ಎಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

ಎಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಟೆಸ್ಟ್ ಪಂದ್ಯದಲ್ಲಿಂದು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಜ್‌ಬಾಸ್ಟನ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಹಿಂದೆ ಎಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.

ಟೀಂ ಇಂಡಿಯಾ ಇಂದು ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್ ಆಡಲಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತ ನಂತರ ಭಾರತ 0-1 ಅಂತರದಿಂದ ಹಿನ್ನಡೆಯಲ್ಲಿದೆ.

ಎಜ್‌ಬಾಸ್ಟನ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ 1967ರಲ್ಲಿ ಮೊದಲ ಪಂದ್ಯ ನಡೆಯಿತು. ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದ ಭಾರತ 132 ರನ್‌ಗಳಿಂದ ಸೋತಿತು.

1974 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಜಿತ್ ವಾಡೇಕರ್ ನಾಯಕತ್ವದ ಭಾರತ ಇನ್ನಿಂಗ್ಸ್ ಮತ್ತು 78 ರನ್‌ಗಳಿಂದ ಸೋತಿತು.

1979 ರಲ್ಲಿ ವೆಂಕಟರಾಘವನ್ ನಾಯಕತ್ವದ ಭಾರತ ತಂಡವು ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋತಿತು.

1986 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯವು ಡ್ರಾ ನಲ್ಲಿ ಅಂತ್ಯವಾಯಿತು.

1996 ರಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಭಾರತ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಸೋತಿತು.

2011 ರಲ್ಲಿ ಧೋನಿ ನಾಯಕತ್ವದ ಭಾರತ ಇನ್ನಿಂಗ್ಸ್ ಮತ್ತು 242 ರನ್‌ಗಳಿಂದ ಸೋತಿತು.

2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ 31 ರನ್‌ಗಳಿಂದ ಸೋತಿತು.

2022 ರಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತ 7 ವಿಕೆಟ್‌ಗಳಿಂದ ಸೋತಿತು.

Source link

Leave a Reply

Your email address will not be published. Required fields are marked *