Headlines

ಮಲ್ಟಿ ಮಿಲೇನಿಯರ್ ಹುಲಿ ರಂಜನ್ ಕಲ್ಕೂರ… ಉಡುಪಿ ಪಿಲಿ ನಲಿಕೆಯ ಆಕರ್ಷಣೆ ಈ ಉದ್ಯಮಿ

ಮಲ್ಟಿ ಮಿಲೇನಿಯರ್ ಹುಲಿ ರಂಜನ್ ಕಲ್ಕೂರ… ಉಡುಪಿ ಪಿಲಿ ನಲಿಕೆಯ ಆಕರ್ಷಣೆ ಈ ಉದ್ಯಮಿ

ಮಲ್ಟಿ ಮಿಲೇನಿಯರ್ ಹುಲಿ ರಂಜನ್ ಕಲ್ಕೂರ… ಉಡುಪಿ ಪಿಲಿ ನಲಿಕೆಯ ಆಕರ್ಷಣೆ ಈ ಉದ್ಯಮಿ

ಅಷ್ಟಮಿ, ನವರಾತ್ರಿ ಬಂತೆಂದರೆ ಮಂಗಳೂರು, ಉಡುಪಿ ಕಡೆ ಹುಲಿ ವೇಷ ಹೆಚ್ಚು ಗಮನ ಸೆಳೆಯುತ್ತದೆ. ಅದರಲ್ಲೂ ಉಡುಪಿಯಲ್ಲಿ ಜನ್ಮಾಷ್ಟಮಿ ಸಮಯದಲ್ಲಿ ನಡೆಯುವ ವಿಟ್ಲ ಪಿಂಡಿ ಪಿಲಿನಲಿಕೆಯಲ್ಲಿ ಗಮನ ಸೆಳೆಯುವ ಹುಲಿ ರಂಜನ್ ಕಲ್ಕೂರ. ಇವರು ಅಂತಿಂಥ ಹುಲಿ ಅಲ್ಲ ಮಲ್ಟಿ ಮಿಲೇನಿಯರ್ ಹುಲಿ.

ನವರಾತ್ರಿ  (Navaratri)ಹಬ್ಬ ಆರಂಭವಾಗಿದೆ. ಇನ್ನು ನಮ್ಮ ತುಳುನಾಡಿನಲ್ಲಿ ಅಂದ್ರೆ, ಮಂಗಳೂರು, ಉಡುಪಿ ಮೊದಲಾದೆಡೆ ಟಾಸೆಯ ಸದ್ದು ಕೇಳಿ ಬರುತ್ತದೆ. ಅಂದ್ರೆ ಹುಲಿ ವೇಷದ ಕುಣಿತ, ಪಿಲಿ ನಲಿಕೆ ಜೋರಾಗಿಯೇ ನಡೆಯುತ್ತದೆ. ಈ ಸಮಯದಲ್ಲಿ ಗಮನ ಸೆಳೆಯುವ ಹುಲಿ ರಂಜನ್ ಕಲ್ಕೂರ.

ರಂಜನ್ ಕಲ್ಕೂರ ಉಡುಪಿಯವರು. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ನಡೆಯುವ ವಿಟ್ಲಪಿಂಡಿ , ಪಿಲಿನಲಿಕೆಯಲ್ಲಿ ಗಮನ ಸೆಳೆಯುವ ಹುಲಿ ಇವರು. ಹುಲಿ ವೇಷ ಹಾಕೋದು ಅಂದ್ರೆ ಕೇವಲ ಬಡವರು ಮಾತ್ರ ಹಾಕೋದು ಎನ್ನುವ ಮಾತಿಗೆ ವಿರುದ್ಧವಾಗಿ, ಹುಲಿ ವೇಷ ಧರಿಸಿ ಕುಣಿಯುವ ರಂಜನ್ ಕಲ್ಕೂರ ಮಲ್ಟಿ ಮಿಲೇನಿಯರ್ (multi millionaire).

