
ಎಲಾನ್ ಮಸ್ಕ್‌ರ ಎಕ್ಸ್, ‘ಟಾಮ್, ಡಿಕ್ & ಹ್ಯಾರಿ ಅಧಿಕಾರಿಗಳು’ ಹೊರಡಿಸುವ ಟೇಕ್‌ಡೌನ್ ಆದೇಶಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಹೋರಾಡುತ್ತಿದೆ. ಸೂಕ್ತ ಪ್ರಕ್ರಿಯೆಯನ್ನು ಬೈಪಾಸ್ ಮಾಡುವ ಮತ್ತು ಆನ್‌ಲೈನ್‌ನಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಆದೇಶಗಳನ್ನು ಪ್ರಶ್ನಿಸಿದೆ.
ಬೆಂಗಳೂರು (ಜು.2): ಎಲಾನ್ ಮಸ್ಕ್ ಒಡೆತನದ ಎಕ್ಸ್ (ಹಿಂದೆ ಟ್ವಿಟರ್) ಜುಲೈ 1 ರ ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು “ಪ್ರತಿ ಟಾಮ್, ಡಿಕ್ & ಹ್ಯಾರಿ ಅಧಿಕಾರಿ” ಹೊರಡಿಸುವ ಟೇಕ್‌ಡೌನ್ ಆರ್ಡರ್‌ನಿಂದ ತಮ್ಮ ಫ್ಲಾಟ್‌ಫಾರ್ಮ್‌ಅನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿದೆ. ಕಂಡ ಕಂಡ ಅಧಿಕಾರಿಗಳೆಲ್ಲಾ ಟೇಕ್‌ಡೌನ್ ಆರ್ಡರ್ ನೀಡ್ತಿದ್ದಾರೆ. ಈ ನಿರ್ದೇಶನಗಳು ಅನಿಯಂತ್ರಿತವಾಗಿದೆ ಮತ್ತು ಸರಿಯಾದ ಮೇಲ್ವಿಚಾರಣೆಯ ಕೊರತೆಯನ್ನು ಹೊಂದಿವೆ ಎಂದು ವಾದಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಭಾರತ ಸರ್ಕಾರ ಹೊರಡಿಸಿದ ವಿಷಯ ನಿರ್ಬಂಧಿಸುವ ಆದೇಶಗಳನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯಲ್ಲಿ, ಟೇಕ್‌ಡೌನ್‌ಗಳು ಸೂಕ್ತ ಪ್ರಕ್ರಿಯೆಯನ್ನು ಬೈಪಾಸ್ ಮಾಡುತ್ತವೆ ಮತ್ತು ಆನ್‌ಲೈನ್‌ನಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ ಎಂದು ವಾದಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಈ ವಿಷಯವನ್ನು ವಿಚಾರಣೆ ಮಾಡಲು ಒಪ್ಪಿಕೊಂಡಿದೆ.
ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್ ಎಕ್ಸ್ ಪರವಾಗಿ ಹಾಜರಾದ ವಕೀಲ ಕೆಜಿ ರಾಘವನ್, ರೈಲ್ವೆ ಸಚಿವಾಲಯ ಹೊರಡಿಸಿದ ಇತ್ತೀಚಿನ ಟೇಕ್‌ಡೌನ್ ಆರ್ಡರ್‌ಅನ್ನು ಉಲ್ಲೇಖಿಸಿ, ಮಹಿಳೆಯೊಬ್ಬರು ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸುತ್ತಿರುವುದನ್ನು ತೋರಿಸುವ ಎಕ್ಸ್‌ನಲ್ಲಿ ವೈರಲ್ ಆದ ವೀಡಿಯೊವನ್ನು ಉಲ್ಲೇಖಿಸಿದರು.
