ಕಾಂತಾರ ಟ್ರೈಲರ್ ಅಬ್ಬರದ ನಡುವೆ ಸಪ್ತಮಿ ಗೌಡರನ್ನು ಮಿಸ್ ಮಾಡಿಕೊಂಡ ಫ್ಯಾನ್ಸ್

ಕಾಂತಾರ ಟ್ರೈಲರ್ ಅಬ್ಬರದ ನಡುವೆ ಸಪ್ತಮಿ ಗೌಡರನ್ನು ಮಿಸ್ ಮಾಡಿಕೊಂಡ ಫ್ಯಾನ್ಸ್

ಕಾಂತಾರ ಟ್ರೈಲರ್ ಅಬ್ಬರದ ನಡುವೆ ಸಪ್ತಮಿ ಗೌಡರನ್ನು ಮಿಸ್ ಮಾಡಿಕೊಂಡ ಫ್ಯಾನ್ಸ್

ಕನ್ನಡ ಚಿತ್ರರಂಗದ ಭರವಸೆಯ ನಟಿ ಸಪ್ತಮಿ ಗೌಡ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಸುರ ಸುಂದರಿಯಂತೆ ಕಾಣುತ್ತಿರುವ ನಟಿಯನ್ನು ಹೊಗಳಿರುವ ಅಭಿಮಾನಿಗಳು, ಕಾಂತಾರ ಚಾಪ್ಟರ್ 1 ರಲ್ಲಿ ನಿಮ್ಮನ್ನು ಮಿಸ್ ಮಾಡಿಕೊಂಡ್ವಿ ಎನ್ನುತ್ತಿದ್ದಾರೆ.

ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು, ಇದೀಗ ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಿ ಎಲ್ಲೆಡೆ ಅಬ್ಬರಿಸುತ್ತಿರುವ ನಡುವೆ, ಜನರು ಸಪ್ತಮಿ ಗೌಡರನ್ನು (Sapthami Gowda) ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ರಿಷಭ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ಟ್ರೈಲರ್ (Kantara Chapter 1 trailer ) ಇತ್ತೀಚೆಗೆ ತೆರೆ ಕಂಡಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಸಮಯದಲ್ಲಿ ಜನರು ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದಲ್ಲಿ ಮಿಂಚಿದ ಸಪ್ತಮಿ ಗೌಡರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಸಪ್ತಮಿ ಗೌಡ ಇದೀಗ ಹೊಸದಾಗಿ ಫೋಟೊ ಶೂಟ್ ಮಾಡಿಸಿಕೊಂಡು, ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಲ್ವರ್ ಬಣ್ಣದ ಸೀರೆಯುಟ್ಟಿರುವ ಚೆಲುವೆ Embracing the silver lining ಎಂದು ಬರೆದುಕೊಂಡಿದ್ದಾರೆ.

ಸಪ್ತಮಿ ಗೌಡ ಫೋಟೊ ನೋಡಿ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಕಾಮೆಂಟ್ ಮಾಡಿ ಪ್ರೆಟಿ ಎಂದು ಹೇಳಿದ್ದಾರೆ. ಇನ್ನು ಅಭಿಮಾನಿಗಳು ಸಹ ಬ್ಯೂಟಿ, ಏಂಜಲ್, ಬಾಸ್, ಪ್ರೆಟಿ, ನಿಮ್ಮ ಅಂದವನ್ನು ನೋಡುತ್ತಿದ್ದರೆ ಹೊಟ್ಟೆಯುರಿತ್ತೆ ಅಂತಾನು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಹಲವರು ಕಾಮೆಂಟ್ ಮಾಡಿ, ಸಪ್ತಮಿ ಕಾಂತಾರ ಸಿನಿಮಾದಲ್ಲಿ ನೀವು ಇರಬೇಕಿತ್ತು. ನೀವು ಈ ಸಿನಿಮಾಗೆ ಸರಿಯಾಗಿ ಆಯ್ಕೆಯಾಗಿದ್ದೀರಿ. ಆದಷ್ಟು ಬೇಗ ಹೊಸ ಸಿನಿಮಾ ಮೂಲಕ ತೆರೆ ಮೇಲೆ ಬನ್ನಿ ಎಂದಿದ್ದಾರೆ.

ನಿನ್ನೆ ರಾಯಚೂರಿನಲ್ಲಿ ಶಾಪಿಂಗ್ ಮಾಲ್ ಉದ್ಘಾಟನೆ ಮಾಡಿ, ಕಾಂತಾರ ಚಾಪ್ಟರ್ 1 ಕುರಿತು ಮಾತನಾಡಿದ ಸಪ್ತಮಿ ಟ್ರೈಲರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಮೊದಲ ಸಿನಿಮಾಗೆ ನೀಡಿದ ಬೆಂಬಲವನ್ನು ಈ ಸಿನಿಮಾಗೂ ನೀಡಿ ಎಂದಿದ್ದಾರೆ.

ಸಪ್ತಮಿ ಗೌಡ ಕೊನೆಯದಾಗಿ ತೆಲುಗಿನ ತಮ್ಮುಡು ಸಿನಿಮಾದಲ್ಲಿ ನಟಿಸಿದ್ದರು, ಅವರು ನಟಿಸಿದ ಇನ್ನೆರಡು ಸಿನಿಮಾಗಳು ತೆರೆ ಮೇಲೆ ಬರಲಿದೆ. ಅದರಲ್ಲಿ ಒಂದು ದಿ ರೈಸ್ ಆಫ್ ಅಶೋಕ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಗೆ ನಾಯಕಿಯಾಗಲಿದ್ದಾರೆ ಸಪ್ತಮಿ.

Source link

Leave a Reply

Your email address will not be published. Required fields are marked *