ಈ ಇಬ್ಬರಿಂದಲೇ ನನ್ನ ಕ್ರಿಕೆಟ್ ಜೀವನ ಬೇಗ ಮುಗಿಯಿತು: ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್ | Shikhar Dhawan Reveals 2 Players Behind His Exit From International Cricket Kvn

ಈ ಇಬ್ಬರಿಂದಲೇ ನನ್ನ ಕ್ರಿಕೆಟ್ ಜೀವನ ಬೇಗ ಮುಗಿಯಿತು: ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್ | Shikhar Dhawan Reveals 2 Players Behind His Exit From International Cricket Kvn



ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಒಂದು ವರ್ಷ ಕಳೆದಿದೆ. ತಮ್ಮ ವೃತ್ತಿಜೀವನ ಅಂತ್ಯಗೊಳ್ಳಲು ಕಾರಣರಾದ ಇಬ್ಬರು ಆಟಗಾರರ ಬಗ್ಗೆ ಧವನ್ ಬಹಿರಂಗಪಡಿಸಿದ್ದಾರೆ.

ಬೆಂಗಳೂರು: ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಒಂದು ವರ್ಷವೇ ಕಳೆದಿದೆ. ಇಷ್ಟು ಬೇಗ ಶಿಖರ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಕೊನೆಯಾಗಲಿದೆ ಎನ್ನುವುದು ಸ್ವತಃ ಎಡಗೈ ಬ್ಯಾಟರ್‌ ಕೂಡಾ ಊಹಿಸಿರಲಿಲ್ಲ. ಇನ್ನು ಶಿಖರ್ ಧವನ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಆರಂಭ ಅಷ್ಟೇನೂ ಗಮನಾರ್ಹವಾಗಿರಲಿಲ್ಲ. ಆದರೆ 2013ರಲ್ಲಿ ಶಿಖರ್ ಧವನ್ ಅತ್ಯಮೋಘ ಪ್ರದರ್ಶನ ತೋರುವ ಮೂಲಕ ಭಾರತ ತಂಡದಲ್ಲಿ ಆರಂಭಿಕನಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು.

ಶಿಖರ್ ಧವನ್ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಆಸ್ಟ್ರೇಲಿಯಾ ಎದುರು ಆಕರ್ಷಕ ಶತಕ ಸಿಡಿಸುವ ತಾನು ಭಾರತ ಪರ ದೀರ್ಘಕಾಲ ಆರಂಭಿಕ ಆಟಗಾರನಾಗಿ ಮಿಂಚಬಲ್ಲೇ ಎನ್ನುವ ಸಂದೇಶ ರವಾನಿಸಿದ್ದರು. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಭಾರತ ಕಂಡ ಅತ್ಯಂತ ಯಶಸ್ವಿ ಆರಂಭಿಕ ಜೋಡಿಗಳ ಪೈಕಿ ಒಂದು ಎನಿಸಿಕೊಂಡಿತು. ಹೀಗಿದ್ದೂ ಶಿಖರ್ ಧವನ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ದಿಢೀರ್ ಎನ್ನುವಂತೆ ಕೊನೆಗೊಂಡಿತು. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ದಿಢೀರ್ ಆಗಿ ಕೊನೆಗೊಳ್ಳಲು ಕಾರಣವಾದ ಇಬ್ಬರು ಆಟಗಾರರು ಯಾರು ಎನ್ನುವ ಕುರಿತಂತೆ ಹೊಸ ಬಾಂಬ್ ಸಿಡಿಸಿದ್ದಾರೆ.

ಯಾರಿಂದ ಧವನ್ ಕ್ರಿಕೆಟ್ ಬದುಕು ಕೊನೆಯಾಯ್ತು?:

ಹಿಂದೂಸ್ತಾನ್ ಟೈಮ್ಸ್ ಜತೆಗಿನ ಮಾತುಕತೆಯ ವೇಳೆಯಲ್ಲಿ ಶಿಖರ್ ಧವನ್ ಈ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುತ್ತಿದ್ದಂತೆಯೇ, ನನ್ನ ಕ್ರಿಕೆಟ್ ವೃತ್ತಿಜೀವನ ಕೊನೆಯಾಗುತ್ತಿದೆ ಎನ್ನುವ ಭಾವನೆ ಮೂಡಿತು ಎಂದು ಹೇಳಿದರು. ಇದಾದ ಬಳಿಕ ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಾದ ನಂತರ ನಾನು ಯಾರಿಗೂ ನನ್ನ ಕೈಬಿಟ್ಟಿದ್ದರ ಕುರಿತಂತೆ ಫೋನ್‌ನಲ್ಲಿ ಮಾತುಕತೆ ನಡೆಸಲಿಲ್ಲ. ಕೆಲವು ಸಹ ಆಟಗಾರರು ನನ್ನನ್ನು ಬೆಂಬಲಿಸಿದರು. ನಾನು ತಂಡದಿಂದ ಹೊರಗುಳಿದಿದ್ದರ ಬಗ್ಗೆ ಯಾವುದೇ ಬೇಸರವಿಲ್ಲ. ನಾನೀಗ ನನ್ನ ಬದುಕನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಶಿಖರ್ ಧವನ್ ಹೇಳಿದ್ದಾರೆ.

ಇನ್ನು ಮತ್ತೊಂದು ಕಡೆ ಶುಭ್‌ಮನ್ ಗಿಲ್ ಆ ಸಮಯದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಹೀಗಿದ್ದೂ ನಾನು ಏಕದಿನ ತಂಡದಲ್ಲಿದ್ದೆ. ಅಗ ನನಗೆ ಆಭಾಸವಾಗುತ್ತಿತ್ತು. ನನ್ನ ಕ್ರಿಕೆಟ್ ಬದುಕು ತುಂಬಾ ಜಾಸ್ತಿ ಸಮಯ ನಡೆಯುವುದಿಲ್ಲ ಎಂದು ಅರಿವಾಯಿತು ಎಂದು ಧವನ್ ಹೇಳಿದ್ದಾರೆ.

ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್, 2013ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಧವನ್ 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದಾದ ಬಳಿಕ 2015ರ ಏಕದಿನ ವಿಶ್ವಕಪ್ ಟೂರ್ನಿ ಹಾಗೂ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರನ್ ಮಳೆ ಹರಿಸಿದ್ದರು.

ಶಿಖರ್ ಧವನ್ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಂಡ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಭಾರತ ಪರ ಧವನ್ 34 ಟೆಸ್ಟ್, 167 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿದ್ದಾರೆ. ಧವನ್ 34 ಟೆಸ್ಟ್ ಪಂದ್ಯಗಳ 58 ಇನ್ನಿಂಗ್ಸ್‌ಗಳಿಂದ 2315 ರನ್ ಸಿಡಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 17 ಶತಕ ಹಾಗೂ 39 ಅರ್ಧಶತಕ ಸಹಿತ 6,793 ರನ್ ಬಾರಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ 11 ಅರ್ಧಶತಕ ಸಹಿತ 1759 ರನ್ ಬಾರಿಸಿದ್ದಾರೆ.



Source link

Leave a Reply

Your email address will not be published. Required fields are marked *