Bigg Boss Kannada Shobha Shetty: ಅಗ್ನಿಸಾಕ್ಷಿ ಸೇರಿದಂತೆ ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಶೋಭಾ ಶೆಟ್ಟಿ ಅವರು ಈಗ ಒಂದಾದ ಮೇಲೆ ಒಂದರಂತೆ ಸಾಧನೆಯ ಏಣಿಯನ್ನು ಹತ್ತುತ್ತಿದ್ದಾರೆ. ಈಗ ಅವರು ಹೈದರಾಬಾದ್‌ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಹಾಗಾದರೆ ಏನದು?

ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲು ತಾನೇನು, ತನ್ನ ಧ್ವನಿ ಏನು ಎಂದು ತೋರಿಸಿಕೊಟ್ಟಿದ್ದ ಶೋಭಾ ಶೆಟ್ಟಿ, ಆಮೇಲೆ Boys V/s Girls ಶೋನಲ್ಲಿ ಭಾಗವಹಿಸಿದ್ದರು. ಆದರೂ ಅವರು ತೆಲುಗಿನಲ್ಲಿಯೇ ದೊಡ್ಡ ಹೆಸರು ಮಾಡಿದ್ದಾರೆ.

ಕೆಲ ವರ್ಷಗಳಿಂದ ಅವರು ತೆಲುಗು ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಸೀರಿಯಲ್, ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿಯೇ ಅವರು ಹೆಸರು ಕೂಡ ಮಾಡಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ಅವರು ತೆಲುಗಿನಲ್ಲಿಯೇ ಬ್ಯುಸಿ ಆಗುತ್ತಿದ್ದಾರೆ.

ಶೋಭಾ ಶೆಟ್ಟಿ ಅವರು ವರ್ಷದ ಹಿಂದೆ ಹೈದರಾಬಾದ್‌ನಲ್ಲಿ ನೂತನ ಫ್ಲಾಟ್ ಆರಂಭಿಸಿದ್ದರು. ಇದರ ಗೃಹಪ್ರವೇಶದ ವಿಡಿಯೋ, ಫೋಟೋಗಳನ್ನು ಕೂಡ ಹಂಚಿಕೊಂಡಿದ್ದರು.

ಇನ್ನು ಶೋಭಾ ಶೆಟ್ಟಿ ಅವರು ತೆಲುಗು ನಟ ಯಶವಂತ್ ಜೊತೆ ಎಂಗೇಜ್ ಆಗಿ ವರ್ಷಗಳಾಯ್ತು. ಸೀರಿಯಲ್‌ನಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು, ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಲು ರೆಡಿಯಾಗಿದೆ.

ಹೀಗಿರುವಾಗ ಶೋಭಾ ಶೆಟ್ಟಿ ಅವರು ಹೈದರಾಬಾದ್‌ನಲ್ಲಿ ಶೋಭಾ ಶೆಟ್ಟಿ ಡಿಸೈನರ್ ಸ್ಟುಡಿಯೋ ಆರಂಭಿಸಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಈ ಮೂಲಕ ಅವರು ಉದ್ಯಮಕ್ಕೂ ಕಾಲಿಟ್ಟಿದ್ದಾರೆ.

Source link
ತೆಲುಗಿನಲ್ಲಿ ಸಾಧನೆಯ ಏಣಿ ಹತ್ತಿದ Bigg Boss Kannada ಶೋಭಾ ಶೆಟ್ಟಿ! ಇದಪ್ಪಾ ಸಾಧನೆ ಅಂದ್ರೆ..!