Bihar final voter list details: ಚುನಾವಣಾ ಆಯೋಗವು ಬಿಹಾರದ ಅಂತಿಮ ಮತಪಟ್ಟಿ ಪರಿಷ್ಕರಣೆಯನ್ನು ಪ್ರಕಟಿಸಿದ್ದು, ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಸಾವು, ಸ್ಥಳಾಂತರ ಮತ್ತು ನಕಲಿ ಹೆಸರುಗಳ ಕಾರಣದಿಂದಾಗಿ ಮತದಾರರ ಸಂಖ್ಯೆ 7.42 ಕೋಟಿಗೆ ಇಳಿದಿದೆ.

ನವದೆಹಲಿ: ರಾಜಕೀಯವಾಗಿ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಬಿಹಾರ ಮತಪಟ್ಟಿ ಪರಿಷ್ಕರಣೆಯ ಅಂತಿಮ ಪಟ್ಟಿ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಅದರನ್ವಯ ಮತಪಟ್ಟಿಯಿಂದ 42 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ.

ವಿಶೇಷ ಮತಪಟ್ಟಿ ಪರಿಷ್ಕರಣೆಗೂ ಮುನ್ನ ರಾಜ್ಯದಲ್ಲಿ 7.89 ಕೋಟಿ ಮತದಾರರ ಹೆಸರು ಇತ್ತು. ಪರಿಷ್ಕರಣೆಯ ಕರಡು ವರದಿಯಲ್ಲಿ 7.24 ಕೋಟಿ ಹೆಸರು ಮಾತ್ರ ಇತ್ತು. ಅಂದರೆ 65 ಲಕ್ಷ ಹೆಸರು ಕೈಬಿಡಲಾಗಿತ್ತು. ಈ ವೇಳೆ ವಿಪಕ್ಷಗಳು ಉದ್ದೇಶಪೂರ್ವಕವಾಗಿಯೇ ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ರದ್ದುಪಡಿಸಲಾಗಿದೆ ಎಂದು ಆರೋಪಿಸಿದ್ದವು. ಅದಾದ ನಂತರದ ಅವಧಿಯಲ್ಲಿ ಬಹಳಷ್ಟು ಜನರು ದಾಖಲೆ ನೀಡಿ ತಮ್ಮ ಹೆಸರು ಸೇರ್ಪಡೆ ಮಾಡಿದ್ದಾರೆ. ಹೀಗಾಗಿ ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 7.42 ಕೋಟಿಗೆ ಏರಿದೆ.

ಮತದಾರರ ಸಾವು, ಮತದಾರರು ಬೇರೆ ಕಡೆಗೆ ತೆರಳಿರುವುದು, ಎರಡೆರೆಡು ಕಡೆ ಇದ್ದ ಹೆಸರು ತೆಗೆದು ಹಾಕಿದ ಕಾರಣ ಮತದಾರರ ಸಂಖ್ಯೆಯಲ್ಲಿ 47 ಲಕ್ಷ ಹೆಸರು ಕಡಿಮೆ ಆಗಿದೆ.ಇದರೊಂದಿಗೆ ವಿಶೇಷ ಮತಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣ ಆದಂತೆ ಆಗಿದೆ.

ಇದನ್ನೂ ಓದಿ: ನಾಲ್ವರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಲು ಯಾರು ಅರ್ಹರು? ಸಮೀಕ್ಷೆಯಲ್ಲಿ ಅಚ್ಚರಿ ಮಾಹಿತಿ ಬಹಿರಂಗ

ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೆ ದಿನಾಂಕ ಪ್ರಕಟಕ್ಕೆ ಕ್ಷಣಗಣನೆ ಆರಂಭವಾದಂತೆ ಆಗಿದೆ. 243 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಅವಧಿ ನ.22ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮೊದಲು ಚುನಾವಣೆ ನಡೆದು ಹೊಸ ಸರ್ಕಾರ ರಚನೆ ಆಗಬೇಕಿದೆ.

ಇದನ್ನೂ ಓದಿ: ಸಮೀಕ್ಷೆಯನ್ನು ಪಗಡೆಯಾಟ ಎಂದ ವಿಜಯೇಂದ್ರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

Source link
ಬಿಹಾರ ಅಂತಿಮ ಮತಪಟ್ಟಿ ಪ್ರಕಟ: 47 ಲಕ್ಷ ಹೆಸರು ರದ್ದು, ರಾಜ್ಯದಲ್ಲೀಗ 7.42 ಕೋಟಿ ಮತದಾರರು