Shivamogga Truck Accident: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ, 1700 ಕೋಳಿಗಳ ಪೈಕಿ 700 ಸ್ಥಳದಲ್ಲೇ ಸಾವು, ಮುಗಿಬಿದ್ದ ಜನ! | Shivamogga Sagara Taluk Truck Overturn Incident 700 Chickens Die Rav

Shivamogga Truck Accident: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ, 1700 ಕೋಳಿಗಳ ಪೈಕಿ 700 ಸ್ಥಳದಲ್ಲೇ ಸಾವು, ಮುಗಿಬಿದ್ದ ಜನ! | Shivamogga Sagara Taluk Truck Overturn Incident 700 Chickens Die Rav



ಸಾಗರ ತಾಲೂಕಿನ ಮುಂಬಾಳು ಕೆರೆ ಬಳಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 700 ಕೋಳಿಗಳು ಸಾವನ್ನಪ್ಪಿವೆ. ಬಸ್ಸಿಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಶಿವಮೊಗ್ಗ (ಜು.2): ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ಕೆರೆ ಬಳಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವೊಂದು ಪಲ್ಟಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಕಡೂರಿನಿಂದ ಸಾಗರಕ್ಕೆ ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕ್ಯಾಂಟರ್, ಎದುರಿಗೆ ಬಂದ ಬಸ್‌ಗೆ ಡಿಕ್ಕಿ ತಪ್ಪಿಸಲು ಚಾಲಕ ಯತ್ನಿಸಿದಾಗ ನಿಯಂತ್ರಣ ತಪ್ಪಿ ಕೆರೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಲಾರಿಯಲ್ಲಿದ್ದ 1700 ಕೋಳಿಗಳ ಪೈಕಿ 700 ಕೋಳಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

Mysore Bus Accident: ಮೈಸೂರಿನಲ್ಲಿ ಬಸ್ ಅಪಘಾತ: 25ಕ್ಕೂ ಹೆಚ್ಚು ಮಂದಿಗೆ ಗಾಯ

ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸ್ಥಳೀಯರು ಸಾವನ್ನಪ್ಪಿದ ಕೋಳಿಗಳನ್ನು ಕೊಂಡೊಯ್ಯಲು ಮುಗಿಬಿದ್ದ ದೃಶ್ಯ ಕಂಡುಬಂದಿದೆ. ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನ ಬಹುಭಾಗ ಆವರಿಸಿದ ಭಾರೀ ಹೊಗೆ | Fire accident near exhibition | Suvarna News

 



Source link

Leave a Reply

Your email address will not be published. Required fields are marked *