Asia Cup 2025: ಭಾರತವನ್ನು ಗೆಲ್ಲಿಸಿದ ಈ ಸ್ಟಾರ್ ಕ್ರಿಕೆಟಿಗನಿಗೆ ಫೈನಲ್‌ನಲ್ಲಿಲ್ಲ ಸ್ಥಾನ! ಅಚ್ಚರಿಯಾದ್ರೂ ಸತ್ಯ

Asia Cup 2025: ಭಾರತವನ್ನು ಗೆಲ್ಲಿಸಿದ ಈ ಸ್ಟಾರ್ ಕ್ರಿಕೆಟಿಗನಿಗೆ ಫೈನಲ್‌ನಲ್ಲಿಲ್ಲ ಸ್ಥಾನ! ಅಚ್ಚರಿಯಾದ್ರೂ ಸತ್ಯ

Asia Cup 2025: ಭಾರತವನ್ನು ಗೆಲ್ಲಿಸಿದ ಈ ಸ್ಟಾರ್ ಕ್ರಿಕೆಟಿಗನಿಗೆ ಫೈನಲ್‌ನಲ್ಲಿಲ್ಲ ಸ್ಥಾನ! ಅಚ್ಚರಿಯಾದ್ರೂ ಸತ್ಯ

ದುಬೈ: 2025ರ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಭಾರತ ತಂಡವು ಏಷ್ಯಾಕಪ್ ಫೈನಲ್‌ನಲ್ಲಿ ಯಾವ ಕಾಂಬಿನೇಷನ್‌ನೊಂದಿಗೆ ಕಣಕ್ಕಿಳಿಯಲಿದೆ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರಿನ ಗ್ರೂಪ್-4 ಹಂತದ ಪಂದ್ಯಕ್ಕೂ ಮುನ್ನವೇ ಫೈನಲ್ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದ್ದ ಟೀಂ ಇಂಡಿಯಾ, ಇದೀಗ ಶ್ರೀಲಂಕಾ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.

ಇದೀಗ ಏಷ್ಯಾಕಪ್ ಫೈನಲ್‌ನಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ.

ಇನ್ನು ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಭಾರತ ತಂಡವು ಲಂಕಾ ಎದುರು ರೋಚಕ ಜಯ ಸಾಧಿಸಿತು.

ಭಾರತ ಪರ ಸೂಪರ್ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಅರ್ಶದೀಪ್ ಸಿಂಗ್, ಒಂದೇ ಓವರ್‌ನಲ್ಲಿ ಕೇವಲ ಎರಡು ರನ್ ನೀಡಿ ಎರಡು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೀಗಿದ್ದೂ ಇದೀಗ ಅರ್ಶದೀಪ್‌ ಸಿಂಗ್‌ಗೆ ಸೆಪ್ಟೆಂಬರ್ 28ರಂದು ನಡೆಯಲಿರುವ ಪಾಕಿಸ್ತಾನ ಎದುರಿನ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿರುವುದು, ಅಚ್ಚರಿ ಎನಿಸಿದ್ರೂ ಸತ್ಯ.

ಹೌದು, ಅರ್ಶದೀಪ್ ಸಿಂಗ್, ಶ್ರೀಲಂಕಾ ಎದುರು ಬೌಲಿಂಗ್‌ನಲ್ಲಿ 4 ಓವರ್ ಎಸೆದು ಬರೋಬ್ಬರಿ 46 ರನ್ ನೀಡಿ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಸೂಪರ್ ಓವರ್‌ನಲ್ಲಿ ಅರ್ಶದೀಪ್ ಸಿಂಗ್ ಮಿಂಚಿನ ದಾಳಿ ನಡೆಸಿದ್ದರು.

ಇದೀಗ ಏಷ್ಯಾಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ನಂ.1 ವೇಗಿ ಜಸ್ಪ್ರೀತ್ ಬುಮ್ರಾ ಕಮ್‌ಬ್ಯಾಕ್ ಮಾಡುವುದು ಬಹುತೇಕ ಕನ್ಫರ್ಮ್ ಆಗಿದೆ. ಇದರ ಜತೆಗೆ ಸ್ಟಾರ್ ಆಲ್ರೌಂಡರ್ ಶಿವಂ ದುಬೆ ಕೂಡಾ ಕಮ್‌ಬ್ಯಾಕ್ ಮಾಡಲಿದ್ದಾರೆ.

ಹೀಗಾಗಿ ಅರ್ಶದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

Source link

Leave a Reply

Your email address will not be published. Required fields are marked *