ಹೌದು ಈ ಮಾತು ಸುಳ್ಳಲ್ಲ. ನವರಾತ್ರಿ ಸಮಯದಲ್ಲಿ ವೇಷ ಧರಿಸಿ, ಗುಂಪಿನಲ್ಲಿ ಮನೆ ಮನೆಗೆ ತೆರಳಿ ಟಾಸೆಯ ಸದ್ದಿಗೆ ಸ್ಟೆಪ್ಸ್ ಹಾಕುವವರನ್ನು ನೀವು ನೋಡಿರುತ್ತೀರಿ. ಈ ರೀತಿ ಹುಲಿ ವೇಷ ಹಾಕಿ ಕುಣಿಯೋರು ಕೇವಲ ಬಡವರು ಎಂದು ನೀವು ಅಂದುಕೊಂಡರೆ ಅದು ತಪ್ಪು. ಯಾಕಂದ್ರೆ ಈ ಹುಲಿ ಕೋಟ್ಯಾಧಿಪತು ಹುಲಿ.

ವಿಟ್ಲಪಿಂಡಿಯಲ್ಲಿ ಗಮನ ಸೆಳೆಯುವ ರಂಜನ್ ಕಲ್ಕೂರ (Ranjan Kalkura) . ದೊಡ್ಡ ಉದ್ಯಮಿ. ಕಲ್ಕೂರ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಕಲ್ಕೂರ ರೆಫ್ರಿಜರೇಶನ್‌ ಆಂಡ್‌ ಕಿಚನ್‌ ಇಕ್ವಿಪ್‌ಮೆಂಟ್ಸ್‌ , ಕಲ್ಕೂರ ಬಿಲ್ಡರ್ಸ್‌ ಆಂಡ್‌ ಡೆವಲಪರ್ಸ್ ಸಂಸ್ಥೆ ಇವರಿಗೆ ಸೇರಿದ್ದು.

ಮಂಗಳೂರು, ಉಡುಪಿಯಲ್ಲಿ ಪಿಲಿನಲಿಕೆ ಅಂದ್ರೆ ಅದು ಭಕ್ತಿಯ ಸಂಕೇತ ಹಾಗಾಗಿ, ಬ್ಯುಸಿನೆಸ್ ಮೆನ್, ಲಾಯರ್, ಇಂಜಿನಿಯರ್ಸ್ ಎಲ್ಲರೂ ಸಾಮಾನ್ಯವಾಗಿ ಹುಲಿ ವೇಷ ಧರಿಸುತ್ತಾರೆ. ಉದ್ಯಮಿಯಾಗಿರುವ ರಂಜನ್ ಕಲ್ಕೂರ ಅವರು ಕೂಡ ಪ್ರತಿ ವರ್ಷ ಹುಲಿ ವೇಷ ಧರಿಸಿ, ಉಡುಪಿಯಲ್ಲಿ ಮಿಂಚುತ್ತಾರೆ.

ರಂಜನ್ ಕಲ್ಕೂರರು ಪ್ರತಿವರ್ಷ ವಿಟ್ಲಪಿಂಡಿಯಂದು ಹುಲಿವೇಷ ಧರಿಸಿ, ಒಂದೂವರೆ ಕೋಟಿಯ ಬಿಎಂಡಬ್ಲ್ಯೂ ಕಾರಲ್ಲಿ ಉಡುಪಿ ಬೀದಿ ಬೀದಿಯಲ್ಲಿ ರೌಂಡ್ಸ್ ಹಾಕುತ್ತಾರೆ. ನಂತರ ನೇರವಾಗಿ, ಉಡುಪಿ ಮಠಕ್ಕೆ ತೆರಳಿ, ಅಲ್ಲಿಂದ ಮೊಸರು ಕುಡಿಕೆಯಲ್ಲೂ ಭಾಗಿಯಾಗುತ್ತಾರೆ.

ಇನ್ನು ಜನ್ಮಾಷ್ಟಮಿ ಸಮಯದಲ್ಲಿ ಉಡುಪಿಯಲ್ಲಿ ಪ್ರತಿವರ್ಷ ಕಲ್ಕೂರ ಸಂಸ್ಥಾನದಿಂದ ಹುಲಿ ವೇಷ ನರ್ತನ ಪ್ರದರ್ಶನ ನಡೆಯುತ್ತದೆ. ಇಲ್ಲಿ ವಿವಿಧ ತಂಡಗಳಿಂದ ಹುಲಿ ವೇಷ ಕುಣಿತ ನಡೆಯುತ್ತದೆ. ಈ ಕಾರ್ಯಕ್ರಮದ ರುವಾರಿ ಕೂಡ ರಂಜನ್ ಕಲ್ಕೂರ.

Source link

Leave a Reply

Your email address will not be published. Required fields are marked *