Headlines

ಅಟ್ಲಿ ಸಿನಿಮಾದಲ್ಲಿ ಸೂಪರ್‌ ಹೀರೋ ಆದ ಅಲ್ಲು ಅರ್ಜುನ್: ಲೀಕ್ ಆಯ್ತು ಐಕಾನ್ ಸ್ಟಾರ್ ಲುಕ್!

ಅಟ್ಲಿ ಸಿನಿಮಾದಲ್ಲಿ ಸೂಪರ್‌ ಹೀರೋ ಆದ ಅಲ್ಲು ಅರ್ಜುನ್: ಲೀಕ್ ಆಯ್ತು ಐಕಾನ್ ಸ್ಟಾರ್ ಲುಕ್!

ಅಟ್ಲಿ ಸಿನಿಮಾದಲ್ಲಿ ಸೂಪರ್‌ ಹೀರೋ ಆದ ಅಲ್ಲು ಅರ್ಜುನ್: ಲೀಕ್ ಆಯ್ತು ಐಕಾನ್ ಸ್ಟಾರ್ ಲುಕ್!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಅಟ್ಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾದಿಂದ ಬನ್ನಿ ಲುಕ್ ಲೀಕ್ ಆಗಿದೆ. ಈ ಲುಕ್‌ನಲ್ಲಿ ಐಕಾನ್ ಸ್ಟಾರ್ ಹೇಗಿದ್ದಾರೆ ಗೊತ್ತಾ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್, ತಮ್ಮ 22ನೇ ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಶುರು ಮಾಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಅಪ್‌ಡೇಟ್‌ಗಳು ದೇಶಾದ್ಯಂತ ಕುತೂಹಲ ಮೂಡಿಸಿವೆ.

ಸುಮಾರು 800 ಕೋಟಿ ಬಜೆಟ್‌ನ ಈ ಚಿತ್ರಕ್ಕೆ ‘ಅವೆಂಜರ್ಸ್’ ಖ್ಯಾತಿಯ ಹಾಲಿವುಡ್ ಸಂಸ್ಥೆ ವಿಎಫ್‌ಎಕ್ಸ್ ಮಾಡುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ಇತ್ತೀಚೆಗೆ ಶೂಟಿಂಗ್ ಸೇರಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಸೂಪರ್‌ ಹೀರೋ ಲುಕ್ ವೈರಲ್ ಆಗಿದೆ. ಶೂಟಿಂಗ್ ಸೆಟ್‌ನ ಈ ಫೋಟೋದಲ್ಲಿ ಅವರು ಸೂಟ್ ಧರಿಸಿ, ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಈ ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಸಂಗೀತ ನೀಡುತ್ತಿದ್ದಾರೆ. ಲುಕ್ ಲೀಕ್ ಆದ್ಮೇಲೆ ಸಿನಿಮಾ ಮೇಲೆ ಕ್ರೇಜ್ ಹೆಚ್ಚಾಗಿದೆ. AA22 ಎಂಬ ವರ್ಕಿಂಗ್ ಟೈಟಲ್‌ನ ಈ ಚಿತ್ರದ ಅಧಿಕೃತ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.

Source link

Leave a Reply

Your email address will not be published. Required fields are marked *