Headlines

ಮಂಗಳೂರು ದಸರಾ ನೋಡೋದಕ್ಕೆ ಬರ್ತೀರಾ… ಹಾಗಿದ್ರೆ ಇವುಗಳನ್ನು ಮಿಸ್ ಮಾಡಲೇಬೇಡಿ

ಮಂಗಳೂರು ದಸರಾ ನೋಡೋದಕ್ಕೆ ಬರ್ತೀರಾ… ಹಾಗಿದ್ರೆ ಇವುಗಳನ್ನು ಮಿಸ್ ಮಾಡಲೇಬೇಡಿ

ಮಂಗಳೂರು ದಸರಾ ನೋಡೋದಕ್ಕೆ ಬರ್ತೀರಾ… ಹಾಗಿದ್ರೆ ಇವುಗಳನ್ನು ಮಿಸ್ ಮಾಡಲೇಬೇಡಿ

ಮಂಗಳೂರು ದಸರಾ ಕೂಡ ವಿಜೃಂಭಣೆಯಿಂದ ಜರುಗುತ್ತಿದೆ. ಮಂಗಳೂರು ನಗರದ ಬೀದಿ ಬೀದಿ ದೀಪಾಲಂಕಾರಗೊಂಡಿದೆ. ನೀವು ಈ ಬಾರಿ ಮಂಗಳೂರು ದಸರಾ ನೋಡೋದಕ್ಕೆ ಬರೋದಾದ್ರೆ ನೀವು ಮಿಸ್ ಮಾಡದೇ ನೋಡಬೇಕಾದ ಸ್ಥಳಗಳು, ಕಾರ್ಯಕ್ರಮಗಳು, ತಿನ್ನಬೇಕಾದ ಆಹಾರಗಳ ಲಿಸ್ಟ್ ಇಲ್ಲಿದೆ,

ಮೈಸೂರು ದಸರಾ (Mysore Dasara) ನಾಡ ಹಬ್ಬ, ಅದು ತುಂಬಾನೆ ವಿಜೃಂಭಣೆಯಿಂದ ನಡೆಯುತ್ತೆ. ಅಲ್ಲಿ ದಸರಾ ನೋಡಲು ಹೋಗೋದು ಹಲವರ ಕನಸು. ಆದರೆ ನಿಮಗೆ ಚಾನ್ಸ್ ಸಿಕ್ಕರೆ ಈ ಬಾರಿ ನೀವು ಮಂಗಳೂರು ದಸರಾ ನೋಡಲು ಬನ್ನಿ. ನಿಮ್ಮನ್ನು ಸ್ವಾಗತಿಸಲು ಮಂಗಳೂರು ದೀಪಾಲಂಕೃತಗೊಂಡಿದೆ. ಬೀದಿ ಬೀದಿಯಲ್ಲೂ ವಿದ್ಯುತ್ ದೀಪಗಳು ಜಗಮಗಿಸುತ್ತಿವೆ.

ಮಂಗಳೂರು ದಸರಾದ  (Mangalore Dasara)ವೈಭವವೇ ಬೇರೆ, ಕುದ್ರೋಳಿಯಿಂದ ಹಿಡಿದು, ಮಾರಿಗುಡಿ, ಕಾರ್ ಸ್ಟ್ರೀಟ್ ಎಲ್ಲೆಡೆ ಶಾರಾದಾ ದೇವಿಯನ್ನು ಕೂರಿಸಿ ಪೂಜೆ ಮಾಡುತ್ತಾರೆ. ಕುದ್ರೋಳಿಯ ವೈಭವವನ್ನು ಕಣ್ತುಂಬಿಕೊಳ್ಳೋದೆ ಚೆಂದ. ನೀವು ಈ ಬಾರಿ ಮಂಗಳೂರು ದಸರಾ ನೋಡಲು ಬರೋದಾದರೆ ನೀವು ಮಿಸ್ ಮಾಡದೆ ನೋಡಬೇಕಾದ ಸ್ಥಳಗಳು, ತಿನ್ನಬೇಕಾದ ಆಹಾರಗಳ ಲಿಸ್ಟ್ ಇಲ್ಲಿವೆ.

