Earth tremor in Kolihaal village yadgir: ಕೋಳಿಹಾಳ ಗ್ರಾಮದಲ್ಲಿ ಭೂಕಂಪದ ಅನುಭವ, ಜನರಲ್ಲಿ ಆತಂಕ | Earth Tremor In Kolihaal Village Yadgir People In Anxiety

Yadgir earthquake: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಭಯಭೀತರಾದ ಗ್ರಾಮಸ್ಥರು ರಾತ್ರಿಯಿಡೀ ಮನೆಯಿಂದ ಹೊರಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ (ಸೆ.28): ಹುಣಸಗಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭೂಕಂಪದ ಅನುಭವದಿಂದ ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರಗಡೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. 

ಭಾರಿ ಶಬ್ಧದೊಂದಿಗೆ ನಾಲ್ಕೈದು ಬಾರಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಜನರು ಭಯಗೊಂಡು ರಾತ್ರಿಯೆಲ್ಲ ಜಾಗರಣೆ ಮಾಡಿದ್ದಾರೆ. ಭೂಕಂಪದಿಂದ ಜನ-ಜಾನುವಾರು ಹಾಗೂ ಮನೆಗಳು ಹಾನಿ ಆಗಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ. 

ಇದನ್ನೂ ಓದಿ: ವಿಜಯಪುರದ ಸಿಂದಗಿಯಲ್ಲಿ ಒಂದೇ ದಿನ ಐದು ಬಾರಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ!

ಸ್ಥಳಕ್ಕೆ ತಹಸೀಲ್ದಾರ್‌ ಎಂ.ಬಸವರಾಜ ಭೇಟಿ ನೀಡಿ, ಭೂಮಿಯ ಆಳದಲ್ಲಿ ಸುಣ್ಣದ ಅಂಶದಲ್ಲಿ ಏರುಪೇರಾಗಿ ಶಬ್ದ ಹೊರಹೊಮ್ಮಿ ಭೂಕಂಪವಾಗಿರುವ ಅನುಭವ ಆಗಿದೆ, ಜನರು ಯಾವುದೇ ಕಾರಣಕ್ಕೆ ಆತಂಕ ಬೇಡ ಎಂದಿದ್ದಾರೆ. 

ಇದನ್ನೂ ಓದಿ:

ಭೂಕಂಪ ಸಮಯದಲ್ಲಿ ಜನರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಕಳೆದ ವರ್ಷವೂ ಕೋಳಿಹಾಳದಲ್ಲಿ ನಾಲ್ಕೈದು ಬಾರಿ ಭೂಕಂಪವಾಗಿತ್ತು. ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Source link

Leave a Reply

Your email address will not be published. Required fields are marked *