Bigg Boss Kannada Rakshitha Shetty: ಮೊದಲ ದಿನವೇ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ತುಳುನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಇದೀಗ ಮರಳಿ ಬಂದಿದ್ದಾರೆ. ತಮ್ಮನ್ನು ಹೊರಹಾಕಿದ ಸ್ಪರ್ಧಿಗಳನ್ನು ಪ್ರಶ್ನಿಸಲು ರಣಚಂಡಿಯ ರೂಪದಲ್ಲಿ ಮತ್ತೆ ಮನೆ ಪ್ರವೇಶಿಸಿದ್ದಾರೆ.

ಮೊದಲ ದಿನವೇ ಎಲಿಮಿನೇಟ್ ಆಗಿದ್ದ ತುಳು ನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಮರಳಿ ಬಂದಿದ್ದಾರೆ. ರಕ್ಷಿತಾ ಶೆಟ್ಟಿ ಅವರನ್ನು ಮನೆಯಲ್ಲಿರುವ ಒಂಟಿಗಳು ನಾಮಿನೇಟ್ ಮಾಡಿದ್ದರು. ಇದೀಗ ವೇದಿಕೆ ಮೇಲೆ ಆಗಮಿಸಿರುವ ರಕ್ಷಿತಾ ಅಕ್ಷರಶಃ ರಣಚಂಡಿಯಾಗಿದ್ದಾರೆ.

ಮನೆಯಿಂದ ಹೊರಗಡೆ ಹೋಗುವಾದ ಸಮಾಧಾನ ಮಾಡೋದಕ್ಕೆ ಬಂದಿದ್ದರು. ತಮ್ಮ ನಿರ್ಧಾರದ ಬಗ್ಗೆ ಸ್ಟ್ಯಾಂಡ್ ತೆಗೆದುಕೊಳ್ಳಲು ಬಂದಿರಲಿಲ್ಲ. ಈಗ ಮನೆಯೊಳಗೆ ಹೋಗಿ ಪ್ರಾಪರ್ ರೀಸನ್ ಕೇಳುತ್ತೇನೆ ಎಂದು ರಕ್ಷಿತಾ ಶೆಟ್ಟಿ ಗುಡುಗಿದ್ದರು.

ನಾನು ಹೇಗೆ ಆಟ ಆಡುತ್ತೇನೆ ಎಂದು ಅವರಿಗೆ ಗೊತ್ತಿಲ್ಲ. ಕೇವಲ ಪುಸ್ತಕದ ಕವರ್ ನೋಡಿ ಜಡ್ಜ್ ಮಾಡಿದ್ದರು. ಅವರಿಗಿಂತ ಮನೆಯಲ್ಲಿರಲು ನನಗೆ ಯೋಗ್ಯತೆ ಇದೆ ಎಂದು ರಕ್ಷಿತಾ ಹೇಳಿದ್ದಾರೆ. ಸುದೀಪ್ ಸಹ ಮನೆಯೊಳಗೆ ಹೋಗುತ್ತಿರುವ ರಕ್ಷಿತಾ ಶೆಟ್ಟಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಿರಂದ ಬಿಗ್‌ಬಾಸ್ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ರು. ಈ ರೀತಿಯಾಗಿ ಕಳುಹಿಸಿದ್ದು ತಪ್ಪು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಲು ಆರಂಭಿಸಿದ್ದರು. ಇದೀಗ ಬಿಗ್‌ಬಾಸ್ ಮತ್ತೆ ರಕ್ಷಿತಾ ಅವರನ್ನು ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಥರ್ಡ್ ಕ್ಲಾಸ್ ರೀತಿ ವರ್ತಿಸಿದ್ದ, ಅವಾಜ್ ಹಾಕಿದ್ಮೇಲೆ ಬಕೆಟ್ ಹಿಡಿತಿದ್ದಾನೆ: ಸತೀಶ್ ಹೇಳಿದ್ಯಾರಿಗೆ?

ಮನೆಯಿಂದ ಹೊರ ಹೋಗುವಾಗಲೂ ಒಂದಲ್ಲ ಒಂದು ದಿನ ಎಲ್ಲರೂ ಹೋಗಬೇಕು. ಇಂದು ನಾನು ಹೋಗುತ್ತಿದ್ದೇನೆ ಎಂದು ಹೇಳಿ ರಕ್ಷಿತಾ ಶೆಟ್ಟಿ ಹೊರಬಂದಿದ್ದರು. ತಪ್ಪು ತಪ್ಪಾಗಿ ಮಾತನಾಡಿ ಕೆಲವರು ವೈರಲ್ ಆಗುತ್ತಾರೆ ಎಂಬ ನಿರೂಪಕಿ ಜಾನ್ವಿ ಮಾತಿಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸಿಗುತ್ತೋ ಇಲ್ಲೋ ಗೊತ್ತಿರಲಿಲ್ಲ, 5 ಗ್ಲಾಸ್ ಕುಡಿದು ಬಂದೆ ಎಂದ ಸ್ಪರ್ಧಿ

Source link
ರಣಚಂಡಿಯಾಗಿ ಮರಳಿ ಬಂದ ರಕ್ಷಿತಾ; ಉತ್ತರ ಕೊಡ್ತಾರಾ ಸ್ಪರ್ಧಿಗಳು? ಶುರುವಾಯ್ತು ಅಸಲಿ ಆಟ