Headlines

Brahmagantu ಸೀರಿಯಲ್​ಗೆ ಹೊಸ ಹೀರೋ ಎಂಟ್ರಿ! ಕಿಡ್​ನ್ಯಾಪ್​ ಆಗಿರೋ ದೀಪಾ ಕಾಪಾಡಲು ಬಂದನೀತ…

Brahmagantu ಸೀರಿಯಲ್​ಗೆ ಹೊಸ ಹೀರೋ ಎಂಟ್ರಿ! ಕಿಡ್​ನ್ಯಾಪ್​ ಆಗಿರೋ ದೀಪಾ ಕಾಪಾಡಲು ಬಂದನೀತ…

Brahmagantu ಸೀರಿಯಲ್​ಗೆ ಹೊಸ ಹೀರೋ ಎಂಟ್ರಿ! ಕಿಡ್​ನ್ಯಾಪ್​ ಆಗಿರೋ ದೀಪಾ ಕಾಪಾಡಲು ಬಂದನೀತ…

’ಬ್ರಹ್ಮಗಂಟು’ ಸೀರಿಯಲ್‌ನಲ್ಲಿ ಸೌಂದರ್ಯಳಿಂದ ಕಿಡ್ನಾಪ್ ಆದ ದೀಪಾಳನ್ನು ರಕ್ಷಿಸಲು ಹೊಸ ಹೀರೋ ಎಂಟ್ರಿ ಕೊಟ್ಟಿದ್ದಾನೆ. ಈ ಘಟನೆಯ ನಂತರ, ವೀಕ್ಷಕರು ಕಾತರದಿಂದ ಕಾಯುತ್ತಿದ್ದ ದೀಪಾಳ ಮಾಡೆಲ್ ದಿಶಾ ರೂಪದ ಪರಿಚಯವಾಗಲಿದ್ದು, ನಟಿ ದಿಯಾ ಪಾಲಕ್ಕಲ್ ಅವರ ನಿಜವಾದ ಸೌಂದರ್ಯ ತೆರೆಯ ಮೇಲೆ ಅನಾವರಣಗೊಳ್ಳಲಿದೆ.

ಬ್ರಹ್ಮಗಂಟು ಸೀರಿಯಲ್​ (Brahmagantu Serial) ದೀಪಾ, ದಿಶಾ ಆಗಿ ಇನ್ನೇನು ವೀಕ್ಷಕರ ಕಣ್ಣಮುಂದೆ ಬರಲಿದ್ದಾಳೆ. ‘ಪ್ಲೀಸ್​ ದೀಪಾ, ನಿನ್ನ ರಿಯಲ್​ ಮುದ್ದು ಮುಖ ತೋರಿಸು ಕಣೆ… ಹೀಗೆ ನೋಡಲು ಆಗಲ್ಲ’… ‘ಡೈರೆಕ್ಟರ್​ ಸಾಹೇಬ್ರೇ ಈ ವೇಷ ಯಾವಾಗ ಬದಲಿಸ್ತೀರಾ?’, ‘ಇವಳ ಒರಿಜಿನಲ್​ ಮುಖ ತೋರಿಸಿಲ್ಲಾ ಅಂದ್ರೆ ಸೀರಿಯಲ್ ನೋಡೋದನ್ನೇ ಬಿಟ್​ಬಿಡ್ತೀವಿ ಅಷ್ಟೇ ಎಂಬ ಧಮ್ಕಿ!…’ ಹೀಗೆ ಪ್ರತಿನಿತ್ಯವೂ ನಟಿಯ ನಿಜವಾದ ಮುಖವನ್ನು ನೋಡಲು ಕಾತರದಿಂದ ವೀಕ್ಷಕರು ಕಾಯ್ತಿರೋ ವೀಕ್ಷಕರಿಗೆ ದಿಶಾ ಕಾಣಿಸಿಕೊಳ್ಳಲಿದ್ದಾಳೆ.

ಇದರ ಮುನ್ನವೇ ದೀಪಾ ಕಿಡ್​ನ್ಯಾಪ್​ ಆಗಿದ್ದಾಳೆ. ಅದನ್ನು ಮಾಡಿಸಿದ್ದು ಯಾರು ಎಂದು ಬೇರೆ ಹೇಳಬೇಕಾಗಿಲ್ಲ. ಅವಳೇ ಸ ಸೌಂದರ್ಯ. ತನ್ನ ಗಂಡನಿಗೆ ರೂಪ ಅಲ್ಲ ಗುಣ ಮುಖ್ಯ, ಅದನ್ನು ನಾನು ಸಾಬೀತು ಮಾಡುತ್ತೇನೆ ಎಂದು ದೀಪಾ, ಸೌಂದರ್ಯಳಿಗೆ ಸವಾಲು ಹಾಕಿದ್ದಳು. ಇವಳದ್ಯಾಕೋ ಅತಿಯಾಯಿತು ಎಂದುಕೊಂಡ ಸೌಂದರ್ಯ ದೀಪಾಳನ್ನು ಕಿಡ್​ನ್ಯಾಪ್​ ಮಾಡಿಸಿದ್ದಾಳೆ.

