
<p><strong>ಮಂಡ್ಯ (ಜು.02): </strong>ಸಕ್ಕರೆನಾಡು ಮಂಡ್ಯದಲ್ಲಿ ದಾರುಣ ಘಟನೆಯೊಂದು ನಡೆದಿದೆ. ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ಮಹಿಳೆಯೊಬ್ಬರು ತನ್ನ 9 ವರ್ಷದ ಮಗಳನ್ನು ಸೀರೆಗೆ ನೇಣು ಬಿಗಿದು, ಕೊನೆಗೆ ತಾನೂ ಅದೇ ಸೀರೆಗೆ ಕೊರಳೊಡ್ಡಿ ಸಾವಿಗೆ ಶರಣಾಗಿದ್ದಾಳೆ. ತಾಯಿ-ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.</p><p>ಮಂಡ್ಯದ ನೆಹರು ನಗರದಲ್ಲಿ ಘಟನೆ ನಡೆದಿದೆ. ತಾಯಿ ರಶ್ಮಿ(28) ಹಾಗೂ ಮಗಳು ದಿಶಾ (9)ಮೃತ ದುರ್ದೈವಿಗಳು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮೃತ ಮಹಿಳೆ ರಶ್ಮಿ ಮತ್ತು ದಿಶಾ ಚನ್ನಪಟ್ಟಣದ ಮೂಲದವರು. ಕಳೆದ 5 ವರ್ಷದಿಂದ ಗಂಡನಿಂದ ದೂರವಾಗಿದ್ದ ರಶ್ಮಿ, ಮಂಡ್ಯ ನಗರಕ್ಕೆ ಬಂದು ಕೆಲಸ ಮಾಡುತ್ತಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಜೀವನದಲ್ಲಿ ಆದ ತೊಂದರೆಗಳಿಂದ ಮನನೊಂದಿದ್ದ ರಶ್ಮಿ, ಇದೀಗ ಮಗಳೊಂದಿಗೆ ನೇಣಿಗೆ ಶರಣಾಗಿದ್ದಾಳೆ.</p><p>ಮೃತಳ ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ, ‘ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ. ಒಂಟಿಯಾಗಿ 5 ವರ್ಷದಿಂದ ಜೀವನ ಮಾಡ್ತಿದ್ದೇನೆ. ಆದರೂ ಗಂಡ ಬೇರೆ ಮದುವೆ ಆಗುತ್ತೇನೆ, ನನ್ನ ನಿನ್ನ ಸಂಬಂಧ ಇಲ್ಲವೆಂದು ಬರೆದುಕೊಡುವಂತೆ ಒತ್ತಾಯಿಸುತ್ತಿದ್ದಾನೆ. ನನಗೆ ಈ ಜೀವನ ಸಾಕಾಗಿದೆ. ಅಮ್ಮನನ್ನ ಚೆನ್ನಾಗಿ ನೋಡಿಕೊ ಅಣ್ಣ…’ ಎಂದು ಬರೆದಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.</p>
Source link
ಮಂಡ್ಯದಲ್ಲಿ ಒಂದೇ ಸೀರೆಗೆ ಕೊರಳೊಡ್ಡಿದ ತಾಯಿ-ಮಗಳು; ಡೆತ್ ನೋಟ್‌ನಲ್ಲಿ ಬಯಲಾಯ್ತು ಸತ್ಯ!