Bigg Boss Kannada Season 12 Show Karibasappa: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕರಿಬಸಪ್ಪ ಅವರು ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕರಿಬಸಪ್ಪ ಅವರು ಪೌರಕಾರ್ಮಿಕರ ಮಗನಂತೆ.

ಕರಿಬಸಪ್ಪ ಅವರಿಗೆ ಮದುವೆಯಾಗಿದ್ದು ಅವಳಿ ಗಂಡು ಮಕ್ಕಳು. ತುಂಬ ಸುಂದರವಾದ ಜೀವನ ಇದೆಯಂತೆ.

2004ರಲ್ಲಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಈ ಸ್ಪರ್ಧೆ ನಡೆದಿತ್ತು. ಆಮೇಲೆ ರಾಷ್ಟ್ರಗೀತೆ ಹಾಡಿಸಿದ್ದರು.

ಮಿಸ್ಟರ್ ಇಂಡಿಯಾ ಪ್ರಶಸ್ತಿ ಕೂಡ ಪಡೆದಿದ್ದಾರೆ. 2007ರಲ್ಲಿ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.

“ಬಿಗ್ ಬಾಸ್ ಎನ್ನೋದು ತುಂಬ ದೊಡ್ಡ ವೇದಿಕೆ. ನಾನು ಕೂಡ ಈ ಶೋನಲ್ಲಿ ಭಾಗವಹಿಸಬೇಕು ಎನ್ನೋದು ನನ್ನ ಆಸೆ. ಅದೀಗ ನೆರವೇರಿದೆ” ಎನ್ನುತ್ತಾರೆ ಕರಿಬಸಪ್ಪ. ‘ಎಲ್ಲರಂಥಲ್ಲ ನನ್ನ ಗಂಡ’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.

ನಾನು ನೋಡೋಕೆ ಸೀರಿಯಸ್ ಥರ ಕಾಣಬಹುದು, ಆದರೆ ಫುಲ್ ಕಾಮಿಡಿ ಮಾಡ್ತೀನಿ ಎಂದು ಕರಿಬಸಪ್ಪ ಹೇಳಿದ್ದಾರೆ.

Source link
BBK 12: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು, ಇಸ್ಲಾಮಾಬಾದಿನಲ್ಲಿ ರಾಷ್ಟ್ರಗೀತೆ ಹಾಡಿಸಿದ್ದ ಕರಿಬಸಪ್ಪ!