
1.ಸಾಹಸಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿರುವ ‘ಸೂರ್ಯವಂಶ’ದಲ್ಲಿ ಅಜ್ಜ ಯಾರಿಗೂ ತಿಳಿಯದಂತೆ ಮೊಮ್ಮಗನನ್ನು ಭೇಟಿಯಾಗುತ್ತಾನೆ. ಅಲ್ಲಿ ಗಸಗಸೆ ಪಾಯಸ, ಇಲ್ಲಿ ಗುಲಾಬ್ ಜಾಮೂನ್.
2.ರವಿಚಂದ್ರನ್ ಮತ್ತು ಸುಧಾರಾಣಿ ನಟನೆಯ ‘ಮನೆದೇವ್ರು’ ಸಿನಿಮಾದಲ್ಲಿಯೂ ಇದೇ ರೀತಿಯ ದೃಶ್ಯಗಳಿವೆ. ಹೆಂಡ್ತಿ ಮತ್ತು ಮಗನಿಂದ ಹೀರೋ ದೂರವಾಗಿರುತ್ತಾರೆ. ಎದುರಿನ ಮನೆಯಲ್ಲಿದ್ರೂ ಮಗನಿಗೆ ತಂದೆ ಯಾರು ಎಂದು ಗೊತ್ತಿರಲ್ಲ. ಶಾಲೆಗೆ ಬರುವ ಮಗನನ್ನು ಹೀರೋ ಪತ್ನಿಗೆ ತಿಳಿಯದಂತೆ ಭೇಟಿಯಾಗುತ್ತಿರುತ್ತಾನೆ.
3.ಶಶಿಕುಮಾರ್ ಮತ್ತು ಶೃತಿ ಅಭಿನಯದ ‘ಎದುರು ಮನೆಯಲ್ಲಿ ಗಂಡ, ಪಕ್ಕದ ಮನೆಯಲ್ಲಿ ಹೆಂಡತಿ’ ಸಿನಿಮಾದಲ್ಲಿಯೂ ಇದೇ ರೀತಿಯ ಕಥೆಯನ್ನು ನೋಡಬಹುದು. ಇಲ್ಲಿ ಮಗನೇ ಬೇರೆಯಾಗಿರುವ ತಂದೆ-ತಾಯಿಯನ್ನು ಒಂದು ಮಾಡುತ್ತಾನೆ.
ಇದನ್ನೂ ಓದಿ: ಕರಗಿದೆ ಕಾಯುವಿಕೆ.. ಅಪ್ಪನಿಗೆ ಸಿಕ್ಕಿದೆ ‘ಅಪ್ಪು’ವಿನ ಅಪ್ಪುಗೆ! ಗೌತಮ್ ಖುಷಿಗೆ ಪಾರವೇ ಇಲ್ಲ!