
ಅದಕ್ಕೆ ಉತ್ತರಿಸಿದ ಅವರು, ‘ಪೂರ್ತಿ ಸಿನಿಮಾಗೆ ಅಲ್ಲ, ಕೆಲವು ದೃಶ್ಯಗಳಿಗೆ ಮಾತ್ರ. ನಾನು ಇದಕ್ಕೂ ಮುಂಚೆ ಹೀಗೆ ಮಾಡಿರಲಿಲ್ಲ, ಹಾಗಾಗಿ ಇದನ್ನು ಮಾಡುವಾಗ ನನಗೆ ಮನಸ್ಸಿನ ಸ್ಪಷ್ಟತೆ ಬೇಕಿತ್ತು. ಯಾವುದೇ ಗೊಂದಲದಲ್ಲಿ ಸಿಲುಕಲು ಇಷ್ಟವಿರಲಿಲ್ಲ. ಇದು ನಾನು ನಂಬುವ ದೈವ, ಹಾಗಾಗಿ ಆ ಸಮಯದಲ್ಲಿ ನನ್ನನ್ನು ನಾನು ನಿಯಂತ್ರಿಸಿಕೊಂಡಿದ್ದೆ’ ಎಂದರು. ‘ಸಾಮಾನ್ಯವಾಗಿ, ಶೂಟಿಂಗ್ ಸಮಯದಲ್ಲಿ ಸೆಟ್‌ನಲ್ಲಿ ಸಾವಿರಾರು ಜನ ಇರುತ್ತಾರೆ, ಆದರೆ ನಾನು ಈ ದೃಶ್ಯಗಳನ್ನು ಹಾಗೆ ಚಿತ್ರೀಕರಿಸಲಿಲ್ಲ. ನಾನು ತುಂಬಾ ಎಚ್ಚರಿಕೆಯಿಂದ ಇದ್ದೆ. ನಾನು ಯಾರ ನಂಬಿಕೆಯನ್ನೂ ಪ್ರಶ್ನಿಸುವುದಿಲ್ಲ. ನಾನು ಅದನ್ನು ಗೌರವಿಸುತ್ತೇನೆ, ಪ್ರತಿಯಾಗಿ ಅದನ್ನೇ ನಿರೀಕ್ಷಿಸುತ್ತೇನೆ’ ಎಂದು ರಿಷಬ್ ಹೇಳಿದರು.