
ಕೆಲವು ಸಿನಿಮಾ ವೆಬ್‌ಸೈಟ್‌ಗಳು ಕಾಂತಾರ ಚಾಪ್ಟರ್ 1 ಕಲಾವಿದರ ಸಂಭಾವನೆ ಎಷ್ಟು ಎಂದು ವರದಿ ಮಾಡಿವೆ. ಆದ್ರೆ ಈ ಅಂಕಿಅಂಶಗಳನ್ನು ಚಿತ್ರತಂಡ ದೃಢಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ಸಂಭಾವನೆ ಕುರಿತ ಪೋಸ್ಟ್‌ಗಳು ವೈರಲ್ ಆಗುತ್ತಿದೆ. ಹಾಗಾದ್ರೆ ಪ್ರಮುಖ ಕಲಾವಿದರ ಸಂಭಾವನೆ ಎಷ್ಟು ಎಂದು ನೋಡೋಣ ಬನ್ನಿ.
- ರಿಷಬ್ ಶೆಟ್ಟಿ: 100 ಕೋಟಿ ರೂಪಾಯಿ
- ಗುಲ್‌ಶನ್ ದೇವಯ್ಯ: 1 ಕೋಟಿ ರೂಪಾಯಿ
- ಜಯರಾಮ್: 1 ಕೋಟಿ ರೂಪಾಯಿ
- ರುಕ್ಮಿಣಿ ವಸಂತ: 1 ಕೋಟಿ ರೂಪಾಯಿ
ನಿರ್ದೇಶನದೊಂದಿಗೆ ನಟನೆಯೂ ಮಾಡಿರುವ ಹಿನ್ನೆಲೆ ರಿಷಬ್ ಶೆಟ್ಟಿ ಸಂಭಾವನೆ ಅಧಿಕವಾಗಿದೆ ಎನ್ನಲಾಗಿದೆ. ರಿಷಬ್ ಮಡದಿ ಪ್ರಗತಿ ಶೆಟ್ಟಿ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ ಸಿನಿಮಾಗಾಗಿ ಕನ್ನಡ ಚಿತ್ರರಂಗದ ಬಲಿ ಸಾಧ್ಯವಿಲ್ಲ: ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ – ಸಾ.ರಾ.ಗೋವಿಂದು