ವಾಸ್ತು ಶಾಸ್ತ್ರದ ಮೇಲೆ ನಂಬಿಕೆ ಇದ್ದರೆ, ಕೆಲವು ವಾಸ್ತು ಟಿಪ್ಸ್ ಪಾಲಿಸಿದರೆ ಬೇಗ ಲಾಭ ಪಡೆಯಬಹುದು. ವ್ಯಾಪಾರಕ್ಕೆ ಕಚೇರಿಯನ್ನು ಆಯ್ಕೆ ಮಾಡುವಾಗ ಅದರ ದಿಕ್ಕನ್ನು ಗಮನದಲ್ಲಿಟ್ಟುಕೊಳ್ಳಬೇಕು. ಉತ್ತರ, ಈಶಾನ್ಯ, ಪೂರ್ವ ದಿಕ್ಕುಗಳನ್ನು ವ್ಯಾಪಾರ ಅಭಿವೃದ್ಧಿಗೆ ಉತ್ತಮ ದಿಕ್ಕುಗಳೆಂದು ಪರಿಗಣಿಸಲಾಗುತ್ತದೆ. ವ್ಯಾಪಾರ ಆರಂಭಿಸುವಾಗ ಈ ಸ್ಥಳಗಳನ್ನು ಆಯ್ಕೆ ಮಾಡಿ.
ನೀವು ಆರಂಭಿಸುವ ಕಚೇರಿ ಅಥವಾ ಅಂಗಡಿ ನೈರುತ್ಯ, ಆಗ್ನೇಯ ದಿಕ್ಕುಗಳನ್ನು ತಪ್ಪಿಸಿ. ಈ ದಿಕ್ಕುಗಳಲ್ಲಿ ಆರ್ಥಿಕ ನಷ್ಟವಾಗುವ ಸಾಧ್ಯತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಕಚೇರಿಯಲ್ಲಿ ಕುಳಿತುಕೊಳ್ಳುವ ಸ್ಥಳವನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ನೀವು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ನಿಮ್ಮ ಬೆನ್ನು ಮುಂಬಾಗಿಲಿನ ಕಡೆಗೆ ಇರಬಾರದು.