ರೈಲು ಹಳಿಗಳ ಮೇಲೆ ಕಾರು ಚಲಾಯಿಸುವಂತಹ ಡೆವಲಪ್‌ಮೆಂಟ್ ಸುದ್ದಿಯಾಗಿದೆ ಎಂದು ಎಕ್ಸ್ ಕಾರ್ಪ್ ಪರ ವಕೀಲರು ವಾದಿಸಿದರು, ಆದರೆ ರೈಲ್ವೇ ಸಚಿವಾಲಯ ಅದನ್ನು ಕಾನೂನುಬಾಹಿರ ಎಂದು ಘೋಷಿಸಿತು. ನಾಯಿ ಮನುಷ್ಯನನ್ನು ಕಚ್ಚುವುದು ಸುದ್ದಿಯಲ್ಲ, ಆದರೆ ಮನುಷ್ಯ ನಾಯಿಯನ್ನು ಕಚ್ಚುವುದು ಖಂಡಿತವಾಗಿಯೂ ಸುದ್ದಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
X ಪರ ವಕೀಲರು ಇದನ್ನು “ಕಿಡಿಗೇಡಿತನ” ಮತ್ತು ಐಟಿ ಕಾಯ್ದೆಯಡಿ ಅಧಿಕಾರ ದುರುಪಯೋಗದ ಪ್ರಕರಣ ಎಂದು ಉಲ್ಲೇಖಿಸಿದ್ದಾರೆ. ಇಂಥ ಟೇಕ್‌ಡೌನ್ ಆದೇಶಗಳ ವಿರುದ್ಧ ರಕ್ಷಣೆ ಕೋರಿ ಎಕ್ಸ್ ಕೋರ್ಟ್‌ನ ಕದ ತಟ್ಟಿದೆ ಎಂದು ವಾದಿಸಿದರು.
ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. “ಟಾಮ್, ಡಿಕ್ & ಹ್ಯಾರಿ ಅಧಿಕಾರಿಗಳು” ಎಂಬ ಪದಗಳ ಬಳಕೆಯನ್ನು ಅವರು ತೀವ್ರವಾಗಿ ಆಕ್ಷೇಪಿಸಿದರು, ಇವರು ಸರ್ಕಾರಿ ಅಧಿಕಾರಿಗಳು ಎಂದು ವಾದಿಸಿದರು. ಡಿಜಿಟಲ್ ಕ್ಷೇತ್ರವು ಸಂಪೂರ್ಣವಾಗಿ ಅನಿಯಂತ್ರಿತವಾಗಿರುತ್ತದೆ ಎಂದು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆ ನಿರೀಕ್ಷಿಸಬಾರದು ಎಂದು ಅವರು ವಾದಿಸಿದರು.
ಬೆಂಬಲದ ಪ್ರದರ್ಶನದಲ್ಲಿ, ಡಿಜಿಟಲ್ ಮೀಡಿಯಾ ಹೌಸ್‌ಗಳ ಸಂಘವು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಆದೇಶಗಳ ಹೊರೆಯನ್ನು ದೊಡ್ಡ ತಂತ್ರಜ್ಞಾನ ವೇದಿಕೆಗಳಿಗಿಂತ ಕಂಟೆಂಡ್ ಕ್ರಿಯೇಟರ್‌ಗಳು ಎದುರಿಸುತ್ತಾರೆ ಎಂದು ವಾದಿಸಿದೆ.
ಅಂತಹ ವಿಷಯವನ್ನು ತೆಗೆದುಹಾಕುವ ಮೊದಲು ಕಂಟೆಂಟ್ ಕ್ರಿಯೇಟರ್‌ಗಳ ಅಭಿಪ್ರಾಯ ಕೇಳಬೇಕು ಎಂದು ಗ್ರೂಪ್ ಹೇಳಿದೆ, ಅನಿಯಂತ್ರಿತ ಸೆನ್ಸಾರ್ಶಿಪ್ ಡಿಜಿಟಲ್ ಪತ್ರಿಕೋದ್ಯಮ ಮತ್ತು ಮುಕ್ತ ಅಭಿವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಸೇರಿಸಿದೆ. ಎಲ್ಲಾ ಸಲ್ಲಿಕೆಗಳನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್, ಈಗ ಪ್ರಕರಣವನ್ನು ಜುಲೈ 8 ರಂದು ಅಂತಿಮ ವಿಚಾರಣೆಗೆ ನಿಗದಿಪಡಿಸಿದೆ.