Headlines

Ramya Vinay Rajkumar Dating Rumors: ರಮ್ಯಾ ಜೊತೆ ಜ್ಯುವೆಲರಿ ಶಾಪ್‌ಗೆ ಹೋದ ವಿನಯ್ ರಾಜ್​ ಕುಮಾರ್ | Vinay Rajkumar And Ramya Clarify Relationship With Jewelry Ad Gvd

Ramya Vinay Rajkumar Dating Rumors: ರಮ್ಯಾ ಜೊತೆ ಜ್ಯುವೆಲರಿ ಶಾಪ್‌ಗೆ ಹೋದ ವಿನಯ್ ರಾಜ್​ ಕುಮಾರ್ | Vinay Rajkumar And Ramya Clarify Relationship With Jewelry Ad Gvd


ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ, ದೊಡ್ಮನೆ ಹುಡ್ಗ ವಿನಯ್ ಜೊತೆ ಜೊತೆಯಾಗಿ ಓಡಾಡೋದನ್ನ ನೋಡಿ, ಇವರೇನಾದ್ರೂ ಡೇಟಿಂಗ್ ಮಾಡ್ತಿದ್ದಾರಾ ಅಂತ ಅನೇಕರು ಪ್ರಶ್ನೆ ಮಾಡಿದ್ರು. ಆ ಪ್ರಶ್ನೆಗೀಗ ಒಂದು ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ ರಮ್ಯಾ ಅಂಡ್ ವಿನಯ್. ಯೆಸ್ ಇತ್ತೀಚೆಗೆ ರಮ್ಯಾ ಅಂಡ್ ವಿನಯ್ ರಾಜ್​ ಕುಮಾರ್ ಬಗ್ಗೆ ಹಬ್ಬಿರೋ ರೂಮರ್ಸ್​ ನಿಮ್ಮ ಕಿವಿಗೂ ಬಿದ್ದಿರಬಹುದು. ರಮ್ಯಾ-ವಿನಯ್ ಜೊತೆ ಜೊತೆಗೆ ಸುತ್ತಾಡೋದನ್ನ ನೋಡಿ ಇವರೇನಾದ್ರೂ ಡೇಟಿಂಗ್ ಮಾಡ್ತಾ ಇದ್ದಾರಾ ಅನ್ನೋ ಡೌಟ್ ಫ್ಯಾನ್ಸ್​ನ ಕಾಡತೊಡಗಿತ್ತು. ಇದಕ್ಕೆ ಕ್ಲಾರಿಟಿ ಕೊಟ್ಟಿದ್ದ ರಮ್ಯಾ, ವಿನಯ್ ನನಗೆ ತಮ್ಮ ಇದ್ದಂತೆ ಅಂದಿದ್ರು.

ಇಷ್ಟು ಹೇಳಿದ ಮೇಲೂ ಗುಸು ಗುಸು ಮಾತ್ರ ಕಮ್ಮಿ ಆಗಿರಲಿಲ್ಲ. ಸೋ ಈಗ ವಿಡಿಯೋವೊಂದರ ಮೂಲಕ ಫ್ಯಾನ್ಸ್​ಗೆ ಎರಡು ಸಂದೇಶ ಕೊಟ್ಟಿದೆ ಈ ಜೋಡಿ. ಈ ವಿಡಿಯೋದಲ್ಲಿ ‘ರಿಂಗ್ ಕೊಡಿಸ್ತೀನಿ ಬಾ’ ಅಂತ ರಮ್ಯಾಗೆ ಮೆಸೇಜ್ ಮಾಡ್ತಾರೆ  ವಿನಯ್. ಆ ಬಳಿಕ ಇಬ್ಬರೂ ಜ್ಯುವೆಲರಿ ಶಾಪ್​ಗೆ ಹೋಗ್ತಾರೆ.  ರಿಂಗ್ ಹುಡುಕುವಾಗ, ‘ಯಾಕೆ ರಿಂಗ್ ಕೊಡಬೇಕು ಅಂತ ಅನಿಸಿತು’ ಅಂತ ರಮ್ಯಾ ಪ್ರಶ್ನೆ ಮಾಡ್ತಾರೆ. ಅದಕ್ಕೆ ‘ಅವಳನ್ನು ಮೀಟ್ ಮಾಡಿ ಮೂರು ವರ್ಷ ಆಯ್ತು. ಅದಕ್ಕೆ ಏನಾದರೂ ಸ್ಪೆಷಲ್ ಆಗಿ ಗಿಫ್ಟ್ ಕೊಡೋಣ ಅನಿಸಿತು’ ಅಂತಾರೆ ವಿನಯ್. ಕೊನೆಗೂ ಇಬ್ಬರೂ ಸೇರಿ ಒಂದು ರಿಂಗ್ ಫೈನಲ್ ಮಾಡ್ತಾರೆ.

ಆಗ ರಿಂಗ್ ತೋರಿಸುತ್ತಿದ್ದ ವ್ಯಕ್ತಿ, ‘ಕಂಗ್ರಾಜ್ಯುಲೇಷನ್ ಸರ್, ಕಂಗ್ರ್ಯಾಜ್ಯುಲೇಷನ್ ಮ್ಯಾಮ್’ ಅಂತ ಹೇಳ್ತಾರೆ. ಆಗ ರಮ್ಯಾ, ‘ಇವನಿಗೆ ಓಕೆ, ನನಗೆ ಯಾಕೆ’ ಅಂತಾರೆ.. ಅಲ್ಲಿಗೆ ಈ ರಿಂಗ್ ನನಗಲ್ಲ ಅಂತ ಕ್ಲಾರಿಟಿ ಕೊಡೋ ರಮ್ಯಾ, ವಿನಯ್​ ಸದ್ಯದಲ್ಲೇ ಎಂಗೇಜ್ ಆಗ್ತಾರೆ ಅನ್ನೋ ಸಂದೇಶನೂ ಕೊಟ್ಟಿದ್ದಾರೆ. ಇದೊಂದು ಜುವೆಲರಿ ಶಾಪ್ ನ ಜಾಹೀರಾತು ಆಗಿದ್ದು, ಆ ಜಾಹೀರಾತಿನ ಮೂಲಕನೇ ತಮ್ಮ ರಿಲೇಷನ್​ಶಿಪ್ ಕುರಿತ ಗಾಸಿಪ್​ಗಳಿಗೆ ಉತ್ತರ ಕೊಟ್ಟಿದ್ದಾರೆ ರಮ್ಯಾ & ವಿನಯ್. ಇವರ ಕ್ರಿಯೇಟಿವಿಟಿಯನ್ನೇನೋ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆದ್ರೆ ವಿನಯ್ ರಿಂಗ್ ತೆಗೆದುಕೊಂಡಿದ್ದು ಯಾರಿಗೆ..? ಯಾರವಳು ದೊಡ್ಮನೆ ಸೊಸೆಯಾಗೋ ಹುಡ್ಗಿ ಅಂತ ಹೊಸ ಪ್ರಶ್ನೆ ಕೇಳಲಿಕ್ಕೆ ಶುರುಮಾಡಿದ್ದಾರೆ. 



Source link

Leave a Reply

Your email address will not be published. Required fields are marked *