ದುಬೈ: 2025ರ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಕೊನೆಯಾಗುತ್ತಾ ಬಂದಿದ್ದು, ಇದೀಗ ಸೂಪರ್ 4 ಲೆಕ್ಕಾಚಾರ ಶುರುವಾಗಿದೆ. ಹೀಗಿರುವಾಗಲೇ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಗೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ.

ಪೆಹಲ್ಗಾಂ ಉಗ್ರದಾಳಿ, ಆಪರೇಷನ್ ಸಿಂದೂರ್ ಬಳಿಕ ಕಳೆದ ಸೆಪ್ಟೆಂಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದವು.

ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳ ನಡುವಿನ ಕಾದಾಟದಲ್ಲಿ ಕೊನೆಗೂ ಟೀಂ ಇಂಡಿಯಾ 7 ವಿಕೆಟ್ ಅಂತರದ ಅನಾಯಾಸದ ಗೆಲುವು ದಾಖಲಿಸಿತ್ತು. ಇದಾದ ಬಳಿಕ ನೋ ಶೇಕ್ ಹ್ಯಾಂಡ್ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.

ಟಾಸ್ ವೇಳೆಯಿಂದ ಹಿಡಿದು ಪಂದ್ಯ ಮುಕ್ತಾಯದ ಬಳಿಕ ಭಾರತದ ಆಟಗಾರರು, ಪಾಕಿಸ್ತಾನ ಆಟಗಾರರನ್ನು ಮಾತನಾಡಿಸುವುದು ಬದಿಗಿರಲಿ, ಸಂಪ್ರದಾಯದಂತೆ ಕೈಕುಲುಕಲು ಸಹ ಮನಸ್ಸು ಮಾಡಿರಲಿಲ್ಲ.

ಇದಾದ ಬಳಿಕ ನಾವು ಪೆಹಲ್ಗಾಂ ಸಂತ್ರಸ್ತರು ಹಾಗೂ ಭಾರತೀಯ ಸೇನೆಯ ಜತೆಗಿದ್ದೇವೆ ಎಂದು ಹೇಳುವ ಮೂಲಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ಸೋಲಿನ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದರು.

ಇನ್ನು ಇದೆಲ್ಲದರ ಹೊರತಾಗಿ ಪಾಕಿಸ್ತಾನ ತಂಡವು, ಯುಎಇ ಎದುರು 41 ರನ್ಗಳ ಗೆಲುವು ದಾಖಲಿಸುವ ಮೂಲಕ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿ ಸೂಪರ್ 4 ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಇದೀಗ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವು ಸೆಪ್ಟೆಂಬರ್ 21ರ ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.

Source link
Asia Cup 2025: ಮತ್ತೊಮ್ಮೆ ಭಾರತ-ಪಾಕ್ ಬಿಗ್ ಫೈಟ್ಗೆ ವೇದಿಕೆ ರೆಡಿ!