ನವರಾತ್ರಿಯಲ್ಲಿ ಎಐ ರೆಡ್‌ ಸೀರೆ ಹವಾ: ಮತ್ತೆ ಟ್ರೆಂಡಿಂಗ್‌ನಲ್ಲಿ ಬಾಲಿವುಡ್‌ ಸೀರೆ ಲುಕ್‌

ನವರಾತ್ರಿಯಲ್ಲಿ ಎಐ ರೆಡ್‌ ಸೀರೆ ಹವಾ: ಮತ್ತೆ ಟ್ರೆಂಡಿಂಗ್‌ನಲ್ಲಿ ಬಾಲಿವುಡ್‌ ಸೀರೆ ಲುಕ್‌

ನವರಾತ್ರಿಯಲ್ಲಿ ಎಐ ರೆಡ್‌ ಸೀರೆ ಹವಾ: ಮತ್ತೆ ಟ್ರೆಂಡಿಂಗ್‌ನಲ್ಲಿ ಬಾಲಿವುಡ್‌ ಸೀರೆ ಲುಕ್‌

ನ್ಯಾನೋ ಬನಾನ ಆ್ಯಪ್‌ನಲ್ಲಿ ಸ್ಪಷ್ಟವಾಗಿರುವ ಸೆಲ್ಫಿ ಫೋಟೋ ಹಾಕಿ ಪ್ರಾಮ್ಟ್‌ ಕೊಟ್ಟರೆ, ಅದು 90ರ ದಶಕದಲ್ಲಿ ಮಾಧುರಿ ದೀಕ್ಷಿತ್, ಸುಷ್ಮಿತಾ ಸೆನ್ ಉಟ್ಟಿರುವ ಸೀರೆ ಉಡಿಸಿ ಗೋಲ್ಡನ್ ಕಲರ್ ಲೈಟ್‌ನ ಹಿನ್ನೆಲೆ ಕೊಟ್ಟು ವಿಂಟೇಜ್ ಟಚ್ ಕೊಡುತ್ತದೆ.

ಎಐ ಕ್ರಾಂತಿ ಇದೀಗ 90ರ ದಶಕದ ಬಾಲಿವುಡ್‌ ಫ್ಯಾಶನ್‌ ಟ್ರೆಂಡ್‌ ಒಂದಕ್ಕೆ ಮರುಜೀವ ಕೊಟ್ಟಿದೆ. 90ರ ದಶಕ, 2000ನೇ ಇಸವಿಯ ಮೊದಲಾರ್ಧ ಎಂದರೆ ಅದು ಬಾಲಿವುಡ್‌ನ ರೊಮ್ಯಾಂಟಿಕ್‌ ಸಿನಿಮಾಗಳ ಯುಗ.

ಸಿನಿಮಾಗಳೆಷ್ಟು ರೊಮ್ಯಾಂಟಿಕ್‌ ಇದ್ದವೋ, ನಾಯಕಿಯರೂ ಅಷ್ಟೇ ಗ್ಲಾಮರಸ್‌ ಆಗಿದ್ದರು. ಅದರಲ್ಲೂ ಕೆಂಪು ಬಣ್ಣದ ಪಾರದರ್ಶಕ ಶಿಫಾನ್‌ ಸೀರೆ ಆ ಕಾಲದ ಟ್ರೇಡ್‌ ಮಾರ್ಕ್‌. ಇದೀಗ ಇನ್‌ಸ್ಟಾಗ್ರಾಂ ಓಪನ್‌ ಮಾಡಿದರೆ ಜೆನ್ ಜೀ ತರುಣಿಯರು ದಶಕಗಳ ಹಿಂದಿನ ನಾಯಕಿಯರ ರೆಡ್‌ ಶಿಫಾನ್‌ನಲ್ಲಿ ಮೈ ಬಳುಕಿಸುತ್ತಿರುವುದು ಎದ್ದು ಕಾಣುತ್ತಿದೆ.

ಎಐ ಪ್ಲಾಟ್‌ಫಾರ್ಮ್‌ ಗೂಗಲ್‌ ಜೆಮಿನಿಯಲ್ಲಿ ನ್ಯಾನೋ ಬನಾನ ಇಮೇಜ್‌ ಎಡಿಟಿಂಗ್‌ ಆ್ಯಪ್‌ ಇದೆ. ಇದು 3 ಡಿ ಫೋಟೋ ಎಡಿಟ್‌ಗೆ ಫೇಮಸ್‌. ಇದೀಗ ಇದರಲ್ಲಿ 90ರ ದಶಕದ ಬಾಲಿವುಡ್‌ ನಾಯಕಿಯರು ಉಡುತ್ತಿದ್ದ ವಿಂಟೇಜ್‌ ಸೀರೆ ಲುಕ್‌ ಎಡಿಟ್‌ ಸಿಕ್ಕಾಪಟ್ಟೆ ಜನಪ್ರಿಯವಾಗುತ್ತಿದೆ.

ನ್ಯಾನೋ ಬನಾನ ಆ್ಯಪ್‌ನಲ್ಲಿ ಸ್ಪಷ್ಟವಾಗಿರುವ ಸೆಲ್ಫಿ ಫೋಟೋ ಹಾಕಿ ಪ್ರಾಮ್ಟ್‌ ಕೊಟ್ಟರೆ, ಅದು 90ರ ದಶಕದಲ್ಲಿ ಮಾಧುರಿ ದೀಕ್ಷಿತ್, ಸುಷ್ಮಿತಾ ಸೆನ್ ಉಟ್ಟಿರುವ ಸೀರೆ ಉಡಿಸಿ ಗೋಲ್ಡನ್ ಕಲರ್ ಲೈಟ್‌ನ ಹಿನ್ನೆಲೆ ಕೊಟ್ಟು ವಿಂಟೇಜ್ ಟಚ್ ಕೊಡುತ್ತದೆ.

ಈಗ ಕಾಲೇಜು ಓದುತ್ತಿರುವ ಹುಡುಗಿ ಸುಷ್ಮಿತಾ ಸೆನ್ ‘ಗೊರಿ ಗೊರಿ’ ಹಾಡಿನಲ್ಲಿ ಮಿಂಚಿದಂತೆ ಮಿಂಚುತ್ತ ಚಮಕ್ ನೀಡುತ್ತಾಳೆ. ಇನ್ನೊಂದೆಡೆ ಬಾಲಿವುಡ್‌ನಲ್ಲಿ ಶ್ರದ್ಧಾ ಕಪೂರ್, ವಿದ್ಯಾ ಬಾಲನ್ ಮೊದಲಾದವರ ಕೆಂಪು ಸೀರೆಯ ಲುಕ್‌ ಫೆಸ್ಟಿವಲ್‌ ಲುಕ್ ಆಗಿ ಸಖತ್ ಟ್ರೆಂಡಿಂಗ್‌ನಲ್ಲಿದೆ.

Source link

Leave a Reply

Your email address will not be published. Required fields are marked *