ನಿನ್ನನ್ನು ಕಾಪಾಡಲು ಯಾರು ಬರ್ತಾರೆ ಎಂದು ನೋಡಿಯೇ ಬಿಡ್ತೇನೆ ಎಂದು ರೌಡಿಗಳು ಚಾಲೆಂಜ್​ ಹಾಕಿದ್ದಾಳೆ. ಅಷ್ಟರಲ್ಲಿಯೇ ಹೊಸ ಹೀರೋ ಎಂಟ್ರಿಯಾಗಿದೆ. ಆತ ದೀಪಾಳನ್ನು ಬಿಡಿಸಿಕೊಂಡು ಬರಲು ದೌಡಾಯಿಸಿದ್ದಾನೆ.

ಈಗ ರಿಲೀಸ್​ ಆಗಿರೋ ಪ್ರೊಮೋದಲ್ಲಿ ಹೀರೋನ ಮುಖ ತೋರಿಸಿಲ್ಲ. ಆದರೆ ಈತ ಬೇರಾರೂ ಅಲ್ಲ ನಾನಿನ್ನ ಬಿಡಲಾರೆ (Naa Ninna Bidalaare) ಶರತ್​ ಎಂದೇ ನೆಟ್ಟಿಗರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಹಾಗಿದ್ರೆ ಹೀರೋ ರೋಲ್​ ಬದಲಾಯಿತಾ ಎಂದು ಹಲವರು ಪ್ರಶ್ನೆ ಕೂಡ ಮಾಡುತ್ತಿದ್ದಾರೆ. ಆದರೆ ವಿಶೇಷ ಸಂದರ್ಭಗಳಲ್ಲಿ ಒಂದು ಸೀರಿಯಲ್​ ನಾಯಕ-ನಾಯಕಿ ಇನ್ನೊಂದು ಸೀರಿಯಲ್​ಗೆ ಅತಿಥಿಯಾಗಿ ಎಂಟ್ರಿ ಕೊಡುವುದು ಮಾಮೂಲು.

ಈ ಹೀರೋ ದೀಪಾಳನ್ನು ಬಚಾವ್​ ಮಾಡ್ತಾನಾ ಎನ್ನುವುದು ಮುಂದಿರುವ ಪ್ರಶ್ನೆ. ಹೀರೋ ಎಂಟ್ರಿ ಆದ್ಮೇಲೆ ದೀಪಾ ಬಚಾವ್​ ಆಗಲೇಬೇಕು. ಅಲ್ಲಿ ದೀಪಾ ದಿಶಾ ಆಗಿ ಬದಲಾಗ್ತಿರೋ ಈ ಹೊತ್ತಿನಲ್ಲಿ ಅದಕ್ಕೂ ಮುನ್ನ ಒಂದು ಟ್ವಿಸ್ಟ್​ ಕೊಟ್ಟಿದ್ದಾರೆ ಅಷ್ಟೇ.

ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​… ಈ ವೇಷದಲ್ಲಿ ಕಾಣಿಸಿಕೊಳ್ತಿರೋ ದೀಪಾ ಈಗ ಮಾಡೆಲ್​ ದಿಶಾ ಆಗಿ ಬದಲಾಗ್ತಿದ್ದಾಳೆ. ಅಂದಹಾಗೆ ದೀಪಾ- ದಿಶಾಳ ರಿಯಲ್​ ನೇಮ್​ ದಿಯಾ ಪಾಲಕ್ಕಲ್​. ರಿಯಲ್​ ಮುಖ ಮುದ್ದಾಗಿ ಇರೋದನ್ನು ನೋಡಿರುವ ವೀಕ್ಷಕರು, ಅದೇ ಮುಖವನ್ನೇ ತೋರಿಸಿ ಇನ್ನಾದರೂ ಎಂದು ನಿರ್ದೇಶಕರನ್ನು ದುಂಬಾಲು ಬೀಳುವುದನ್ನು ಕಮೆಂಟ್​ಗಳಲ್ಲಿ ನೋಡಬಹುದಾಗಿದೆ. ಬಾಲಕಿಯಾಗಿ ಮನಸೆಳೆದಿದ್ದ ದಿಯಾ ಈಗ ನಾಯಕಿಯಾಗಿದ್ದಾರೆ.

ಕೊನೆಗೂ ಈ ಆಸೆಯನ್ನು ಈಡೇರಿಸಿಯೇ ಬಿಟ್ಟಿದ್ದಾರೆ ನಿರ್ದೇಶಕರು. ಬ್ರಹ್ಮಗಂಟು ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ದೀಪಾಳ ಅಸಲಿ ಮುಖ ಬಯಲಾಗುವ ಟೈಮ್​ ಬಂದೇ ಬಿಟ್ಟಿದೆ. ಇದೀಗ ಗಂಡನ ಎದುರು ದಿಶಾ ಆಗಿ ಕಾಣಿಸಿಕೊಳ್ತಿದ್ದಾಳೆ ದೀಪಾ.

Source link

Leave a Reply

Your email address will not be published. Required fields are marked *