ಮಂಗಳೂರು ದಸರಾ ಅಂದ್ರೆ ಅದು ಕುದ್ರೋಳಿ ಗೋಕರ್ಣನಾಥನ ದಸರಾ. ನೀವು ಕುದ್ರೋಳಿಯಿಂದಾನೆ ನಿಮ್ಮ ದಿನವನ್ನು ಆರಂಭಿಸಬಹುದು. ಇಲ್ಲಿ ನವದುರ್ಗೆಯರ ವೈಭವವನ್ನು ನೋಡೋದೆ ಚೆಂದ. ನಂತರ ಕಾರ್ ಸ್ಟ್ರೀಟ್, ಮಾರಿಗುಡಿ, ಪೊಳಲಿ, ಕಟೀಲಿಗೂ ಹೋಗಿ ಬರಬಹುದು.

ಮಂಗಳೂರಿನ ಅಥೆಂಟಿಕ್ ಫುಡ್ ಬೇಕು ಅಂದ್ರೆ ವುಡ್ ಲ್ಯಾಂಡ್ಸ್ ಅಥವಾ ಇಂದ್ರಭವನಕ್ಕೆ ಭೇಟಿ ಕೊಟ್ಟು, ಅಲ್ಲಿ ಬನ್ಸ್ ಅಥವಾ ನೀರು ದೋಸೆಯನ್ನು ಜೊತೆ ಫಿಲ್ಟರ್ ಕಾಫಿಯನ್ನು ಕೂಡ ನೀವು ಸವಿಯಬಹುದು.

ಮಂಗಳೂರಿನ ವಿವಿಧ ದೇಗುಲಗಳಲ್ಲಿ ನವರಾತ್ರಿ ಹಬ್ಬದಂದು ಅನ್ನ ಪ್ರಸಾದ ಸೇವಿಸಬಹುದು. ಅಥವಾ ಮಂಗಳೂರಿನ ಓಶಿಯನ್ ಪರ್ಲ್ ನಲ್ಲಿ ನವರಾತ್ರಿ ಸ್ಪೆಷಲ್ ಆಹಾರ ಲಭ್ಯವಿರುತ್ತೆ. ನೀವು ಇದನ್ನು ಟ್ರೈ ಮಾಡಬಹುದು.

ಮಂಗಳೂರಿನ ಹಲವು ತಾಣಗಳಲ್ಲಿ ಪಿನಲಿಕೆಗೆ ವೇದಿಕೆ ಸಜ್ಜಾಗುತ್ತಿದೆ. ಕುಡ್ಲದ ಹಲವೆಡೆ ನೀವು ಹುಲಿ ಕುಣಿತವನ್ನು ನೋಡಿ ಎಂಜಾಯ್ ಮಾಡಬಹುದು. ಜೊತೆಗೆ ಯಕ್ಷಗಾನದ ಸೊಬಗನ್ನು ನೋಡಬಹುದು.

ಕಾರ್ ಸ್ಟ್ರೀಟ್ ನ ಬೀದಿ ಬೀದಿಯಲ್ಲಿ ಸುತ್ತಾಡುತ್ತಾ ಶಾರಾದಾ ದೇವಿಯರ ದರ್ಶನ ಮಾಡುತ್ತಾ, ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಾ, ದೈವೀಕ ಅಲೆಯಲ್ಲಿ ತೇಲಬಹುದು. ಇದರ ಜೊತೆಗೆ ಅಲ್ಲಿನ ಸ್ಟ್ರೀಟ್ ಫುಡ್ ತಿನ್ನುತ್ತಾ ಎಂಜಾಯ್ ಮಾಡಿ, ಶಾಪಿಂಗ್ ಕೂಡ ಮಾಡಬಹುದು.

ಇದೆಲ್ಲಾ ಆದ ಮೇಲೆ ಮಂಗಳೂರಿನ ಪ್ರಸಿದ್ಧ ಐಡಿಯಲ್ಸ್ ಐಸ್ ಕ್ರೀಂ ತಿನ್ನೋದನ್ನು ಮರಿಬೇಡಿ. ಇವೆಲ್ಲಾ ಸೇರಿ ನೀವು ಮಂಗಳೂರು ದಸಾರವನ್ನು ಬೆಸ್ಟ್ ಆಗಿ ಎಂಜಾಯ್ ಮಾಡಬಹುದು.

Source link

Leave a Reply

Your email address will not be published. Required fields are marked *