ಮಗನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿಬಿಟ್ಟ 12th Fail Movie Actor Vikrant Massey

ಮಗನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿಬಿಟ್ಟ 12th Fail Movie Actor Vikrant Massey

ಖ್ಯಾತ ನಟ ವಿಕ್ರಾಂತ್ ಮಾಸ್ಸೆ ತಮ್ಮ ಮಗ ವರದಾನ್‌ನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟಿರುವ ವಿಷಯವನ್ನು ಈಗ ಬಹಿರಂಗಪಡಿಸಿದ್ದಾರೆ. ಯಾರನ್ನಾದರೂ ಧರ್ಮದ ಆಧಾರದ ಮೇಲೆ ನನ್ನ ಮಗ ತಾರತಮ್ಯ ಮಾಡಿದರೆ ನನಗೆ ಬೇಸರ ಆಗುವುದು ಎಂದು ಅವರು ಹೇಳಿದ್ದಾರೆ.

ಬಾಲಿವುಡ್ ನಟ ನಟ ವಿಕ್ರಾಂತ್ ಮಾಸ್ಸೆ ಕಳೆದ ವರ್ಷ ತಂದೆಯಾದರು. ಮಗ ವರದಾನ್‌ನ ಜನಿಸಿರುವ ವಿಷಯವನ್ನು ಅವರು ಶೇರ್‌ ಮಾಡಿಕೊಂಡಿದ್ದರು. ನನ್ನ ಕುಟುಂಬವು ಯಾವುದೇ ನಿರ್ದಿಷ್ಟ ಧರ್ಮವನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದರು. ಈಗ ನಟಿ ರಿಯಾ ಚಕ್ರವರ್ತಿಯವರ ಪಾಡ್‌ಕಾಸ್ಟ್‌ನಲ್ಲಿ ವಿಕ್ರಾಂತ್ ತಮ್ಮ ಮಗನ ಜನನ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ.

ವಿಕ್ರಾಂತ್‌ ಮಾತನಾಡಿ, “ನನಗೆ ಧರ್ಮವು ವೈಯಕ್ತಿಕ ಆಯ್ಕೆ. ಇದು ನನ್ನ ಲೈಫ್‌ಸ್ಟೈಲ್. ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ನನ್ನ ಮನೆಯಲ್ಲಿ ಎಲ್ಲಾ ರೀತಿಯ ಧರ್ಮದ ಆಚರಣೆಯೂ ಇದೆ. ಧರ್ಮವು ಮಾನವ ನಿರ್ಮಿತ. ನಾನು ಪೂಜೆ ಮಾಡುವೆ, ಗುರುದ್ವಾರಕ್ಕೆ ಹೋಗುವೆ, ದರ್ಗಾಕ್ಕೂ ಭೇಟಿ ನೀಡುವೆ. ಇವೆಲ್ಲವೂ ನನಗೆ ಶಾಂತಿಯನ್ನು ನೀಡುತ್ತವೆ” ಎಂದು ಹೇಳಿದ್ದಾರೆ.

“ನಮಗೆ ಯಾರೋ ಒಬ್ಬರು ರಕ್ಷಣೆ ನೀಡುತ್ತಿದ್ದಾರೆ ಎಂಬ ನಂಬಿಕೆ ಇದೆ. ತಮಗೆ ಸಿಕ್ಕಿರುವ ಕೆಲಸಕ್ಕಾಗಿ ಮತ್ತು ಪ್ರತಿದಿನ ರಕ್ಷಣೆ ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳನ್ನು ಹೇಳ್ತೀನಿ. ನಾನು ಈ ಬಗ್ಗೆ ಮಾತನಾಡಿದಾಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿರೋದು ನನಗೆ ಬೇಸರ ತಂದಿದೆ” ಎಂದಿದ್ದಾರೆ.

“ನನ್ನ ಮಗನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿ ಇಡಲಾಗಿದೆ. ಸರ್ಕಾರದಿಂದ ಬರ್ತ್‌ ಸೆರ್ಟಿಫಿಕೇಟ್‌ನ ಬಂದಾಗ, ಅದರಲ್ಲಿ ಧರ್ಮವನ್ನು ಉಲ್ಲೇಖ ಮಾಡಿರಲಿಲ್ಲ. ಸರ್ಕಾರವು ಧರ್ಮವನ್ನು ಕಡ್ಡಾಯವಾಗಿ ಬರೆಯಬೇಕು ಅಂತ ಹೇಳೋದಿಲ್ಲ, ಅದು ನಮ್ಮ ಆಯ್ಕೆ. ನಾನು ಬರ್ತ್‌ ಸೆರ್ಟಿಫಿಕೇಟ್‌ ನೋಡಿದ ಕೂಡಲೇ, ಧರ್ಮದ ಕಾಲಂನಲ್ಲಿ ಒಂದು ಡ್ಯಾಶ್ ಗುರುತು ಹಾಕಿದೆ. ನನ್ನ ಮಗ ಧರ್ಮ ನೋಡಿ ಯಾರನ್ನಾದರೂ ಅನುಸರಿಸಿ, ಆಮೇಲೆ ತಾರತಮ್ಯ ಮಾಡಿದರೆ, ಬೇಸರ ಆಗುವುದು. ನಾನು ನನ್ನ ಮಗನನ್ನು ಆ ರೀತಿ ಬೆಳೆಸ್ತಿಲ್ಲ” ಎಂದು ಹೇಳಿದ್ದಾರೆ.

“ನನ್ನ ತಂದೆ ಕ್ರಿಶ್ಚಿಯನ್, ತಾಯಿ ಸಿಖ್, ನನ್ನ ಸಹೋದರ 17ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ನಾನು ರಜಪೂತ್ ಠಾಕೂರ್ ಕುಟುಂಬದ ಶೀತಲ್‌ರನ್ನು ಮದುವೆಯಾದೆ. ನಾನು ಯಾವುದೇ ನಿರ್ದಿಷ್ಟ ಧರ್ಮವನ್ನು ಫಾಲೋ ಮಾಡಲ್ಲ, ಆದರೆ ದೇವರಲ್ಲಿ ಗಾಢವಾದ ನಂಬಿಕೆಯನ್ನು ಹೊಂದಿದ್ದೇನೆ. ನನ್ನ ಮಗನಿಗೆ ನಾಮಕರಣ ಸಂಸ್ಕಾರವನ್ನು ಮಾಡಿದ್ದೇವೆ” ಎಂದು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *