರಂಜೀವಿ ಹಾಗೂ ಮೇಘನಾ ರಾಜ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಹಿಂದು, ಕ್ರಿಶ್ಚಿಯನ್ ಪದ್ಧತಿಯಲ್ಲಿ ಮದುವೆಯಾಗಿತ್ತು.

ಚಿರಂಜೀವಿ ಸರ್ಜಾ ಅವರನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ ಮೇಘನಾ ರಾಜ್ ಇಂದಿಗೂ ತಮ್ಮ ಹೊಸ ಮನೆಯಲ್ಲಿ ಚಿರಂಜೀವಿ ಫೋಟೋವನ್ನು ಇಟ್ಟಿದ್ದಾರೆ, ಅವರು ಇಷ್ಟಪಡುವಂತೆ ಮನೆ ಕಟ್ಟಿಸಿದ್ದಾರೆ.

ನಟಿ ಶ್ರುತಿ ಷಣ್ಮುಗಪ್ರಿಯ ಅವರು 2023ರಲ್ಲಿ ಪತಿ ಅರವಿಂದ್ ಅವರನ್ನು ಕಳೆದುಕೊಂಡರು. ಫಿಟ್‌ನೆಸ್‌ನಲ್ಲಿ ಆಸಕ್ತಿ ಹೊಂದಿದ್ದ ಅರವಿಂದ್‌ಗೆ ಹೃದಯಾಘಾತ ಆಗಿತ್ತು. ಮದುವೆಯಾಗಿ ಒಂದು ವರ್ಷವಾಗಿತ್ತು. ಆಗಲೇ ಅರವಿಂದ್ ನಿಧನರಾದರು.

ಈಗಲೂ ಶ್ರುತಿ ಸಿಂಗಲ್ ಆಗಿದ್ದು, ಮತ್ತೆ ಮದುವೆಯಾಗೋ ಬಗ್ಗೆ ಹೇಳಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆಗಿನ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಅಂದಹಾಗೆ ಶ್ರುತಿ ಅವರು ತಮಿಳಿನ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.

Source link
'ಜೊತೆಗಿರದ ಜೀವ ಎಂದೆಂದಿಗೂ ಜೀವಂತ'- ಅಗಲಿದ ಸಂಗಾತಿ ನೆನಪಿನಲ್ಲಿರುವ ಸೆಲೆಬ್ರಿಟಿಗಳಿವರು!